JANANUDI.COM NETWORK
ಬೆ0ಗಳೂರು: ಮುಖ್ಯಮಂತ್ರಿ ನಿವಾಸದ ಭದ್ರತೆಗೆ ನಿಯೋಜನೆಗೊ0ಡಿದ್ದ ಪೊಲೀಸ್ ಸಿಬ್ಬ0ದಿಯೇ ಡ್ರಗ್ಸ್ ಡೀಲ್ ನಲ್ಲಿ ತೊಡಗಿಸಿಕೊಂಡು ಈಗ ಸಿಕ್ಕಿಬಿದ್ದಿದ್ದಾರೆ ಎಂಬ ಆತಂಕಕಾರಿ ಸುದ್ದಿ ಬಿತ್ತರವಾಗಿದೆ.
ಕೋರಮಂಗಲ ಠಾಣೆಯ ಕಾನಸ್ಟೇಬಲ್ ಗಳಾದ ಶಿವಕುಮಾರ್ ಮತ್ತು ಸ0ತೋಷ್ಬ ಬ0ಧನಕ್ಕೆ ಒಳಗಾದವರು. ಬ0ಧಿತ ಈ ಜೋಡಿಯು ಮೋಸ್ಟ್ ವಾ0ಟೇಡ್ ಪೆಡ್ಲರ್ ಬಳಿ ಗಾ0ಜಾ ಖರೀದಿಸಿ, ಮಾರಾಟಕ್ಕೆ ಯತ್ನಿಸಿತ್ತು ಎ0ದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಆಶ್ಚರ್ಯ ಅಂದರೆ ಈ ಇಬ್ಬರೂ ಕಾನಸ್ಟೇಬಲ್ ಗಳು ಮುಖ್ಯಮಂತ್ರಿ ಬೊಮ್ಮಾಯಿ ಮನೆಯಿರುವ ಆರ್. ಟಿ. ನಗರದ 80 ಅಡಿ ದೂರವಿರುವ ರಸ್ತೆ ಬಳಿ ಡೀಲ್ ಮಾಡುತ್ತಿದ್ದಾಗ ಪೊಲೀಸ ಬಲೆಗೆ ಬಿದ್ದಿದ್ದಾರೆ. ಎಂದು ತಿಳಿದು ಬಂದಿದೆ.
ಸಿಎ0 ಮನೆಯ ಬಳಿ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬ0ದಿಗೆ ಇವರನ್ನು ಕಂಡು ಅನುಮಾನ ಬ0ದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ಆರ್.ಟಿ ನಗರ ಪೆÇಲೀಸರು ಈ ಸ0ಬ0ಧ ನಾಲ್ವರನ್ನು ಬಂಧಿಸಿ ಮುಂದಿನ ತನಿಖೆ ಕೈಗೊ0ಡಿದ್ದಾರೆ ಎಂದು ತಿಳಿದು ಬಂದಿದೆ.