

ಶ್ರೀನಿವಾಸಪುರ 1 : ವಿದ್ಯಾರ್ಥಿಗಳಿಗೆ ಬಹುತೇಕವಾಗಿ ಸುಮಾರು 25 ವರ್ಷಗಳಲ್ಲಿ ತಮ್ಮ ಜೀವನವನ್ನು ಯಾವ ರೀತಿಯಾಗಿ ನಿರ್ಧರಿಸಿಕೊಳ್ಳಬಹುದು ಎಂಬುದು ತಿಳಿಸಿಕೊಡುತ್ತದೆ. ಎಂದು ಇಒ ಕೃಷ್ಣಪ್ಪ ಹೇಳಿದರು.
ಪಟ್ಟಣದ ತ್ಯಾಗರಾಜ ಬಡವಾಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ಮತ್ತು ಸಮವಸ್ತ್ರಗಳನ್ನು ವಿತರಿಸಿ ಮಾಡಿ ಮಾತನಾಡಿದರು.
ಸರ್ಕಾರದ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಸಂಸ್ಕಾರವಂತ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದರು ಕರೆ ನೀಡಿದರು.
ಪುರಸಭೆ ಮುಖ್ಯ ಅಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ವಿದ್ಯಾರ್ಥಿ ದಸೆಯಿಂದಲೇ ಹಿರಿಯರನ್ನು , ಗುರುಗಳನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕೆಂದರು ಕೆರೆ ನೀಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನಾ ಮಾತನಾಡಿ ಸರ್ಕಾರದ ಮಧ್ಯಾಹ್ನದ ಬಿಸಿ ಊಟ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಬಳಸಿಕೊಂಡು ಉತ್ತಮವಾದ ವಿಧ್ಯಾಭ್ಯಾಸವನ್ನು ಮುಂದುವರಿಸಿಬೇಕೆಂದು ಹೇಳಿದರು.
ಕೋಲಾರ ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಕಲ್ಲಂಡೂರು ನಾರಾಯಣಸ್ವಾಮಿ ಮಾತಾನಡಿ ಸರ್ಕಾರದ ಸವಲತ್ತುಗಳೊಂದಿಗೆ ದಾನಿಗಳು ಹಾಗು ಕಂಪನಿ ವತಿಯಿಂದ ಜಿಲ್ಲಾದ್ಯಾಂತ ನೋಟ್ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ಗೆಳೆಯರ ಬಳಗದವರು ನಿರಂತರವಾಗಿ ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳು ಈ ಸದಾವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿ ವಿದ್ಯಾವಂತರಾಗಬೇಕು ಎಂದು ಸಲಹೆ ನೀಡಿದರು. ಈ ಶಾಲೆಗೆ ರಾಜ್ಯಮಟ್ಟದಲ್ಲಿ ಸ್ವಚ್ಚ ವಿದ್ಯಾಲಯ ಪುರಸ್ಕಾರ ಮತ್ತು ಅಭಿಮಾನಿ ಸಾರ್ವಜನಿಕ ಶಾಲಾ ಪ್ರಶಸ್ತಿಯನ್ನು ಪಡೆದಿರುವುದು ಹೆಮ್ಮೆಯ ವಿಚಾರ ಎಂದರು.
ಶಾಲೆಯ ಹೆಬ್ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮಕ್ಕಳಿಗೆ ಗುಲಾಬಿ ನೀಡಿ, ಸಿಹಿಹಂಚಿ, ಸ್ವಾಗತ ಕೋರಿದರು.
ಶಾಲೆಯ ಮುಖ್ಯ ಶಿಕ್ಷಕ ಬೈರೇಗೌಡ ಮಾತನಾಡಿದರು. ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್,ಶ್ರೀನಿವಾಸ್, ಎಸ್‍ಡಿಎಂಸಿ ಅಧ್ಯಕ್ಷ ಆನಂದರೆಡ್ಡಿ, ಉಪಾಧ್ಯಕ್ಷ ರಜೀಯ ಸುಲ್ತಾನ, ಸದಸ್ಯರಾದ ಮಂಜುಳ, ಶ್ರೀನಿವಾಸ್ ಶಿಕ್ಷಕರಾದ ವಿಜಯಮ್ಮ, ಶಶಿಕಲಾ, ಶ್ರೀದೇವಿ,ಗೌರಮ್ಮ, ಅಶ್ವಿನಿ, ಗೀತಾಂಜಲಿ, ರಾಮಚಂದ್ರಪ್ಪ, ಮಹೇಶ್, ಚೇತನ್, ಪ್ರಸನ್ನ, ನಾರಾಯಣಸ್ವಾಮಿ, ಬಿ.ವಿ.ನಾರಾಯಣಸ್ವಾಮಿ ಇದ್ದರು.