ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ಡಿಸೆಂಬರ್ 21 : ಕೇವಲ ತುರ್ತು ಸಂದರ್ಭದಲ್ಲಿ ಅಲ್ಲದೆ ಜೀವನದ ಪ್ರತಿ ಹಂತದಲ್ಲೂ ಮಾನವೀಯ ಗುಣಗಳನ್ನು ಅಳವಡಿಕೊಳ್ಳುವುದು ಒಳಿತು. ಈ ಮೂಲಕ ಉತ್ತಮ ಉದಾತ್ತಾ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶರಾದ ಎಂ. ರೇವಣಸಿದ್ದಪ್ಪ ತಿಳಿಸಿದರು.
ನಗರದ ಭಾರತೀಯ ರೆಡ್ ಕ್ರಾಸ್ ಕಾರ್ಯಾಲಯದಲ್ಲಿ ಇಂದು ಸಂಸ್ಥೆಯ ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಉಚಿತ ದಿನಸಿ ಕಿಟ್ ಗಳನ್ನು ಸಾರ್ವಜನಿಕರಿಗೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತಾನಾಡುತ್ತಿದ್ದರು
ಮಾನವ ಜನ್ಮ ದೊಡ್ಡದು. ಇದರ ಜೊತೆಗೆ ಯಾವುದೇ ಪಠ್ಯ ಸಹಪಠ್ಯದಲ್ಲಿರುವ ಮಾನವೀಯ ಮೌಲ್ಯಗಳನ್ನು ಹುಟ್ಟು ಸಾವಿನ ನಡುವೆ ಎಲ್ಲಾ ಕಡೆಗಳಲ್ಲೂ ಅಳವಡಿಸಿಕೊಳ್ಳುವುದರಿಂದ ಜೀವನ ಸಾರ್ಥಕ ಸೇವೆ ಮಾಡಿದ ಅಬನುಭವ ಆಗುತ್ತದೆ ಎಂದರು
ಆಕಸ್ಮಿಕ ಅವಘಡಗಳು ಆರೋಗ್ಯ ವೈಯಕ್ತಿಕ ಸಮಸ್ಯೆಗಳು ಎದುರಾದಾಗ ಹೆಚ್ಚರ ವಹಿಸುವುದಕ್ಕಿಂತ ಆ ಸಂದರ್ಭದ ಪರಿಹಾರೋಪಾಯಗಳನ್ನು ನೀಡುವುದು ಮಾನವೀಯ ಸೇವೆ ಎನ್ನಿಸಿಕೊಳ್ಳುತ್ತದೆ. ಈ ದಿಸೆಯಲ್ಲಿ ಮಾನವ ಧರ್ಮಕ್ಕಿಂತ ಶ್ರೇಷ್ಠ ಧರ್ಮ ಬೇರೊಂದು ಇಲ್ಲ ಎಂದರು.
ಸಮಾರಂಭ ಅಧ್ಯಕ್ಷತೆ ವಹಿಸಿದ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಭಾಪತಿ ಎನ್ ಗೋಪಾಲಕೃಷ್ಣ ಗೌಡ ಮಾತಾನಾಡಿ ಸಮಾಜ ಮತ್ತು ಸಮುದಾಯದ ಸೇವೆಗೆ ಯಾವುದೇ ಜಾತಿಯಿಲ್ಲ ಧರ್ಮವಿಲ್ಲ ರಾಜಕೀಯವಿಲ್ಲ ಹಾಗಾಗಿ ಸೇವೆಯೇ ನಮ್ಮ ಮೂಲ ಮಂತ್ರವಾಗಬೇಕು. ಸಂಸ್ಥೆಯ ಶತಮಾನೋತ್ಸವ ಸಮಾರಂಭದಲ್ಲಿ ಫಲಾನುಭವಿಗಳನ್ನು ಗುರುತಿಸಿ ಆಹಾರ ಕಿಟ್ ಗಳನ್ನು ನೀಡಲಾಗುತ್ತದ್ದು ಇದರ ಸದುಪಯೋಗ ಆಗಬೇಕು. ಆರೋಗ್ಯ ಸಮಾಜ ನಿರ್ಮಾಣ ಆಗಬೇಕು ಎಂದರು.
ಸಮಾರಂಭದಲ್ಲಿ ಸಂಸ್ಥೆಯ ರಾಜ್ಯ ಆಡಳಿತ ಮಂಡಳಿ ಸದಸ್ಯ ಎಸ್ ಸಿ ವೆಂಕಟಕೃಷ್ಣಪ್ಪ, ಉಪಸಭಾಪತಿ ಆರ್ ಶ್ರೀನಿವಾಸನ್, ಕಾರ್ಯದರ್ಶಿ ನಂದೀಶ್ ಕುಮಾರ್, ಕೋಶಾಧ್ಯಕ್ಷ ಜಿ. ಶ್ರೀನಿವಾಸ್, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಶರಣಪ್ಪ ಗಬ್ಬೂರು, ನಿರ್ದೇಶಕರುಗಳಾದ ನಾಗೇಂದ್ರ್ ಪ್ರಸಾದ್, ಮುರುಳೀಧರ, ಸಾದತ್ ನವೀದ್, ಶ್ರೀರಾಮ್ ರೆಡ್ಡಿ, ವೆಂಕಟೇಶಪ್ಪ, ಸೀನಪ್ಪ, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.