ಬೇಸಿಗೆಯಲ್ಲಿ ಜನರಿಗೆ ನಿರಂತರ ಕೆಲಸ ಸ್ವಾವಲಂಬಿ ಬದುಕು ನಿರ್ಮಿಸಲು ದುಡಿಯೋಣ ಬಾ ಯೋಜನೆ : ಸುಬ್ರಮಣಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಬೇಸಿಗೆಯಲ್ಲಿ ಜನರಿಗೆ ನಿರಂತರ ಕೆಲಸ ಸ್ವಾವಲಂಬಿ ಬದುಕು ನಿರ್ಮಿಸಲು ದುಡಿಯೋಣ ಬಾ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಸೋಮಯಾಜಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸುಬ್ರಮಣಿ ತಿಳಿಸಿದರು.
ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ದುಡಿಯೋಣ ಬಾ ಎಂಬ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸುಬ್ರಮಣಿ ಮಾರ್ಚ್ 15 ರಿಂದ ಜೂನ್ 30 ರ ವರಿಗೆ ಅಭಿಯಾನ ಚಾಲನೆಯಲ್ಲಿ ಇದ್ದು, ಬೇಸಿಗೆ ಕಾಲದಲ್ಲಿ ರೈತಾಪಿ ವರ್ಗಕ್ಕೆ ಕೃಷಿ ಚಟುವಟಿಕೆ ಕಡಿಮೆ ಇರುತ್ತದೆ. ಗ್ರಾಮೀಣರಿಗೆ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಅನೇಕ ಗ್ರಾಮೀಣ ಜನತೆಗೆ ಇದರಿಂದ ಅನುಕೂಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಧ್ಯತೆಯ ಮೇರೆಗೆ ನರೇಗಾ ಅಡಿ ಹಲವಾರು ಕೆಲಸಗಳು ನೀಡುತ್ತದೆ. ಕೂಲಿಕಾರರು ಸಕ್ರಿಯವಾಗಿ ಭಾಗಿಯಾದರೆ ಯೋಜನೆ ಸಾರ್ಥಕವಾಗಲಿದೆ ಎಂದರು.
ಈ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಉದ್ಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು. ಮುಖ್ಯವಾಗಿ ನೀರಿನ ಸಂರಕ್ಷಣೆ ಕಾಮಗಾರಿಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ಸಮಗ್ರ, ಕೆರೆ ಅಭಿವೃದ್ದಿ, ಗೋ ಕುಂಟೆ, ಸೋಕ್‍ಪೀಟ್, ರಸ್ತೆ ಬದಿ ಗಿಡ ನಾಟಿಮಾಡುವುದು, ಬದು ನಿರ್ಮಾಣ, ಕೆರೆ ಹೂಳುಎತ್ತುವುದು, ಬಚ್ಚಲಗುಂಡಿ, ಕೃಷಿ ಅರಣ್ಯ ಕರಣ, ಮುಂತಾದ ಕಾಮಗಾರಿಗಳನ್ನು ಮಾಡಲು ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಈ ಯೋಜನನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ತಾಲ್ಲೂಕು ಐಇಸಿ ಸಂಯೋಜಕರಾದ ಚೇತನ್ ಮಾತನಾಡಿ ಜಾಬ್ ಕಾರ್ಡ್ ಇಲ್ಲದವರು ಕಾರ್ಡ್‍ನ್ನು ಪಡೆದುಕೊಂಡು ಕೆಲಸವನ್ನು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಯೇ ಕಾಮಗಾರಿಗಳನ್ನು ಮಾಡಬಹುದು. ನರೇಗಾ ಯೋಜನೆಯು ಉತ್ತಮ ಕಾರ್ಯಕ್ರಮವಾಗಿದ್ದು. 3 ತಿಂಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ ಬೇಸಿಗೆ ಸಮಯದಲ್ಲಿ ಗ್ರಾಮೀಣ ಪ್ರದೇಶ್ ಜನರು ನಗರ ಪ್ರದೇಶಗಳಹತ್ತ ವಲಸೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ದುಡಿಯೋಣ ಬಾ ಅಭಿಯಾನವನ್ನು ಹಮ್ಮಿಕೊಂಡಿದ್ದು. ಈ ಭಾಗದ ಜನರು ಭಾಗವಹಿಸಿ ಅನುಕೂಲ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಕಛೇರಿ ಸಿಬ್ಬಂದಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.