ಶ್ರೀನಿವಾಸಪುರ : ಪರಿಸರದ ಬಗ್ಗೆಯ ಜಾಗೃತಿ ಕಾರ್ಯಕ್ರಮಗಳು ಯಾವುದೇ ಕಾರಣಕ್ಕೂ ಹೇಳಿಕೆ ಸಿಮೀತವಾಗಬಾರದು , ಪರಿಸರದ ಮಧ್ಯೆ ಹಬ್ಬದ ರೀತಿಯಲ್ಲಿ ಆಚರಣೆಯಾಗಬೇಕಾಗಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್ ಹೇಳಿದರು.
ತಾಲೂಕಿನ ಲಕ್ಷ್ಮೀಪುರ ಕ್ರಾಸ್ನ ವಿಎಸ್ಆರ್ ಶಾಲಾವರಣದಲ್ಲಿ ಶುಕ್ರವಾರ ಕೃಷಿ ಇಲಾಖೆವತಿಯಿಂದ ವಿಶ್ವ ಪರಿಸರ ದಿನಾಚರಣೆ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಸಸಿ ನೆಟ್ಟು ಅದನ್ನ ಕಾಪಾಡುವ ನಿಟ್ಟಿನಲ್ಲಿ ಸನ್ನಧರಾಗಬೇಕು. ಈಗಾಗಲೇ ಪರಿಸರ ಕಲುಷಿತಗೊಂಡಿದ್ದು, ಕಲುಷಿತಗೊಂಡಿರುವುದಕ್ಕೆ ನಾನಾ ಕಾರಣಗಳು ಇವೆ. ಒಂದು ರೀತಿಯಲ್ಲಿ ನಾಗರೀಕತೆಯ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡಲಾಗಿದೆ. ಒಂದು ಕಡೆ ಕೈಗಾರಿಕಾರಣ, ಇನ್ನೊಂದೆ ಮಾನವ ಸ್ವಾರ್ಥದಿಂದ ಪರಿಸರವನ್ನು ಹಾಳುಮಾಡಲಾಗಿರುವುದರಿಂದ ಈಗ ಏನ್ನೆಲ್ಲಾ ಪರಸರದಿಂದ ಆಗಬಹುದಾದ ಅನಾಹುತಗಳನ್ನು ಅನುಭವಿಸುತ್ತಿದ್ದೇವೆ.
ಪರಿಸರ ಅಸಮತೋಲದಿಂದ ಅತಿವೃಷ್ಟಿ, ಅನಾವೃಷ್ಟಿಗಳಿಂದ ಮನುಕುಲವು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಪರಿಸರವನ್ನು ಉಳಿಸಲು ಕೇವಲ ಸರ್ಕಾರಿಂದ ಸಾಧ್ಯವಿಲ್ಲ. ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳು ಕೈಜೋಡಿಸಬೇಕಾಗಿದೆ. ಈಗಿನ ಮಕ್ಕಳು ವಿದ್ಯಾರ್ಥಿ ದಸೆಯಿಂದಲೇ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರದ ಆದೇಶದಂತೆ ಕೃಷಿ ಇಲಾಖೆ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಹೊಗಳಗರೆಯ ತೋಟಗಾರಿಕೆ ಸಂಶೋಧನ ಕೇಂದ್ರದ ಸಹಾಯಕ ಪ್ರಾದ್ಯಾಪಕ ಡಾ.ಜಗದೀಶ್ ಮಾತನಾಡಿ 1972 ರಲ್ಲಿ ವಿಶ್ವ ಸಂಸ್ಥೆ ಪರಿಸರದ ಸಮತೋಲವನ್ನು ನೀವಾರಿಸಲು ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನ ಜಾರಿಗೆ ತಂದಿದ್ದು, ಪರಿಸರ ಎಂದರೆ ಕೇವಲ ಗಿಡಗಳನ್ನು ನೆಟ್ಟು ಬೆಳಸುವುದು ಅಲ್ಲ. ಮಣ್ಣಿ ಸಂರಕ್ಷಣೆ, ಮಣ್ಣಿನ ಫಲವತ್ತತೆ ಉಳಿಸಬೇಕು. ಪ್ರಾಣಿ ಪಕ್ಷಿಗಳನ್ನು ಉಳಿಸಬೇಕು. ನೀರಿನ ಕಲುಷಿತನ್ನು ನಿಲ್ಲಿಸಬೇಕು ಹಾಗು ನೀರನ್ನು ಮಿತವಾಗಿ ಬಳಸಬೇಕು. ಇವೆಲ್ಲಾ ಪರಿಸರದ ಒಂದು ಭಾಗ.
ಇತ್ತೀಚಿಗೆ ಜಾಗತಿಕ ತಾಪಮಾನ ಇಷ್ಟೊಂದು ಏರಿಕೆಯಾಗಲು ಕಾರಣ ಪರಿಸರವನ್ನು ನಾಶಮಾಡಿರುವುದೇ, ಇದರ ಹೊಣೆ ನಾವೇ,ಆಗಾಗಿ ಇದರ ನಿರ್ವಹಣೆಯನ್ನ ನಾವೇ ಮಾಡಿ ಪರಿಸರವನ್ನು ಉಳಿಸಲು ಎಚ್ಚೆತ್ತೆಕೊಳ್ಳಬೇಕಾಗಿದೆ ಎಂದು ಹೇಳಿದರು.
ಇದೇ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪರಿಸರವನ್ನು ಉಳಿಸುವ ಸಲುವಾಗಿ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು. ಹಾಗೂ ಪರಿಸರ ಜಾಗೃತಿ ಜಾಥವನ್ನು ಲಕ್ಷ್ಮೀಪುರ ಕ್ರಾಸ್ನಲ್ಲಿ ಹಮ್ಮಿಕೊಳ್ಳಲಾಯಿತು.
ನೆಲವಂಕಿ ಹೋಬಳಿ ಕೃಷಿ ಅಧಿಕಾರಿ ಈಶ್ವರಪ್ಪ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಸುರೇಶ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಎಸ್ .ಮಮತ, ಎಸ್.ವಿ.ಶಿಲ್ಪ, ಅರ್ಚನ, ಬಾಲರಾಜು, ವಿಎಸ್ಆರ್ ಶಾಲೆಯ ಪ್ರಾಂಶುಪಾಲ ಸುರೇಶ್, ಕೃಷಿ ಇಲಾಖೆಯ ಆತ್ಮ ಸಿಬ್ಬಂದಿ ಸುರೇಶ್ ಇದ್ದರು.