ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
“ರೈತರಆದಾಯ ವೃದ್ಧಿಗೆ ದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿ ಸುಧಾರಿತತಾಂತ್ರಿಕತೆಗಳು” ಆನ್ಲೈನ್ತರಬೇತಿಕಾರ್ಯಕ್ರಮವನ್ನು ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕೋಲಾರ ಮತ್ತುರೇಷ್ಮೆ ಇಲಾಖೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 27.05.2021ರಂದು ಕೃಷಿ ವಿಜ್ಞಾನಕೇಂದ್ರದಲ್ಲಿಆಯೋಜಿಸಲಾಗಿತ್ತು.
ಶ್ರೀ. ಎಂ. ಮಂಜುನಾಥ, ರೇಷ್ಮೆ ಸಹಾಯಕ ನಿರ್ದೇಶಕರು, ಕೋಲಾರರವರುತಮ್ಮ ಪ್ರಸ್ತಾವಿಕ ಬಾಷಣದಲ್ಲಿಕಳೆದ ಬಾರಿಗೆ ಹೊಲಿಸಿದರೆ ಈ ಬಾರಿಯ ಲಾಕ್ಡೌನ್ ಸಮಯದಲ್ಲಿರೇಷ್ಮೆಗೂಡು ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿದ್ದು, ರೈತಬಾಂಧವರುಯಾವುದೇಕಾರಣಕ್ಕೂಹಿಪ್ಪುನೇರಳೆ ತೋಟವನ್ನುಕಿತ್ತುಹಾಕದೇರೇಷ್ಮೆಕೃಷಿಯನ್ನು ಮುಂದುವರೆಸಿಕೊಂಡು ಹೋಗಲುಬೇಕು, ಪ್ರಸ್ತುತಎಲ್ಲಾ ಬೆಳೆಗಳಿಗೂ ಸೂಕ್ತ ಬೆಲೆಯಿಲ್ಲದಂತಾಗಿದ್ದುರೇಷ್ಮೆಕೃಷಿಯಿಂದ ಮಾತ್ರ ಸುಸ್ಥಿರ ಜೀವನನಡೆಸಬಹುದಾಗಿದೆಹಾಗೂ ಹಿಪ್ಪುನೇರಳೆ ಸೊಪ್ಪನ್ನು ಪರ್ಯಾಯಜೀವನೋಪಯ ಮಾರ್ಗವಾಗಿಕುರಿ, ಮೇಕೆ ಸಾಕಾಣಿಕೆಯನ್ನು ಮಾಡಿಕೊಳ್ಳಬಹುದುಎಂದುರೈತಬಾಂಧವರಿಗೆ ಸಲಹೆಯನ್ನು ನೀಡಿದರು.
ಸದರಿಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ನೊಬೆಲೆ ಮೊರಿಸನ್, ವಿಜ್ಞಾನಿಗಳು ‘ಡಿ’ (ನಿವೃತ್ತ), ಕೇಂದ್ರರೇಷ್ಮೆ ಮಂಡಳಿ, ಬೆಂಗಳೂರು ಭಾಗವಹಿಸಿ ಗುಣಮಟ್ಟದಗೂಡುಉತ್ಪಾದನೆಗೆಅತ್ಯವಶ್ಯ ಅಂಶಗಳು ಹಾಗೂ ಅಧುನಿಕದ್ವಿತಳಿ ರೇಷ್ಮೆಕೃಷಿಯ ತಾಂತ್ರಿಕತೆಗಳ ಬಗ್ಗೆ ತಿಳಿಸುತ್ತ ಮಣ್ಣಿನ ಫಲವತ್ತತೆ ನಿರ್ವಹಣೆಗಾಗಿ ಪ್ರತಿಯೊಬ್ಬರೇಷ್ಮೆ ಬೆಳೆಗಾರರು 2 ವರ್ಷಕ್ಕೊಮ್ಮೆಕಡ್ಡಾಯವಾಗಿ ಮಣ್ಣು ಪರೀಕ್ಷೆಯನ್ನು ಮಾಡಿಸಿ ಶಿಫಾರಿತ ಪ್ರಮಾಣದರಸಗೊಬ್ಬರ ಮತ್ತು ಸಾವಯವಗೊಬ್ಬರ ಬಳಸಬೇಕೆಂದು ತಿಳಿಸಿದರು. ಹಿಪ್ಪುನೇರಳೆ ತೋಟದಲ್ಲಿಟ್ರಂಚಿಂಗ್ ಮತ್ತು ಮಲ್ಚಿಂಗ್ತಾಂತ್ರಿಕತೆಯನ್ನು ಅಳವಡಿಸಿಕೊಂಡು