

ಕುಂದಾಪುರ,ಎ.8: ಇತಿಹಾಸ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ (ಎ.7) ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು
ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರಥ್ಹಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವರ ವಾಕ್ಯಗಳ ಪಠಣ, ಕೀರ್ತೆನೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿದಿಯನ್ನುü ಆಚರಿಸಲಾಯಿತು.
ಕಟ್ಕೆರೆ ಬಾಲಯೇಸು ಆಶ್ರಮದ ಮುಖ್ಯಸ್ಥರಾದ ಧರ್ಮಗುರು ವಂ| ಆಲ್ವಿನ್ ಸಿಕ್ವೇರಾ ಪಾಸ್ಕ ಹಬ್ಬದ ದಿವ್ಯ ಬಲಿದಾನವನ್ನು ಅರ್ಪಿಸಿ “ಯೇಸುವಿನ ಪ್ರೀತಿ ಪಾತ್ರರಾದವರು ಯೇಸುವಿನ ಶವವನ್ನು ಇಟ್ಟಿದ್ದ ಕಲ್ಲು ಗೋರಿಯ ಹತ್ತಿರ ಬರುವಾಗ ಗೋರಿಗೆ ಅಡ್ಡಲಾಗಿ ಇಟ್ಟಿದ್ದ ಕಲ್ಲು ದ್ವಾರದ ಚಪ್ಪಡಿಯು ಸರಿಯಲಾಗಿತ್ತು, ಅದರ ಮೇಲೆ ಕಣ್ಣು ಕೊರೈಸುವ ಬಿಳಿ ಬಟ್ಟೆಯುಟ್ಟ ದೇವ ದೂತನು ಕುಳಿತುಕೊಂಡಿದ್ದನ್ನು, ಇದನ್ನು ಯೇಸುವಿನ ಪ್ರೀತಿಪಾತ್ರರು ಅಚ್ಚರಿಯಿಂದ ನೋಡುವಾಗ, ದೇವದೂತನು ಹೆದರಬೇಡಿ, ಯೇಸು ಹೇಳಿದಂತೆ, ಆತನು ಮೂರನೇ ದಿನ ಪುನರುಥ್ಥಾನಗೊಂಡಿದ್ದಾನೆ, ಈ ಶುಭ ಸಂದೇಶವನ್ನು ಎಲ್ಲರಿಗೂ ಹಂಚೀರಿ ಎಂದು ತಿಳಿಸುತ್ತಾನೆ, ಆದರೆ ಯೇಸುವನ್ನು ಕೊಂದವರು ಯೇಸುವಿವ ಶವವನ್ನು ಯೇಸುವಿನ ಕಡೆಯವರು ಕದ್ದುಕೊಂಡು ಹೋಗಿದ್ದಾರೆ ಎಂದು ಗಾಳಿ ಸುದ್ದಿ ಹಬ್ಬಿಸುತ್ತಾರೆ, ಆದರೆ ಯೇಸುವಿನ ಶವಕ್ಕೆ ಉಡಿಸಿದ ಬಟ್ಟೆ, ಅಲ್ಲಿಯೆ ಇದ್ದು ಅದು ಚೊಕ್ಕವಾಗಿ ಮಡಚಿ ಇಟ್ಟಿದ್ದರು, ಮೂರು ದಿನಗಳ ನಂತರ ಶವ ಕೊಳೆಯುತ್ತದೆ, ಅಂತ ಶವ ಹಾಗೇಯೆ ಕೊಂಡುಹೋಗಲು ಅಸಾಧ್ಯ, ಅದನ್ನು ಬಟ್ಟೆ ಸಮೇತವಾಗಿ ತೆಗೆದುಕೊಂಡು ಹೋಗಬೇಕಿತ್ತು, ಆದರೆ ಹಾಗೇ ಮಾಡಲಿಲ್ಲ, ಅಂದರೆ ಯೇಸು ನೀಜವಾಗಿಯೂ ಪುನರುಥ್ಥಾನಗೊಂಡಿದ್ದನು, ಅಲ್ಲದೆ ಪುನರುಥ್ಥಾನಗೊಂಡಿದ್ದ ನಂತ ಅನೇಕ ಸಲ ಶಿಸ್ಯರ ದ್ರಷ್ಟಿಗೆ ಬಿದ್ದಿದ್ದುನು” ಎಂದು ತಿಳಿಸಿದರು.
