

ಕುಂದಾಪುರ, ಅ.25: ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಮತ್ತು ಗ್ರೀನ್ ಇಂಡಿಯಾ ಮೂವ್‍ಮೆಂಟ್ ಇವರ ಸಹಯೋಗದೊಂದಿಗೆ ಅರಣ್ಯ ಬೆಳೆಸಿ ಪರಿಸರ ಉಳಿಸಿ ಎಂಬ ನಿಟ್ಟಿನಲ್ಲಿ ಜಪಾನಿನ ಮಿಯಾವಾಕಿ ಪದ್ದತಿಯಲ್ಲಿ ಅರಣ್ಯ ಬೆಳೆಸುವ ಪದ್ದತಿಗೆ ರೊ. ಡಾ|ಉತ್ತಮ್ ಶೆಟ್ಟಿಯವರ ಪರಿಸರದಲ್ಲಿ ಚಾಲನೆ ನೀಡಲಾಯಿತು.
ಗೀಡ ನೆಟ್ಟು ಚಾಲನೆ ನೀಡಿದ ಕೊಟೇಶ್ವರ ವಕ್ವಾಡಿಯ ಗುರುಕುಲ ಪಬ್ಲಿಕ್ ಶಾಲೆಯ ಜಂಟಿ ಕರ್ಯದರ್ಶಿ ಅನುಪಮ ಎಸ್ ಶೆಟ್ಟಿ ಮಾತನಾಡಿ “ಹಿಂದೆ ನಮ್ಮ ಹಿರಿಯರು ಮನೆ ಸುತ್ತಲು 16 ಬಗೆಯ ಮರ ಗೀಡಗಳನ್ನು ಬೆಳೆಸುತಿದ್ದರು, ಈ ಮರ ಗೀಡಗಳಿಂದ ಅಗತ್ಯವಿದ್ದ ಓಷಧಿಗಳು ಸಿದ್ದ ಮಾಡಬಹುದಿತ್ತು, ಮಾತ್ರವಲ್ಲ ನಮಗೆ ಶುದ್ದ ಗಾಳಿ, ಒಕ್ಸಿಜನ್ ಸಿಗುತಿತ್ತು. ಮರ ಗೀಡಗಳು ನಮಗೆ ಸಾಂತ್ವನ ಕೂಡ ನೀಡುತ್ತವೆ ಎಂಬುದು ನನ್ನ ಅನುಭವ. ಮಿಯಾವಾಕಿ ಪದ್ದತಿಯಲ್ಲಿ ಬೆಳೆಸಿದ ಅರಣ್ಯ 25 ವರ್ಷಗಳಲ್ಲಿ ದೊಡ್ಡ ಮರಗಳಾಗಿ, ಅದನ್ನು ಕಡಿದು ಪುನಹ ಅರಣ್ಯ ಬೆಳೆಸಬಹುದು. ಇದರಿಂದಾಗಿ ಹಲವು ಕಿ.ಮಿ. ದೂರದ ತನಕ ನಮಗೆ ಒಕ್ಸಿಜನ್ ಸಿಗುತ್ತದೆ” ಎಂದು ಹೇಳಿದರು.
ಪ್ರಸ್ತಾವಿಸಿ ಮಾತನಾಡಿದ ರೊ. ಡಾ|ಉತ್ತಮ್ ಶೆಟ್ಟಿ “ಮಿಯಾವಾಕಿ ಪದ್ದತಿಯಲ್ಲಿ ಮರ ಗೀಡಗಳನ್ನು ಹತ್ತಿರ ಹತ್ತಿರವಾಗಿ ಬೇಳೆಸುತ್ತಾರೆ, ಅವಾಗ ಮರಗೀಡಗಳು ಸೂರ್ಯನ ಬೆಳಕು ಪಡೆದುಕೊಳ್ಳಲು ಮರಗೀಡಗಳಲ್ಲಿ ಪೈಪೆÇೀಟಿ ನಡೆದು ತಾ ಮುಂದೆ ನಾ ಮುಂದೆ ಎಂದು ಎತ್ತರಕ್ಕೆ ಬೆಳೆಯುತ್ತವೆ, ಮಾತ್ರವಲ್ಲ ಹತ್ತಿರ ಹತ್ತಿರ ಇರುವುದರಿಂದ ಗಾಳಿ ಮಳೆಗೆ, ಬೀಳದೆ ತಡೆಯೊಡ್ಡಿ ನಿಲ್ಲುತ್ತವೆ. ಮರ ಗೀಡಗಳು ನಡುವ ಮೊದಲು ಮೊದಲಿನ ಮಣ್ಣು ತೆಗೆದು, ಅಲ್ಲಿ ಹದ ಮಾಡಿ ಬೇರುಗಳು ವೇಗವಾಗಿ ಆಳಕ್ಕೆ ಹೋಗುವಂತೆ ಮಾಡ ಬೇಕಾಗುತ್ತದೆ” ಎಂದು ತಿಳಿಸಿದರು.
