

ಕುಂದಾಪುರ,ಎ.20: “455 ವರ್ಷ ಇತಿಹಾಸ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಎ.19 ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು
ಚರ್ಚಿನ ಮೈದಾದಲ್ಲಿ ಕತ್ತಲಿನಲ್ಲಿ ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರುತ್ಥಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವಾಲಯದೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿದಿಯನ್ನು ಆಚರಿಸಲಾಯಿತು.
ಬ್ರಹ್ಮಾವರ ಹೋಲಿ ಫೆಮಿಲಿ ಚರ್ಚಿನ ಧರ್ಮಗುರು ವಂ| ನೆಲ್ಸನ್ ಲೋಬೊ ಪಾಸ್ಕ ಹಬ್ಬದ ದಿವ್ಯ ಬಲಿದಾನವನ್ನು ಅರ್ಪಿಸಿ “ಶಿಲುಭೆಯ ಮೇಲೆ ಸತ್ತ ನಂತರ, ಅವರ ಶಿಸ್ಯರು ಎಲ್ಲವೂ ಕೊನೆಗೊಂಡಿತು ಎಂದು ನಿರಾಶೆ ಪಟ್ಟರು. ಆದರೆ ನಾನು ಮೂರು ದಿವಸದಲ್ಲಿ ಪುನರ್ಜೀವಂತನಾಗುತ್ತೆನೆ ಎಂದು ಹೇಳಿದ ಹಾಗೆ, ಪುನರ್ಜೀಂವತನಾಗಿ ಶಿಸ್ಯರಿಗೆ ಗೋಚರಿಸಿದರೊ, ಹಳೆ ಒಡಬಂಡಿಕೆಯ ಕಾಲದ ಆ ಶಿಸ್ಯರು, ಹೊಸ ಒಡಬಂಡಿಕೆಯ ಮನುಶ್ಯರಾಗಿ ಪರಿವರ್ತನೆ ಹೊಂದಿದರು. ಪಟ್ಟ ಶಿಸ್ಯ ಸಂತ ಪೀಟರ್ ಮರಳಿನ ಮೇಲೆ ಮನೆ ಕಟ್ಟಿಕೊಂಡತಿದ್ದ ಆತ ಯೇಸು ಹೇಳಿದ ಹಾಗೆ ನೀನು ಬಂಡೆಕಲ್ಲು ಆಗುತ್ತೀಯ, ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುತ್ತೇನೆ ಎಂದು ಹೇಳಿದಂತೆ, ಸಂತ ಪೀಟರ್ ಬಂಡೆ ಕಲ್ಲಾಗಿ ಪರಿವರ್ತನೆಗೊಳ್ಳುತ್ತಾನೆ. ಮುಂದೆ ಯೇಸು ಕ್ರಿಸ್ತರ ಶಿಸ್ಯರೆಲ್ಲರೂ ಯೇಸುವಿನ ಶುಭ ವಾತ್ರೆಯನ್ನು ಪ್ರಪಂಚದೆಲ್ಲಡೆ ಸಾರುತ್ತಾರೆ ಮತ್ತು ಯೇಸುವಿಗಾಗಿ ಏಕಾಂಗಿಯಾಗಿ ಸಾಯಲು ಸಿದ್ದರಾಗುತ್ತಾರೆ ಮತ್ತು ಹಲವು ಶಿಸ್ಯರು ಯೇಸುವಿಗಾಗಿ ಜೀವ ನೀಡಿ ಹುತಾತ್ಮರಾಗುತ್ತಾರೆ. ಒಂದು ವೇಳೆ ಯೇಸುಸ್ವಾಮಿ ಪುನರ್ಜೀವಂತನಾಗಿರುತಿದ್ದರೆ, ಲೋಕ ನಮ್ಮ ದೇವರನ್ನು ಸತ್ತ ದೇವರೆಂದು ಅವಮಾನಿಸುತಿದ್ದರು, ಆದರೆ ನಮ್ಮ ದೇವರು ಜೀವಂತ ದೇವರು. ಯೇಸು ಕ್ರಿಸ್ತರು ಮರಣದ ಮೇಲೆ ಜಯಿಸಿ, ನಮಗೂ ಸತ್ತ ನಂತರ ಸ್ವರ್ಗರಾಜ್ಯದಲ್ಲಿ ಪುನರ್ಜೀವಂತರಾಗುತ್ತೀರಿ ಎಂದು ಆಶ್ವಾಸನೆ ನೀಡುತ್ತಾರೆ, ಅದಕ್ಕಾಗಿ ನಾವು ಸಂತೋಷ ಪಡಬೇಕು. ಅದಕ್ಕಾಗಿ ನಾವು ಯೇಸು ಕ್ರಿಸ್ತರು ನಮ್ಮಗೆ ತಿಳಿಸಿದ ಮಾರ್ಗದಲ್ಲಿ ಜೀವಿಸಬೇಕು” ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಜಲವನ್ನು ಪವಿತ್ರೀಕರಿಸಲಾಯಿತು. ಚರ್ಚಿನ ಧರ್ಮಗುರು ಅ। ವಂ|ಪೌಲ್ ರೇಗೊ ಫಾಸ್ಕ ಹಬ್ಬದ ಧಾರ್ಮಿಕ ಕ್ರಿಯೆಗಳಲ್ಲಿ ಸಹಕರಿಸಿ ಬಲಿದಾನದಲ್ಲಿ ಭಾಗಿಯಾಗಿ ಈ ಆಚರಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಹಬ್ಬದ ಶುಭಾಷಯಗಳನ್ನು ನೀಡಿದರು. ಪವಿತ್ರ ಹಬ್ಬದ ಆಚರಣೆಯಲ್ಲಿ ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ನಾ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಮತ್ತು ಧರ್ಮಭಗಿನಿಯರು, ಗುರಿಕಾರರು, ಪಾಲನಮಂಡಳಿ ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳಿಗೆ ಹಾಜರಿದ್ದರು. ಭಕ್ತಾಧಿಗಳಿಗೆ ಈಸ್ಟರ್ ಎಗ್ ನೀಡಲಾಯಿತು.












































































































