ಕುಂದಾಪುರದ ಉಮಾ ಪ್ರಕಾಶ್ ಶೆಟ್ಟಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ 2020-2023 ಸಾಲಿನ ಉಮಾದೇವಿ ಶಂಕರ್ ರಾವ್ ದತ್ತಿ ಪ್ರಶಸ್ತಿಯು ಕುಂದಾಪುರದ ಉಮಾಪ್ರಕಾಶ್ ಶೆಟ್ಟಿ ಅವರ ‘ತೆರೆಯೋ… ಬಾಗಿಲನು’ ಸಣ್ಣ ಕಥೆಗೆ ಲಭಿಸಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ಜು.23ರ ಭಾನುವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಬಾಲ್ಯದಿಂದಲೂ ಪರಿಸರ ಮತ್ತು ಸಾಹಿತ್ಯ ಪ್ರೇಮಿಯಾಗಿರುವ ಉಮಾ ಪ್ರಕಾಶ್ ಶೆಟ್ಟಿ ಅವರು ತಮ್ಮ ತಂದೆ ದಿವಂಗತ ದಾಸರಬೆಟ್ಟು ವೆಂಕಪ್ಪಶೆಟ್ಟಿ ಅವರ ಜೀವಮಾನದ ಸಾಧನೆ ಕುರಿತ ನೈಜ ಕಥೆ ಆಧರಿಸಿ ‘ತೆರೆಯೋ… ಬಾಗಿಲನು’ ಕಥೆ ಬರೆದಿದ್ದಾರೆ.


ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾದ ಎಚ್.ಎಲ್. ಪುಷ್ಪಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಮತ್ತು ರಾಣಿ ಸತೀಶ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಿ.ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ, ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಇದ್ದರು. ಮೂಲತ ಕುಂದಾಪುರದವರಾದ ಉಮಾ ಪ್ರಕಾಶ್ ಶೆಟ್ಟಿಯವರು, ಕುಂದಾಪುರ ಭಂಡಾರ್ಕಾರ್ಸ ಕಾಲೇಜಿನ ಹಳೆಯ ವಿಧ್ಯಾರ್ಥಿನಿಯೂ ಹೌದು ಹಾಗೂ ಕುಂದಾಪುರ ರೋಟರಿ ಇನ್ನರ್ವೀಲ್ ಸೌತ್, ಸದಸ್ಯೆ ಕೂಡಾ ಆಗಿರುತ್ತಾರೆ, ಅವರ ಪತಿ ಟಿ. ಪ್ರಕಾಶ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿರುತ್ತಾರೆ.