ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ : ಇಲ್ಲಿನ ಎಂ ಬಿ ಎ ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ವಿಷಯದ ಕುರಿತಾಗಿ ವಿಶೇಷ ತರಭೇತಿಯನ್ನು ದಿನಾಂಕ 29/1/2025 ರಂದು ಆಯೋಜಿಸಲಾಗಿತ್ತು , ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ನಿಧೀಶ್ ರಾವ್ ಪ್ರೊಫೆಸರ್ ನಿಟ್ಟೆ ಇವರು ಡಿಜಿಟಲ್ ಮಾರ್ಕೆಟಿಂಗ್ ಕುರಿತಾಗಿ ಮಾರ್ಗದರ್ಶನ ನೀಡಿದರು ,ಡಿಜಿಟಲ್ ಮಾರ್ಕೆಟಿಂಗ್ ಮಹತ್ವ,
ಎಸ್ ಇ ಒ ತಂತ್ರಗಳು,ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್,ಪೇ ಪರ್ ಕ್ಲಿಕ್ ಜಾಹೀರಾತುಗಳು ಕಂಟೆಂಟ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ ಬಿಲ್ಡಿಂಗ್ ,ಪ್ರಾಯೋಗಿಕ ಉದಾಹರಣೆಗಳೂಂದಿಗೆ ವಿದ್ಯಾರ್ಥಿಗಳೂಂದಿಗೆ ಚರ್ಚಿಸಿದರು . ಕಾರ್ಯಕ್ರಮದಲ್ಲಿ ಎಂ ಬಿ ಎ ವಿಭಾಗದ ಮುಖ್ಯಸ್ತೆ ಡಾ. ಸುಚಿತ್ರಾ ಪೂಜಾರಿ ಮತ್ತು ಉಪನ್ಯಾಸಕರು ಉಪಸ್ಥಿತಿಯಲ್ಲಿದ್ದರು, ಕಾರ್ಯಕ್ರಮದಲ್ಲಿ ದ್ವಿತೀಯ ವಿಭಾಗದ ವಿದ್ಯಾರ್ಥಿಯಾದ ರಶ್ಮಿತ ಸ್ವಾಗತಿಸಿ ಕಾರ್ಯಕ್ರಮದವನ್ನು ನೀರೂಪಿಸಿದರು.