ಶ್ರೀನಿವಾಸಪುರ : ಈ ಹಿಂದೆ ವಿಧಾನಸಭೆ ಚುನಾವಣೆ ಸಮಯದಲ್ಲಿ ಯಾವ ಸಭೆಯಲ್ಲಿ ನೋಡಿದರು ಜನಸಾಗರವೇ ತುಂಬಿ ತುಳುಕುತ್ತಿತ್ತು . ಅಂದು ಜನಸಾಗರವನ್ನು ನೋಡಿ ನಾನು ಗೆದ್ದೆ ಗಲ್ಲುತ್ತೇನೆ ಎಂದು ಆಶಭಾವನೆಯನ್ನು ಹೊತ್ತಿದ್ದೆ ಆದರೆ ಫಲಿತಾಂಶವು ಬಂದ ನಂತರ ನನ್ನ ಆಶಭಾವನೆ ಭಗ್ನಗೊಂಡಿತು ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ರಾಯಲ್ಪಾಡು ಹೋಬಳಿಯ ಗೌನಿಪಲ್ಲಿ ಗ್ರಾಮದ ಬಸ್ನಿಲ್ದಾಣದ ಬಳಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು.
೯೧ ವರ್ಷ ವಯಸ್ಸಿನ ಮಾಜಿ ಪ್ರಧಾನಿಗಳಾದ ದೇವೆಗೌಡರು ನರೇಂದ್ರ ಮೋದಿ ಗೆಲ್ಲಿಸಿ ಅಂತ ಹೇಳುತ್ತಾರಲ್ಲಾ ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸುತ್ತಾ, ಜನಸಾಮಾನ್ಯ ಬಳಸುವ ದಿನಸಿ ಪದಾರ್ಥಗಳು ಬೆಲೆ ಹೆಚ್ಚಾಗಿ ಮಾಡಿರುವುದಕ್ಕಾ, ರೈತರು ಕೃಷಿ ಉಪಕರಣಗಳ ಬೆಲೆ ಜಾಸ್ತಿ ಮಾಡಿರುವುದಕ್ಕಾ, ಗ್ಯಾಸ್, ಪೆಟ್ರೋಲ್, ಡೀಸಲ್ ಬೆಲೆ ಜಾಸ್ತಿ ಮಾಡಿರುವುಕ್ಕಾ ಎಂದು ದೇವೆಗೌಡರಿಗೆ ಟಾಂಗ್ ನೀಡಿದರು.
ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಮತವನ್ನು ಮಾರಿಕೊಳ್ಳಬೇಡಿ ಎನ್ನುತ್ತಾ, ನನ್ನ ಜೀವ ಇರುವವರೆಗೂ ನಿಮ್ಮ ಪಾದ ಬಳಿ ಇರುತ್ತೇನೆ. ನಾನು ನನ್ನ ಕುಟುಂಬಕ್ಕೆ ಆಸ್ತಿ , ಅಂತಸ್ತು ಮಾಡಿಕೊಡಲು ರಾಜಕೀಯಕ್ಕೆ ಬಂದವನಲ್ಲ. ಗೌತಮ್ ನನ್ನ ಮಗನ ತರಹ ನನಗೆ ಯಾವ ರೀತಿಯಲ್ಲಿ ಅಭಿಮಾನವನ್ನು ಇಟ್ಟಿದ್ದೀರೋ ಅದೆ ಅವರ ಮೇಲೆ ಅಭಿಮಾನವಿರಲಿ. ೫ ವರ್ಷ ನಿಮ್ಮ ಜೀತದಾಳಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಾನೆ ಹಾಗು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಗೌತಮ್ಗೆ ಮತವನ್ನು ನೀಡುವುದರ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೌತಮ್ ಮಾತನಾಡಿ ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರವು ನುಡಿದಂತೆ ನಡೆಯದೆ , ದೇಶದ ಜನರಿಗೆ ಮೋಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ನುಡಿದಂತೆ ನಡೆಯುವಂತೆ ಐದು ಗ್ಯಾರಂಟಿಗಳನ್ನು ಈಡೆರಿಸುತ್ತಿದೆ ಎಂದರು. ನಿಮ್ಮ ರಕ್ಷಣೆಗಾಗಿ ಹಾಗು ನಿಮ್ಮ ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡುವಂತೆ ಮನವಿ ಮಾಡುತ್ತಾ, ನೀವು ಹಾಕುವಂತಹ ಪ್ರತಿ ಮತವು ದೇಶದ ಭವಿಷ್ಯಕ್ಕಾಗಿ ಎಂದು ನುಡಿದರು.
ರಾಜ್ಯ ದಲಿತ ಎನ್ ಮುನಿಸ್ವಾಮಿ ,ಮುಖಂಡರಾದ ಸುಧಾಮ್, ಗೋಪಾಲ್, ವಿಜಯ ನರಸಿಂಹ ಚಿಂತಾಮಣಿ, ಜಿ.ಪಂ.ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬುಷು ಸಾಬ್. ಕೋಚಿಮುಲ್ ನಿರ್ದೇಶಕ ಎನ್ ಹನುಮೇಶ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ .ಅಶೋಕ್, ಯುವ ಮುಖಂಡ ಗಾಂಡ್ಲಲ್ಲಿ ದರ್ಶನ್,ದಳಸನೂರು ಹರಿ, ಶಂಕರಪ್ಪ,ಸಂಜಯ್ ರೆಡ್ಡಿ, .ಕೆ.ಮಂಜು,ಪುರಸಭೆ ಸದಸ್ಯ .ಭಾಸ್ಕರ್ , ಕೋಡಿಪಲ್ಲಿ ಸುಬ್ಬಿರೆಡ್ಡಿ . ರಮೇಶ್,ಹಾಗೂ ಕಾರ್ಯಕರ್ತರು ಇದ್ದರು.