ಕುಂದಾಪುರ,ಮಾ.31: ಇತಿಹಾಸ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ (ಮಾ.30) ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು
ಚರ್ಚಿನ ಮೈದಾದಲ್ಲಿ ಕತ್ತಲಿನಲ್ಲಿ ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರುತ್ಥಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವಾಲಯದೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿದಿಯನ್ನುü ಆಚರಿಸಲಾಯಿತು.
ಕಟ್ಕೆರೆ ಬಾಲಯೇಸು ಆಶ್ರಮದ ಧರ್ಮಗುರು ವಂ| ಜೋ ತಾವ್ರೊ ಪಾಸ್ಕ ಹಬ್ಬದ ದಿವ್ಯ ಬಲಿದಾನವನ್ನು ಅರ್ಪಿಸಿ “ಯೇಸು ಕ್ರಿಸ್ತರ ಜೊತೆ 3 ವರ್ಷಗಳಿಂದ ಇದ್ದು ಅವರ ತತ್ವ, ಭೋಧನೆ, ಪವಾಡಗಳನ್ನು ಅನಭವಿಸಿದ ಶಿಸ್ಯರೆಲ್ಲರೂ, ಯೇಸುವಿನ ಬಂದನ ಆದ ಕೂಡಲೇ ಅವರನ್ನು ಬಿಟ್ಟು ಪಲಾಯನಗೊಂಡರು, ಅವರ ಕಷ್ಟ ಕಾಲದಲ್ಲಿ ಅವರು ನೆರವಿಗೆ ಬರಲಿಲ್ಲ, ಮುಖ್ಯ ಶಿಸ್ಯ ಪೀಟರ್ ಕೂಡ ಯೇಸುವನ್ನು ನಿರಾಕರಿಸಿದ, ಯೇಸುವಿಗೆ 170 ಮಂದಿ ಶಿಸ್ಯರಿದ್ದರು, ಆದರೆ ಅವರೆಲ್ಲರೂ ಮುಂದೆ ಯೇಸುವಿನ ಧರ್ಮರಾಜ್ಯವನ್ನು ಜಗತ್ತಿನಾದ್ಯಂತ ಶ್ರೀಮಂತವಾಗಿ ಬೆಳಗಿಸಿದರು, ಅವರ ಪರಿವರ್ತನೆಗೆ ಕಾರಣ ಯೇಸುವಿನ ಪುನರುತ್ಥಾನ ! ಯೇಸುವಿನ ವೈರಿಗಳು ಯೇಸುವನ್ನು ಶಿಲುಭೆ ಮರಣ ಕೊಟ್ಟು ಕೊಂದರೂ, ಯೇಸು ಹೇಳಿದಂತೆ ಪುನರುತ್ಥಾನಗೊಂಡಿದ್ದ. ಆತ ಮರಣದ ಮೇಲೆ ಜಯಿಸಿದ, ಮರಣ ಆತನ ಮುಂದೆ ಸೋತಿತು. ಯೇಸುವು ನಮ್ಮ ಪಾಪಗಳಿಗಾಗಿ ಶಿಲುಭೆ ಮರಣಕ್ಕೆ ಗುರಿಯಾಗಿ, ಜಯಿಸಿ ಲೋಕದ ಬೆಳಕಾದ, ನಾವು ಸಾಮಾನ್ಯರು ಈ ಜಗದ ಸುಖ ಸಂತೋಷಕ್ಕೆ ಪಾಪಗಳನ್ನು ಮಾಡುತ್ತೇವೆ, ಅದರಿಂದ ಮುಕ್ತಿ ಪಡೆದು ಉತ್ತಮ ಜೀವನ ನೆಡಸಲು, ಪುನರುತ್ಥಾನಗೊಂಡ ಯೇಸು ನಮಗೆ ಪ್ರೇರಣೆಯಾಗಲಿ’ ಎಂದು ಅವರು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಜಲವನ್ನು ಪವಿತ್ರೀಕರಿಸಲಾಯಿತು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಫಾಸ್ಕ ಹಬ್ಬದ ಧಾರ್ಮಿಕ ಕ್ರಿಯೆಗಳಲ್ಲಿ ಸಹಕರಿಸಿ ಬಲಿದಾನದಲ್ಲಿ ಭಾಗಿಯಾದರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ದೀರ್ಘವಾದ ಕಿರ್ತನೆಯನ್ನು ಹಾಡಿ ವೀಶೆಷವಾಗಿತ್ತು. ಕೊನೆಯಲ್ಲಿ ಅವರು “454 ವರ್ಷಕ್ಕೂ ಹೆಚ್ಚು ಚರಿತ್ರೆಯುಳ್ಳ ಈ ಇಗರ್ಜಿಯಲ್ಲಿ ಅಂದಿನಿಂದ ಇಂದಿನವರೆಗೆ ಈ ಧಾರ್ಮಿಕ ವಿಧಿಗಳು ನಡೆದುಕೊಂಡು ಬಂದಿವೆ ಎಂದು ಹೇಳಲು ಹೆಮ್ಮೆಯಾಗುತ್ತದೆ.” ಎಂದು ಹೇಳುತ್ತಾ ಭಕ್ತಾಧಿಗಳು ಶಿಸ್ತು ಭಕ್ತಿಯಿಂದ ಈ ಆಚರಣೆಯಲ್ಲಿ ಭಾಗಿಯಾಗಿದ್ದಕ್ಕೆ, ಧನ್ಯವಾದಗಳನ್ನು ಅರ್ಪಿಸಿದರು. ಈ ಆಚರಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಹಬ್ಬದ ಶುಭಾಷಯಗಳನ್ನು ನೀಡಿದರು. ಪವಿತ್ರ ಹಬ್ಬದ ಆಚರಣೆಯಲ್ಲಿ ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ನಾ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಮತ್ತು ಧರ್ಮಭಗಿನಿಯರು, ಗುರಿಕಾರರು, ಪಾಲನಮಂಡಳಿ ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳಿಗೆ ಹಾಜರಿದ್ದರು. ಭಕ್ತಾಧಿಗಳಿಗೆ ಈಸ್ಟರ್ ಎಗ್ಗ್ ಮತ್ತು ಪಾನಿಯವನ್ನು ನೀಡಲಾಯಿತು.