

ಶ್ರೀನಿವಾಸಪುರ : ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಲ್ಲಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ದೇವರ ಸೇವೆ ಮಾಡುವುದರಿಂದ ದೊರೆಯುವ ಶಾಂತಿ ಬೇರಾವ ಕೆಲಸದಲ್ಲೂ ದೊರೆಯುವುದಿಲ್ಲ ಎಂದು ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ನೌಕರರ ಭವನದಲ್ಲಿ ಗುರುವಾರ ಮುಜರಾಯಿ ದೇವಾಲಯಗಳ ಆರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ವತಿಯಿಂದ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ದೇವಾಲಯಗಳಲ್ಲಿ ಅರ್ಚಕರ ವೃತ್ತಿಯನ್ನ ಮಾಡುವುದು ಕಷ್ಟದ ಕೆಲಸ ಆದರೂ ಸಹ ದೇವಾಲಯಗಳನ್ನು ಅಭಿವೃದ್ಧಿಯಾಗುತ್ತಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳನ್ನು ಗ್ರಾಮದ ಎಲ್ಲಾ ಸಮುದಾಯಗಳ ಸಹಕಾರ ಪಡೆದು ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು. ದೇವಾಲಯಗಳ ಅಭಿವೃದ್ಧಿಗೆ ಹಾಗು ಧಾರ್ಮಿಕ ಕಾರ್ಯಗಳಿಗೆ ನಮ್ಮ ಸಹಕಾರವು ಇರುತ್ತದೆ ಎಂದು ನುಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ರಂಗರಾಜನ್ ಮಾತನಾಡಿ ಅರ್ಚಕರು ಸಂಘನೆಯದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ತಾಲೂಕಿನ ಕೇಂದ್ರದಲ್ಲಿ ಒಂದು ಸಮುದಾಯಭವನ್ನ ನಿರ್ಮಿಸಿಕೊಡಲು ತಹಶೀಲ್ದಾರ್ ರವರಿಗೆ ಒತ್ತಾಯಿಸಿದರು.
ಇದೇ ಸಮಯದಲ್ಲಿ 2025 ನೂತನ ವರ್ಷದ ಕ್ಯಾಲೆಂಡರ್ ಹಾಗು ಅರ್ಚಕರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಹಿರಿಯ ಅರ್ಚಕರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಯಿತು. ಉಪತಹಶೀಲ್ದಾರ್ ಕೆ.ಎಲ್.ಜಯರಾಮ್, ಮುಖಂಡ ಕೆ.ಕೆ.ಮಂಜುನಾಥ್, ತಾಲೂಕು ಸಂಘದ ನಿಕಟಪೂರ್ವ ಖಜಾಂಚಿ ಡಿ.ರಾಜಣ್ಣ, ಮುಜರಾಯಿ ಗುಮಾಸ್ತೆ ಶೈಲಾಜ, ಎಫ್ಡಿಎ ರಾಜೇಶ್ವರಿ, ಜಿ.ಶ್ರೀನಿವಾಸಚಾರ್, ಉಪಾಧ್ಯಕ್ಷ ಕೆ.ವೆಂಕಟರಮಣಚಾರ್, ಜನಾರ್ಧನಾಚಾರ್, ಜಂಟಿ. ಕಾರ್ಯದರ್ಶಿ ವೈ.ಆರ್.ಶ್ರೀನಾಥ್ಚಾರ್, ಅರ್ಚಕರಾದ ಅರುಣ್ಕುಮಾರ್, ಕೆ.ನಾಗರಾಜಾಚಾರ್, ನವೀನ್, ಪಿ.ಪ್ರಸನ್ನಕುಮಾರ್, ವಿ.ಸುಬ್ರಮಣ್ಯಂ, ಹೆಚ್.ಜಿ.ನಾಗರಾಜ್ರಾವ್, ಆರ್.ಲಕ್ಷ್ಮೀನಾರಾಯಣಚಾರ್, ವೆಂಕಟರಮಣರಾವ್, ಎಸ್.ಶಿವನಂಜಯ್ಯ ಹಾಗು ಇತರರು ಇದ್ದರು.