“ಹುಟ್ಟು ಪಾಪಿಗಳಾದ ನಮ್ಮನ್ನು ಚಿಕ್ಕವರಿರುವಾಗ ಪವಿತ್ರ ಜಲದಿಂದ ಸ್ನಾನ ಮಾಡಿ ಶುದ್ಧಿಕರಿಸುವಾಗ ನಮಗೆ ಬಿಳಿ ಬಟ್ಟೆ ಉಡಿಸಲಾಗುತ್ತದೆ, ಅದಕ್ಕೆ ಹಿಂದಿನ ಕಾಲದಲ್ಲಿ ಸಿಂಧೊರ ಎನ್ನುತಿದ್ದರು, ಯೇಸುವಿನ ಶವಕ್ಕೆ ಕೂಡ ಬಿಳಿ ಬಟ್ಟೆ ಸಿಂಧೊರ ಉಡಿಸಲಾಗಿತ್ತು, ಅದನ್ನೆ ಯೇಸು ನಮಗೆ ಒಂದು ಸಂಕೇತವಾಗಿ ಬಿಟ್ಟು ಹೋಗಿದ್ದಾರೆ. ಆ ಸಿಂಧೊರವು ನಮ್ಮ ಕ್ರೈಸ್ತ ಧರ್ಮಸಭೆಗೆ ಪವಿತ್ರ ಉಡುಗೆಯಾಗಿದೆ, ನಾವೂ ನಮ್ಮನ್ನು ಪಾಪ ಕ್ರತ್ಯಗಳಿಂದ ದೂರವಿರಲು, ಕೂಡ ಈ ಸಿಂಧೊರದಂತಹ ಉಡುಗೆಯನ್ನು ನಮ್ಮ ಆತ್ಮಗಳಿಗೆ ಉಡಿಸಿಕೊಳ್ಳಬೇಕು. ನಾವು ಶುದ್ದ ಚಿಂತನೆಯುಳ್ಳವರಾಗಿದ್ದು, ಶುದ್ದ ಕ್ರತ್ಯಗಳಿಂದ ಜೀವಿಸಬೇಕು, ಯೇಸು ನಮಗೆ ಮಹಿಮೆಭರಿತ ಪವಿತ್ರ ಉಡುಗೆಯನ್ನು ಉಡಿಸಿದ್ದಾರೆ, ಆ ಉಡುಗೆಯ ಸಹಾಯದಿಂದ ನಮ್ಮನ್ನು ಹೊಲಸಾಗದಂತೆ ನಮ್ಮನ್ನು ಕಾಪಾಡಲು ಆ ಯೇಸುವೇ ನಮಗೆ ಶಕ್ತಿ ನೀಡಲಿ” ಎಂದು ಅವರು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಜಲವನ್ನು ಪವಿತ್ರೀಕರಿಸಲಾಯಿತು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಫಾಸ್ಕ ಹಬ್ಬದ ಧಾರ್ಮಿಕ ಕ್ರಿಯೆಗಳಲ್ಲಿ ಸಹಕರಿಸಿ ಬಲಿದಾನದಲ್ಲಿ ಭಾಗಿಯಾದರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ದೀರ್ಘವಾದ ಕಿರ್ತನೆಯನ್ನು ಹಾಡಿದ್ದು ವೀಶೆಷವಾಗಿತ್ತು. ಕೊನೆಯಲ್ಲಿ ಅವರು “450 ವರ್ಷಕ್ಕೂ ಹೆಚ್ಚು ಚರಿತ್ರೆಯುಳ್ಳ ಈ ಇಗರ್ಜಿಯಲ್ಲಿ ಅಂದಿನಿಂದ ಇಂದಿನವರೆಗೆ ಈ ಧಾರ್ಮಿಕ ವಿಧಿಗಳು ನಡೆದುಕೊಂಡು ಬಂದಿವೆ ಎಂದು ಹೇಳಲು ಹೆಮ್ಮೆಯಾಗುತ್ತದೆ.” ಎಂದು ಹೇಳುತ್ತಾ ಭಕ್ತಾಧಿಗಳು ಶಿಸ್ತು ಭಕ್ತಿಯಿಂದ ಈ ಆಚರಣೆಯಲ್ಲಿ ಭಾಗಿಯಾಗಿದ್ದಕ್ಕೆ, ಧನ್ಯವಾದಗಳನ್ನು ಅರ್ಪಿಸಿದರು. ಈ ಆಚರಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಹಬ್ಬದ ಶುಭಾಷಯಗಳನ್ನು ನೀಡಿದರು. ಈ ಸಂದರ್ಭದಲ್ಲಿ ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದರು.




































































































