ಭಂಡಾರ್ಕಾರ್ಸ್ ಪ.ಪೂ.ಕಾಲೇಜು ಕುಂದಾಪುರ ಹಾಗೂ ಕುಂದಪ್ರಭ ಸಂಸ್ಥೆಯ ಸಹಯೋಗದಲ್ಲಿ “ಜ್ಞಾನೋದಯ” ಎಂಬ ಸಾಮಾನ್ಯ ಜ್ಞಾನ ಸ್ಪರ್ಧೆ ಸೆ.9 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಈ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದ್ದು ಪ್ರತಿಯೊಂದು ಪ್ರೌಢಶಾಲೆಯಿಂದ ಕನಿಷ್ಟ 5 ಹಾಗೂ ಗರಿಷ್ಟ 10 ಮಂದಿ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ.
ಈ ಸಾಮಾನ್ಯಜ್ಞಾನ ಸ್ಪರ್ಧೆ ಕುಂದಾಪುರ-ಬೈಂದೂರು ತಾಲೂಕಿನ ವಿಷಯದಲ್ಲೇ ನಡೆಯುತ್ತದೆ. ಸ್ಪರ್ಧೆಯ ಪ್ರಶ್ನೆಗಳು ತಾಲೂಕಿನ ಪ್ರಕೃತಿ, ಭೌಗೋಳಿಕ, ಇತಿಹಾಸ, ರಾಜಕೀಯ, ವೃತ್ತಿ, ಉದ್ಯಮ, ಸಾಹಿತ್ಯ, ಸಂಗೀತ, ಸಂಸ್ಕøತಿ, ಚಲನಚಿತ್ರ, ಮಹಾಪುರುಷರು, ನದಿ, ಸಾಗರ ವಿಷಯಗಳೊಂದಿಗೆ ನಿತ್ಯೋಪಯೋಗಿ ವಸ್ತುಗಳು ಹೂವು, ಹಣ್ಣು ಆಹಾರ ಪದಾರ್ಥಗಳ ಬಗ್ಗೆಯೂ ಇರುತ್ತದೆ. ಹೆಚ್ಚು ಅಂಕ ಪಡೆದ ಶಾಲೆಗೆ “ಜ್ಞಾನೋದಯ ಪಾರಿತೋಷಕ” ನೀಡಲಾಗುತ್ತದೆ. ವೈಯಕ್ತಿಕವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಆಕರ್ಷಕ ಬಹುಮಾನದೊಂದಿಗೆ ಗೌರವ ನೀಡಲಾಗುತ್ತದೆ. ಪ್ರಥಮ 25 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಗುತ್ತದೆ. ಭಾಗವಹಿಸುವವರು ಡಾ. ಜಿ. ಎಂ. ಗೊಂಡ, ಪ್ರಾಂಶುಪಾಲರು, “ಜ್ಞಾನೋದಯ ಸ್ಪರ್ಧೆ”, ಭಂಡಾರ್ಕಾರ್ಸ್ ಪ.ಪೂ. ಕಾಲೇಜು ಕುಂದಾಪುರ-576201 ಇವರಿಗೆ ಆಗಸ್ಟ್ 31ರೊಳಗೆ ಹೆಸರು ಕಳುಹಿಸಿಕೊಡಬೇಕೆಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ತಿಳಿಸಿದ್ದಾರೆ.