ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆ ಮತ್ತು ಪಿ ಯು ವಿದ್ಯಾರ್ಥಿಗಳಿಗೆ “ಆಂಗ್ಲ ಭಾಷಾ ಬರವಣಿಗೆ
ಕೌಶಲ್ಯಗಳ ಅಭಿವೃದ್ಧಿ” ಕುರಿತು ಒಂದುದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ತರಬೇತುದಾರರಾಗಿ ಆಗಮಿಸಿದ ಮಂಗಳೂರಿನ ಖ್ಯಾತ ಲಿಪಿಶಾತ್ರಜ್ಞರಾದ ಸ್ಟಾನಿ ಡಿಸೋಜಾ ( ಇಂಜಿನೀಯರಿಂಗ್
ಪದವಿಧರರು, ಗ್ರಾಪೋಲಜಿ & ಗ್ರಾಪೋತೆರಪಿ ಹೈದರಾಬಾದ್, ಉಪನ್ಯಾಸಕರು, ಕಿರುತೆರೆ ನಟರು,) ವಿದ್ಯಾರ್ಥಿಗಳಿಗೆ
ಬರವಣಿಗೆ, ಚಿಹ್ನೆಗಳು, ಸಂಕೇತಗಳು, ವೃತ್ತ, ರೇಖೆಗಳು, ಸ್ಮರಣೆಗೆ ಸಹಾಯವಾಗುವ ಉಪಾಯಗಳು, ಗ್ರಾಪೋಲಜಿ ಮತ್ತು ಹ್ಯಾಂಡ್ರೈಟಿಂಗ್, ಪ್ರೀ ಹ್ಯಾಂಡ್ರೈಟಿಂಗ್ ವಿಶ್ಲೇಷಣೆ, ಸುಂದರವಾದ ಕೈಬರಹ, ಸಹಿಮಾಡುವ ಶೈಲಿ, ಗಾತ್ರ, ಅಂತರ, ಅಕ್ಷರ ಸುತ್ತುವಿಕೆ, ಗೆರೆ ಎಳೆಯುವುದು, ಚುಕ್ಕೆಗಳ ಬಳಕೆ, ಬೆರಳುಗಳ ಚಲನೆ ಇತ್ಯಾದಿಗಳ ಕುರಿತು ಹಲವಾರು ಚಟುವಟಿಕೆಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಶ್ನೆಗಳ ಮೂಲಕ ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಮತ್ತು ಸಮಸ್ಯೆಗಳಿಲ್ಲದೆ ಅತ್ತ್ಯುತ್ತಮವಾದ ಮಾಹಿತಿಯನ್ನು ನೀಡಿದರು ಕಾರ್ಯಾಗಾರದಲ್ಲಿ ಆಡಳಿತಮಂಡಳಿಯ
ಅಧಿಕಾರಿಧ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ರೆನಿಟಾ ಲೋಬೊ,ಮುಖ್ಯಶಿಕ್ಷಕ ಡಾ. ರವಿದಾಸ್ ಶೆಟ್ಟಿ, ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು
ಉಪಸ್ಥಿತರಿದ್ದರು ಶಿಕ್ಷಕಿ ಅವಿನಾ ಡಿಸೋಜಾ ಸ್ವಾಗತಿಸಿ, ನಿರೂಪಿಸಿದರು, ಉಪನ್ಯಾಸಕಿ ಶಾಂತಿ ವಂದಿಸಿದರು.