

ಉಡುಪಿ ; ಮಾನವೀಯತೆ ಮರೆತ ಉಡುಪಿ ನಾಗರಿಕ ಸಮಾಜ ಪರಶುರಾಮ ದೇವರ ಮೂರ್ತಿ ಹೆಸರಲ್ಲಿ ಕೋಟಿ ಕದ್ದವನನ್ನು ಓಟು ಹಾಕಿ ಗೆಲ್ಲಿಸುತ್ತಾರೆ. ಉಡುಪಿಯ ಜೀವನಾಡಿಯಂತಿದ್ದ ಸಕ್ಕರೆ ಕಾರ್ಖಾನೆಯ ಸಂಪತ್ತು ಕೊಳ್ಳೆ ಹೊಡೆದವರನ್ನು ಸಮರ್ಥನೆ ಮಾಡುತ್ತಾರೆ. ಹಗರಣಗಳ ಮೇಲೆ ಹಗರಣ ಮಾಡಿದವರಿಗೆ ಇಲ್ಲಿ ಹಿಂಬಾಲಕರು ನಾಯಿ ಬಾಲದಂತೆ ಛವಣಿ ಬಿಸುತ್ತಾರೆ. ಆದರೆ ನೆಲದಲ್ಲಿ ಕಾಲಡಿಗೆ ಬಿದ್ದ ನಾಲ್ಕು ಮೀನುಗಳನ್ನು ಪದಾರ್ಥಕ್ಕೆಂದು ಹೆಕ್ಕಿಕೊಂಡು ಹೋದರೆ ಮರಕ್ಕೆ ಕಟ್ಟಿಹಾಕಿ ಬಡಿಯುತ್ತಾರೆ.
ಇಂದು ಉಡುಪಿ ಮಲ್ಪೆ ಬಂದರಿನಲ್ಲಿ ಮಹಿಳೆಯೋರ್ವರನ್ನು ಮೀನು ಕದ್ದರೆಂಬ ಕಾರಣ ನೀಡಿ ಮರಕ್ಕೆ ಕಟ್ಟಿಹಾಕಿ ಹಲ್ಲೆನಡೆಸಿದ ಪ್ರಕರಣವು ಇಡೀ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಇದು ಅತ್ಯಂತ ಖೇದಕರ ಹಾಗೂ ನಾಚಿಕೆ ಸಂಗತಿ. ನಾಗರೀಕ ಸಮಾಜ ಒಟ್ಟಾಗಿ ಖಂಡಿಸಬೇಕಾದ ಘಟನೆಯಿದು.
ನಮ್ಮಲ್ಲಿ ಒಂದು ಗಾದೆ ಮಾತಿದೆ, ಕೊಂದ ಪಾಪ ತಿಂದು ಹರಿಹಾರ ಅನ್ನುವುದು. ಹೊಟ್ಟೆ ಹಸಿವು ಉರಿ ನೀಗಿಸಲು, ಯಾವುದೇ ಪಶು, ಪಕ್ಷಿ, ಪ್ರಾಣಿ, ಚರ ಗಳನ್ನು ಕೊಲ್ಲುವುದು ಮತ್ತು ತಿನ್ನುವುದು ಪಾಪ ಅಲ್ಲಾ ಅಂತ ಇದು ಸೂಚಿಸುತ್ತದೆ. ಆದರೆ ನಮ್ಮಲ್ಲಿ ವಿವೇಚನೆ ಅನ್ನುವುದು ಸತ್ತಿದೆ. ಮನುಷ್ಯ ಮೃಗದಂತೆ ವರ್ತನೆ ತೋರುವುದು ವಿಷಾದನೀಯ.
ಇತ್ತೀಚಿಗಿನ ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಯಲ್ಲಿ ಈ ರೀತಿಯ ಸಾರ್ವಜಣಿಕ ತಳಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಇಲ್ಲಿನ ಜನತೆಯ ಮನೋಭಾವದಲ್ಲಿ ಉಂಟಾದ ಬದಲಾವಣೆಯನ್ನು ಸೂಚಿಸುತ್ತಿವೆ. ಇದು ಹೀಗೇ ಮುಂದುವರಿದರೆ ಕೆಡುಕನ್ನು ಮಾಡುವುದು ಸಮಾಜವನ್ನು ಒಡೆಯುವುದು ಖಂಡಿತಾ.
ಮಲ್ಪೆಬಂದರಿನ ಘಟನೆಯು ಸ್ವಾತಂತ್ರ್ಯಪೂರ್ವ ಜಾತಿ ಹಾಗೂ ದುಡ್ಡಿನ ತೋಳ್ಬಲವುಳ್ಳವರು ಅಶಕ್ತರ, ಬಡವರ ಮೇಲೆ ನಡೆಸುವ ಅಮಾನವೀಯ ಹಲ್ಲೆ, ಹತ್ಯೆಗಳನ್ನು ನೆನಪಿಸುತ್ತದೆ.
ಆಚಾರ-ವಿಚಾರಗಳ ಮೂಲಕ ವರ್ಣ ಬೇಧ ಸಂಸ್ಕೃತಿಯನ್ನು ಕರಾವಳಿಯಲ್ಲಿ ಹೇರಲು ಹಪತಪಿಸುತ್ತಿರುವ ಸಂಘಟನೆಗಳ, ಪಕ್ಷಗಳ ಸಂಪರ್ಕ ಹೊಂದಿದವರೇ ಈ ರೀತಿಯ ಅಮಾನುಷ ಹಲ್ಲೆಗಳನ್ನು ನಡೆಸುವಲ್ಲಿ ಮುಂದು ಎಂದು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಮನೋಸ್ಥಿತಿ ವಿಸ್ತಾರ ಮತ್ತು ಬಲಿಷ್ಠವಾಗದಂತೆ ತಡೆಯಬೇಕಿದೆ. ನಾಗರಿಕ ಸಮಾಜವು ಈ ಕುರಿತು ಜಾಗೃತರಾಗಬೇಕಾಗಿದೆ.
ಕರಾವಳಿಯ ವಿದ್ಯಾವಂತರೇ, ನೈಜ ವಿದ್ಯೆ ಪಡೆದಿದ್ದಲ್ಲಿ ಎಚ್ಚೆತ್ತುಕೊಳ್ಳಿ. ಮೆದುಳು ಕಂಕುಳಲ್ಲಿ ಇಲ್ಲಾ. ವಾಟ್ಸಪ್ಪ್ ಯೂನಿವರ್ಸಿಟಿ ಪಠ್ಯ, ಪಠ್ಯ ಅಲ್ಲಾ ಅನ್ನುವ ಸತ್ಯ ಅರಿಯಿರಿ. ಜಾತಿ, ಧರ್ಮ, ಶಾಲು, ಗೋವು, ಲವ್ವು, ಮೇಲು, ಕೀಳು, ಅನ್ನುವ ಮನೋಭಾವದಿಂದ ಹೊರಬಂದು ಮಾನವೀಯತೆ ಬ್ರತಾತ್ವಕ್ಕೆ ಬೆಲೆಕೊಡಿ. ಇಲ್ಲವಾದಲ್ಲಿ ಮುಂದೆ ತಮ್ಮ ಮೌನ ಸಮ್ಮತಿಯಾಗಿ, ತಮಗೂ ಏಟು ತಪ್ಪದು ನೆನಪಿಡಿ, 🙏 ಕಾರ್ಕಳ ಮಹಿಳಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರು ಅನಿತಾ ಡಿಸೋಜ ಬೆಳ್ಮಣ್