ನಂದಳಿಕೆ ಬೋರ್ಡ್ ಶಾಲೆಯಲ್ಲಿ 1 ನೇ ತರಗತಿಯಿಂದ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ : ನಿತ್ಯಾನಂದ್ ಅಮೀನ್

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು


ಸರಕಾರಿ ಶಾಲೆಯಲ್ಲಿ ದಾಖಲಾತಿಗಳು ಕಡಿಮೆ ಆಗುತ್ತಿದ್ದು ಈ ಹಿನ್ನಲೆಯಲ್ಲಿ ನಂದಳಿಕೆ ಗ್ರಾಮದ ಒಂದು ಕನ್ನಡ ಶಾಲೆಯು ಈಗಾಗಲೇ ಮುಚ್ಚಲ್ಪಟ್ಟಿದೆ .ಈಗ ಉಳಿದಿರುವ ಒಂದು ಕನ್ನಡ ಶಾಲೆ 100 ವರ್ಷವನ್ನು ಪೂರೈಸುತ್ತಿದ್ದು  ಪ್ರಸಕ್ತ ವರ್ಷ ಒಟ್ಟು 75  ಮಕ್ಕಳು ಕಲಿಯುತ್ತಿದ್ದಾರೆ . ನಂದಳಿಕೆ ಗ್ರಾಮದ ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಆಂಗ್ಲ ಮಾದ್ಯಮ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಆಂಗ್ಲ ಮಾದ್ಯಮ ಶಾಲೆಗೆ ಸೇರಿಸುತ್ತಿದ್ದಾರೆ ಎಂದು ಇತ್ತೀಚೆಗೆ ನಡೆಸಿದ ಸರ್ವೆಯಲ್ಲಿ ತಿಳಿದು ಬಂದಿದ್ದು ಈ ಹಿನ್ನಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ,ಗ್ರಾಮಪಂಚಾಯತ್ , ಹಳೆ ವಿದ್ಯಾರ್ಥಿ ಸಂಘ , ಹಾಗೂ ದಾನಿಗಳ ನೆರವಿನಿಂದ ಈ ವರ್ಷದಿಂದ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸನ್ನು  1 ನೇ ತರಗತಿಯಿಂದಲೇ ಪ್ರಾರಂಭಿಸಲಾಗುವುದು ಹಾಗೂ ಸರಕಾರಿ ಶಾಲೆ ಮಕ್ಕಳು  ಯಾವುದೇ ಖಾಸಗಿ ಆಂಗ್ಲ ಮಾದ್ಯಮ ಶಾಲಾ ಮಕ್ಕಳಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ನಿರೂಪಿಸುವ ನಿಟ್ಟಿನಲ್ಲಿ ನಂದಳಿಕೆ ಗ್ರಾಮ ಪಂಚಾಯತ್ ಈ ಒಂದು ವಿನೂತನ ಕಾರ್ಯಕ್ಕೆ ಮುಂದಾಗಿದೆ ಎಂದು ನಂದಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ್  ಅಮೀನ್ ಅವರು ಬೋರ್ಡ್ ಶಾಲೆಯಲ್ಲಿ ಪೋಷಕರ ,ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ವಿಶೇಷ ಸಭೆಯಲ್ಲಿ ತಿಳಿಸಿದರು .
ಇದೇ ಸಂಧರ್ಭದಲ್ಲಿ ಬೋರ್ಡುಶಾಲೆಯನ್ನು ಅಮೃತ ಶಾಲಾ ಸೌಲಭ್ಯ ಯೋಜನೆಗೆ  ಶಿಫಾರಸ್ಸು ಮಾಡುವಂತೆ ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ.ವಿ . ಸುನಿಲ್ ಕುಮಾರ್ ರವರಿಗೆ ಮನವಿ ನೀಡುವುದಾಗಿ ತಿಳಿಸಿದರು.

       ನಂದಳಿಕೆ ಗ್ರಾಮ ಪಂಚಾಯತ್
ಕಾರ್ಕಳ ತಾಲೂಕು  ಉಡುಪಿ ಜಿಲ್ಲೆ 576111