ಕುಂದಾಪುರದಲ್ಲಿ ಪಾಸ್ಖ ಹಬ್ಬ – ಕ್ರಿಸ್ತನು ಗೋರಿಯಿಂದ ಎದ್ದ,ಆದರೆ ನಾವು ನಮ್ಮ ಗೋರಿಗಳಿಂದ ಎದ್ದಿದೇವೆಯೆ : ಫಾ|ವಿಜಯ್

JANANUDI.COM NETWORK


ಕುಂದಾಪುರ,ಎ.5: 450 ರ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ದ ಅತೀ ಪುರಾತನ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಭಾನುವಾರ ಯೇಸು ಕ್ರಿಸ್ತರು ಶುಭ ಶುಕ್ರವಾರದಂದು ಶಿಲುಭೆ ಮರಣ ಹೊಂದಿ ಮೂರನೇ ದಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿಯಿಂದ ಚರ್ಚ್ ಒಳಗಡೆ ಆಚರಿಸಲಾಯಿತು.
ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರಥ್ಹಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು.
ಎರಡನೆ ಭಾಗವಾಗಿ ದೇವರ ವಾಕ್ಯಗಳ ವಿಧಿ ನಡೆಯಿತು. ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಟ್ಟು ಅವರು ಸಂದೇಶ ನೀಡುತ್ತಾ “ಕ್ರಿಸ್ತನು ಜೀವಂತ ಇರುವಾಗಲೇ ಹೇಳಿದ್ದ ನಾನು ಮೂರನೇ ದಿವಸ ಜೀವಂತವಾಗುತ್ತೇನೆ, ಅದರಂತೆ ಕ್ರಿಸ್ತನು ಪುನರ್‍ಜೀವಂತ ಗೊಂಡಿದ್ದಾನೆ. ಅವನ ಶವ ಯಾರಾದರು ಅಪಹರಿಸಿ ಯೇಸು ಜೀವಂತಗೊಂಡಿದ್ದಾನೆಂದು ಸುಳ್ಳು ಹೇಳಬಹುದೆಂದು ಯೇಸುವಿನ ವೈರಿಗಳು ಯೇಸುವಿನ ಶವ ಇಟ್ಟಿದ ಕೋರೆಗೆ ಸೈನಿಕರನ್ನು ಪರಹೆ ಇಟ್ಟಿದರು, ಮತ್ತೆ ಅದಕ್ಕೆ ಬಲವಾದ ಶಿಲೆಯನ್ನು ಅಡ್ಡ ಇಟ್ಟಿದ್ದರೂ, ಆತನು ಮರಣದ ಮೇಲೆ ಜಯ ಸಾಧಿಸಿ ಪುನರ್ ಜೀವಂತವಾಗಿ ತನ್ನ ಭಕ್ತರಾದ ಮಹಿಳೆಯರಿಗೆ ಆತ ಗೋಚರಿಸಿದ, ವೈರಿಗಳು ಆತನ ಶವವನ್ನು ಹುಡುಕಿದರೂ ಆತನ ಶವ ಸಿಗಲೇ ಇಲ್ಲಾ, “ಸಾವ್ಲ” ಎಂಬವನು ಕ್ರಿಸ್ತನ ಕಡು ವಿರೋಧಿಯಾಗಿದ್ದು ಕೈಸ್ತರನ್ನು ಕೊಂದು ನಾಶ ಮಾಡುತ್ತೇನೆ ಶಪಥ ಮಾಡಿ ಕ್ರೈಸ್ತರಿಗೆ ಕಠಿಣವಾದ ಹಿಂಸಿಸಿದಾತ, ಆತ ಕ್ರಿಸ್ತನ ಒಂದೇ ಮಾತಿಗೆ ಬದಲಾಗಿ ಆತನ ಪುನರ ಜೀವಂತವನ್ನು ನಂಬಿ, ನಂತರ ಬಹು ದೊಡ್ಡ ಕ್ರೈಸ್ತ ಪ್ರಚಾರಕನಾಗಿ, ಎಲ್ಲಾ ಜನಾಂಗಗಳಿಗೆ ಕ್ರೈಸ್ತ ಪ್ರಚಾರಕಾನಾಗಿ ಬೆಳೆದು ಧರ್ಮಸಭೆಯಲ್ಲಿ ಪ್ರಮುಖ ಸ್ಥಾನ ಗಳಿಸಿಕೊಂಡಿದ್ದಾನೆ.’ ಎಂದು ನಾವು ನೆನಪಿನಲ್ಲಿಡ ಬೇಕಾಗಿದೆ “ಕ್ರಿಸ್ತನು ಗೋರಿಯಿಂದ ಎದ್ದ, ಆದರೆ ನಾವು ನಮ್ಮ ಗೋರಿಗಳಿಂದ ಎದ್ದಿದೇವೆಯೆ? ನಾವು ಅಹಂಕಾರ, ಮತ್ಸರ, ಸಿಟ್ಟು, ದ್ವೇಷ ಎಂಬ ಗೋರಿಗಳಲ್ಲಿ ಬಿದ್ದಿರುವ ನಾವು ಮೇಲೆಳಬೇಕು. ಈ ಫಾಸ್ಕ ಹಬ್ಬದ ವೇಳೆ ನಾವು ಪರರ ಪ್ರೀತಿ ಎಷ್ಟು ಮಾಡಿದ್ದೆವೆ, ನಾವು ಎಷ್ಟು ಜನರ ಕಣ್ಣಿರನ್ನು ಒರೆಸಿದ್ದೆವೆ,ನಾವು ಎಷ್ಟು ಪರಿವರ್ತನೆ ಹೊಂದಿದ್ದೆವೆ ಎಂಬು ಮುಖ್ಯವಾಗಿದೆ’ ಎಂದು ಅವರು ನುಡಿದರು.
ಜಲವನ್ನು ಪವಿತ್ರೀಕರಿಸಲಾಯಿತು. ಪ್ರಾಂಶುಪಾಲ ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಫಾಸ್ಕ ಹಬ್ಬದ ಬಲಿದಾನದಲ್ಲಿ ಭಾಗಿಯಾದರು, ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಭಾಗಿಯಾಗಿ ಶುಭಾಷಯಗಳನ್ನು ನೀಡಿ ವಂದಿಸಿದರು.