ಕುಂದಾಪುರ, ಜು.7: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಪರಿಸರ ದಿನಾಚರಣೆ ಮತ್ತು ವನಮಹತ್ಸೋವವನ್ನು ಜು.7 ರಂದು ಆಚರಿಸಲಾಯಿತು, ಭಾನುವಾರ ಬೆಳಗ್ಗೆ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಇಗರ್ಜಿಯಲ್ಲಿ ಬಲಿದಾನ ಅರ್ಪಿಸಿ ಪರಿಸರದ ಉಳಿವಿಗಾಗಿ ಸಂದೇಶ ನೀಡುತ್ತಾ ‘ಗೀಡ ನೆಟ್ಟು ಪೋಷಿಸಿರಿ, ಕೇವಲ ನಡುವ ಕಾಟಾಚಾರ ಬೇಡ, ಹೂವುವಿನ ಗೀಡ, ಫಲ ನೀಡುವವ ಗೀಡಗಳನ್ನು ನಡಿರಿ, ಅದರಿಂದ ಸಿಗುವ ಫಲ, ಪಕ್ಷಿಗಳಾದರೂ ತಿನ್ನಲಿ, ಪ್ರಾಣಿ ಪಕ್ಷಿಗಳಿಗೂ ಆಹಾರ ಅಗತ್ಯವಿದೆಯೆಂದು ತೀಳಿಯೋಣ, ಅವರು ಪ್ರಕøತಿ ಭಾಗ, ಕೊಳಚೆ ಮಾಡಬೇಡಿ, ನೀರು ಪೋಲು ಮಾಡಬೇಡಿ, ನೀರನ್ನು ಉಳಿಸಿ, ನೀರು ಸಾಧ್ಯವಾದಷ್ಟು ಇಂಗಿಸಿ, ನಮಗೆ ಆಮ್ಲಜನಕ ಬೇಕು ಅದಕ್ಕೆ ಗೀಡಮರಗಳನ್ನು ಬೆಳೆಸೋಣ, ಪ್ರಕøತಿ ಉಳಿಸುವ ಜವಾಬ್ದಾರಿ ನಮ್ಮೇಲರ ಮೇಲಿದೆ ಎಂದು ವಿವರವಾಗಿ ಪ್ರಕೃತಿ ಬಗ್ಗೆ ಜಾಗ್ರತಿ ನೀಡಿದರು.
ನಂತರ ಫಲ ಪುಷ್ಪಗಳ ಗೀಡಗಳನ್ನು ವಿತರಿಸಲಾಯಿತು. ಸಾಂಕೇತಿಕವಾಗಿ ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ಧರ್ಮಗುರುಗಳಿಗೆ ಗೀಡವನ್ನು ವಿತರಿಸಿದರು. ಕಾರ್ಯಕ್ರಮದ ಸಂಯೋಜಕಿ ಆಶಾ ಕರ್ವಾಲ್ಲೊ ಕಾರ್ಯಕ್ರಮ ನೆಡೆಸಿಕೊಟ್ಟು ವಂದಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೊ, ಪಾಲನಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ, ಕಥೊಲಿಕ್ ಸಭಾದ ಸದಸ್ಯರು ಧರ್ಮಕೇಂದ್ರದವರು ಉಪಸ್ಥಿತರಿದ್ದರು.