ಗ್ರೀನ್ ಇಂಡಿಯಾ ಮೂವ್‍ಮೆಂಟಿನ ಸದಸ್ಯರಾದ ಲೇಖಕ ಮುನಿಯಾಲು ಗಣೇಶ ಶೆಣೈ ವಿವಿಧ ಮರಗಳಿಂದ ಆಗುವ ಉಪಯೋಗಗಳನ್ನು ತಿಳಿಸಿದರು, ನಮಗೆ ಕೆಲವೇ ಕೆಲವು ಪದಾರ್ಥಕ್ಕಾಗಿ ತರಕಾರಿಗಳು ಇವೆ, ಹಲವು ಪಲ್ಯ ಮಾಡುವ ಹಲವು ಎಲೆಗಳಿಂದ ಮಾಡಬಹುದು, ಸಂಪದ್ಭರಿತವಾದ ನಮ್ಮ ದೇಶ, ಕಾಡು ಸಂಪತ್ತನ್ನು ಬಲಸದೆ ಬಡವಾಗಿದೆ. ಜಪಾನಿನಲ್ಲಿ ಭೂ ಪ್ರದೇಶ ಸ್ವಲ್ಪವಿದ್ದು ಅರಣ್ಯ ಗೀಡ ಮರಗಳು ಬೆಳೆಸಲು ಕಷ್ಟವಾಗಿ ಈ ಮಿಯಾವಾಕಿ ಎಂಬವರು ಸಂಶೋಧನೆ ಮಾಡಿದ ಪದ್ದತಿಯಿಂದ ಚಿಕ್ಕ ಜಾಗದಲ್ಲಿ ಜಪಾನಿಗರು ಕಾಡುಗಳನ್ನು ಬೆಳೆಸುತ್ತಾರೆ, ಈ ವಿಧದ ಕಾಡುಗಳಲ್ಲಿ ಹೆಚ್ಚಾಗಿ ಪಕ್ಷಿಗಳು ಆಸರೆಯನ್ನು ಪಡೆಯುತ್ತವೆ. ಬೊನ್ಸಾಯಿ ಪದ್ದತಿ ಕೂಡ ಜಪಾನಿನ ಪದ್ದತಿಯಾಗಿದ್ದು, ಚಿಕ್ಕ ಜಾಗ ಇದ್ದವರಿಗೆ ಇದು ತುಂಬ ಅನುಕೂಲ” ಎಂದು ತಿಳಿಸಿದರು.
ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷರಾದ ರೊ.ಸತ್ಯನಾರಯಣ ಪುರಾಣಿಕ್ ಸ್ವಾಗತಿಸಿ ಇಂತಹ ಕಾರ್ಯಕ್ರಮ ನೂತನವಾಗಿದ್ದು, ಆಸಕ್ತಿದಾಯಕವಾಗಿದೆ ಎಂದರು.
ರೊ.ಜೂಡಿತ್ ಮೆಂಡೊನ್ಸಾ ಕಾರ್ಯಕ್ರಮ ನಿರೂಪಿಸಿದರು, ರೊ. ವಾಸುದೇವ ಕಾರಂತ ಧನ್ಯವಾದಗಳನ್ನು ಸಮರ್ಪಿಸಿದರು.





















