ವಾಹನ ನಿಲುಗಡೆ ಸೂಚನಾ ನಾಮಫಲಕಗಳಿಗೆ ಚಾಲನೆ
ಎಸ್‍ಎನ್‍ಆರ್ ಆಸ್ಪತ್ರೆ ವೈದ್ಯ ಸಿಬ್ಬಂದಿ ಕೊರತೆ ನೀಗಿಸಿ – ಸಿಎಂಆರ್ ಶ್ರೀನಾಥ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲೆ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಜಿಲ್ಲೆಗಳಿಂದಲೂ ಚಿಕಿತ್ಸೆಗೆ ಆಗಮಿಸುವ ಎಸ್‍ಎನ್‍ಆರ್ ಆಸ್ಪತ್ರೆಯನ್ನು ಕಾಡುತ್ತಿರುವ ವೈದ್ಯ ಸಿಬ್ಬಂದಿ ಕೊರತೆಯನ್ನು ಸರಕಾರ ಕೂಡಲೇ ನಿವಾರಿಸಬೇಕೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಮಾಜ ಸೇವಕ ಸಿ.ಎಂ.ಆರ್ ಶ್ರೀನಾಥ್ ಆಗ್ರಹಿಸಿದರು.
ನಗರದ ಎಸ್‍ಎನ್‍ಆರ್ ಆಸ್ಪತ್ರೆಯ ಆವರಣದಲ್ಲಿ ಗುರುವಾರ ವಾಹನ ನಿಲುಗಡೆ ಸೂಚನಾ ಫಲಕಗಳನ್ನು ಕೊಡುಗೆಯಾಗಿ ನೀಡಿ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕೊರೊನಾ ಎರಡು ಮೂರು ಅಲೆಯನಂತರ ಒಂದಷ್ಟು ಆಧುನಿಕ ಸೌಲಭ್ಯಗಳು ಎಸ್‍ಎನ್‍ಆರ್ ಆಸ್ಪತ್ರೆಗೆ ಸೇರ್ಪಡೆಯಾಗಿವೆ, ಆದರೆ, ವೈದ್ಯ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಜನತೆಗೆ ಸಮರ್ಪಕವಾದ ಚಿಕಿತ್ಸೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲವೆಂದು ಅವರು ವಿಷಾದಿಸಿದರು.
ಎಸ್‍ಎನ್‍ಆರ್ ಆಸ್ಪತ್ರೆಯು 500 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಆಸ್ಪತ್ರೆಯಲ್ಲಿ ಲಭ್ಯವಿರುವ ಸಿಬ್ಬಂದಿ 250 ಹಾಸಿಗೆಗಳಿಗೂ ಸಾಕಾಗುತ್ತಿಲ್ಲ, ಇಂತ ಒತ್ತಡದ ವಾತಾವರಣದಲ್ಲಿ ವೈದ್ಯರು ಮತ್ತು ಸಿಬ್ಬಂದಿ ರೋಗಿಗಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಕಾರವು ಕೂಡಲೇ ಆಸ್ಪತ್ರೆಯಲ್ಲಿನ ವೈದ್ಯ ಸಿಬ್ಬಂದಿ ಕೊರತೆಯನ್ನು ಹೊಸ ನೇಮಕಾತಿ ಮೂಲಕ ನಿವಾರಿಸಿ ಆಸ್ಪತ್ರೆಯಲ್ಲಿ ಬಡ ಜನತೆಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಎಸ್‍ಎನ್‍ಆರ್ ಆಸ್ಪತ್ರೆಗೆ ನಿತ್ಯವೂ ಸಾವಿರಾರು ಮಂದಿ ಆಗಮಿಸುತ್ತಿದ್ದು, ಆವರಣದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದರು. ಇದರಿಂದ ಆಸ್ಪತ್ರೆಗೆ ತುರ್ತುಚಿಕಿತ್ಸೆಗೆ ಆಂಬುಲೆನ್ಸ್ ಮತ್ತಿತರ ವಾಹನಗಳಲ್ಲಿ ರೋಗಿಗಳನ್ನು ಕರೆ ತರಲು ಅಡ್ಡಿಯುಂಟಾಗುತ್ತಿತ್ತು. ಈ ಸಮಸ್ಯೆಯನ್ನು ಪೆÇಲೀಸ್ ವರಿಷ್ಠಾ„ಕಾರಿ ದೇವರಾಜ್ ಆಸ್ಪತ್ರೆಗೆ ಭೇಟಿ ಕೊಟ್ಟು ನಿವಾರಿಸಿದ್ದರು. ಈ ಕಾರ್ಯಕ್ಕೆ ಸಹಕಾರಿಯಾಗಲಿ ಎನ್ನುವ ಉದ್ದೇಶದಿಂದ ಆಸ್ಪತ್ರೆಯ ಆವರಣದಲ್ಲಿ ವಾಹನಗಳ ನಿಲುಗಡೆಗೆ ಸೂಚನಾ ಫಲಕಗಳನ್ನು ಅಗತ್ಯವಿದ್ದೆಡೆ ಅಳಪಡಿಸಲು ನಿಲುವು ಫಲಕಗಳನ್ನು ನೀಡಲಾಗುತ್ತಿದೆಯೆಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಮಾತನಾಡಿ, ಆಸ್ಪತ್ರೆಯ ಆವರಣದ ವಾಹನ ಸಮಸ್ಯೆಯನ್ನು ಪೆÇಲೀಸ್ ಇಲಾಖೆ ಸರಿಪಡಿಸಿದ್ದು, ಇದನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗುವ ಸಲುವಾಗಿ ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ನಾಮಫಲಕಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ಸ್ವಾಗತಾರ್ಹ ಮತ್ತು ಉಪಯೋಗಕಾರಿ ಎಂದರು.
ಈ ಸಂದರ್ಭದಲ್ಲಿ ಪೆÇಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಹರೀಶ್, ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್, ಕೋಚಿಮುಲ್ ಮಾಜಿ ನಿರ್ದೇಶಕ ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ ಇತರರು ಹಾಜರಿದ್ದರು.