ಮಣ್ಣಿನಲ್ಲಿ ನಿರಂತರವಾಗಿ ಸಾವಯವ ಇಂಗಾಲವನ್ನುಅಭಿವೃದ್ಧಿಪಡಿಸುವುದು, ಹಿಪ್ಪುನೇರಳೆ ಗಿಡಗಳಿಗೆ ಸೂಕ್ತ ಸ್ಥಳಾವಕಾಶ,ನಾಟಿ ವಿಧಾನ, ಕಾಂಡದ ನಿರ್ವಹಣೆ, ಪ್ರದಾನ ಮತ್ತು ಲಘು ಪೋಷಕಾಂಶಗಳ ನಿರ್ವಹಣೆ ಬಳಕೆ ಬಗ್ಗೆ ಸವಿವರವಾಗಿತಿಳಿಸಿದರು. ನಂತರ ಹುಳು ಸಾಕು ಮನೆ ಸೋಂಕು ನಿವಾರಣೆಯಲ್ಲಿದ್ರಾವಣತಯಾರಿಕೆ ವಿಧಾನ, ಪ್ರಸ್ತುತ ಸನ್ನಿವೇಶದಲ್ಲಿದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿಕಂಡುಬರುವ ಹಾಲುರೋಗ, ಸಪ್ಪೆರೋಗÀದವೈಜ್ಞಾನಿಕನಿರ್ವಹಣೆ ಬಗ್ಗೆ ತಿಳಿಸಿದರು. ಸೋಂಕು ನಿವಾರಕದ್ರಾವಣವನ್ನು ಸರಿಯಾದ ಪ್ರಮಾಣದಲ್ಲಿ ಹೇಗೆ ಅಂದಾಜು ಮಾಡುವುದು, ಸೋಂಕು ನಿವಾರಕದತಯಾರಿ ಹೇಗೆ, ಪವರ್ ಸ್ಪ್ರೇಯರ್ ಬಳಸಿ ಸೋಕು ನಿವಾರಣೆ ಕೈಗೋಳ್ಳುವುದು,ಹುಳು ಮೇಯಿಸುವಾಗ ಅಂತರವೆಷ್ಟುಇರಬೇಕು, ಪ್ರೌಢ ಹುಳು ಸಾಕಾಣಿಕೆಗೆ ಸಂಬಂದಿಸಿದಂತೆ ಸೂಕ್ತ ಸ್ಥಳಾವಕಾಶ, ಜ್ವರದಲ್ಲಿ ಹುಳುಗಳ ನಿರ್ವಹಣೆ, ಹಣ್ಣು ಹುಳು ನಿರ್ವಹಣೆ ಮತ್ತು ಪ್ರತ್ಯೇಕ ಹುಳು ಸಾಕು ಮನೆಯಅನುಕೂಲತೆಬಗ್ಗೆ ತಿಳಿಸುವುದರ ಮೂಲಕ ರೈತರಆದಾಯವನ್ನು ವೃದ್ದಿಗೊಳಿಸಬೇಕೆಂದು ತಿಳಿಸಿದರು.
ಉಪನ್ಯಾಸದ ನಂತರಸಂವಾದಕಾರ್ಯಕ್ರಮದಲ್ಲಿದ್ವಿತಳಿ ರೇಷ್ಮೆ ಬೆಳೆಗಾರರು, ಚಾಕಿ ಸಾಕಾಣಿಕಾಕೇಂದ್ರದ ಮಾಲಿಕರು ಹಾಗೂ ರಾಜ್ಯದಇತರೇ ಜಿಲ್ಲೆಗಳಿಂದ ರೈತರು ಭಾಗವಹಿಸಿ ದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳ ಬಗ್ಗೆ ಚರ್ಚಿಸಿದರು ಹಾಗೂ ಸೂಕ್ತ ಸಲಹೆಗಳನ್ನು ಪಡೆದುಕೊಂಡರು.
ಕೃಷಿ ವಿಜ್ಞಾನಕೇಂದ್ರ, ಕೋಲಾರದಲ್ಲಿ ನಡೆದ“ರೈತರಆದಾಯ ವೃದ್ಧಿಗೆ ದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿ ಸುಧಾರಿತ ತಾಂತ್ರಿಕತೆಗಳು” ಆನ್ಲೈನ್ಕಾರ್ಯಾಗಾರವನ್ನುರೇಷ್ಮೆ ಕೃಷಿ ವಿಜ್ಞಾನಿಗಳಾದ ಡಾ. ಶಶಿಧರ್ ಕೆ.ಆರ್ಯಶಸ್ವಿಯಾಗಿ ನಡೆಸಿಕೊಟ್ಟರು.ಸದರಿಕಾರ್ಯಕ್ರಮದಲ್ಲಿಸುಮಾರು80 ರೇಷ್ಮೆ ಬೆಳೆಗಾರರು ಆನ್ಲೈನ್ತರಬೇತಿಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಉಪಯೋಗವನ್ನು ಪಡೆದುಕೊಡರು.