ಕುಡಿಯುವ ನೀರು ಸ್ವಚ್ಚತೆ, ಬೀದಿ ದೀಪ, ನರೇಗಾ ಕಾಮಗಾರಿಗಳು, ಪಂಚಾಯಿತಿ ಎಲ್ಲಾ ಹಳ್ಳಿಗಳಿಗೆ ಪಕ್ಷ ಬೆದವನ್ನು ಮರೆತುಮೂಲಭೂತ ಸೌಲಭ್ಯಗಳಿಗೆ ಅಧ್ಯತೆ ನೀಡೋಣ ; ಗೌತಮಿ ಮುನಿರಾಜು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಬೇಸಿಗೆ ಸಮೀಪಿಸುತ್ತಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು ಸ್ವಚ್ಚತೆ, ಬೀದಿ ದೀಪ, ನರೇಗಾ ಕಾಮಗಾರಿಗಳು, ಪಂಚಾಯಿತಿ ಎಲ್ಲಾ ಹಳ್ಳಿಗಳಿಗೆ ಪಕ್ಷ ಬೆದವನ್ನು ಮರೆತುಮೂಲಭೂತ ಸೌಲಭ್ಯಗಳಿಗೆ ಅಧ್ಯತೆ ನೀಡೋಣ ಎಂದು ನೆಲವಂಕಿ ಗ್ರಾಮ ಪಂಚಾಯಿತಿ ಅಧ್ಯಕ್ಷಿಣಿ ಗೌತಮಿ ಮುನಿರಾಜು ತಿಳಿಸಿದರು.
ತಾಲ್ಲೂಕಿನ ನೆಲವೆಂಕಿ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಅಧ್ಯಕ್ಷಣಿ ಗೌತಮಿ ಮುನಿರಾಜ್ ಅಧ್ಯಕ್ಷತೆಯಲ್ಲಿ ಮೊದಲ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮಗಳಲ್ಲಿ ಕುಡಿಯುವ ನೀರು ತೊಂದರೆಯಾಗದಂತೆ ಎಲ್ಲಾ ಗ್ರಾಮಗಳಿಗೂ ಒದಗಿಸೋಣ. ಸ್ವಚ್ಚತೆ, ಹಾಗೂ ಪಂಚಾಯಿತಿ ಅಭಿವೃದ್ದಿಗೆ ಎಲ್ಲಾ ಸದಸ್ಯರು ಒಂದಾಗಿ ಕೆಲಸ ಮಾಡೋಣ ಸರ್ಕಾರದಿಂದ ಹಳ್ಳಿಗಳ ಅಭಿವೃದ್ದಿಗೆ ಲಕ್ಷಾಂತರ ರೂಗಳು ಅನುದಾನ ಬರುತ್ತದೆ. ಇದನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ದೋಗ ಖಾತ್ರಿ ಯೋಜನೆ ಅಡಿ ರೈತರು ತಮ್ಮ ಜಮೀನುಗಳಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆಗಳ ಕಾರ್ಯಕ್ರಮಗಳು ಹಾಗೂ ವೈಯುಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕೆಂದು ತಿಳಿಸಿದರು. 

ಪಿಡಿಓ ಚಂದ್ರಶೇಕರ್  ಮಾತನಾಡಿ 2021-22 ನೇ ಸಾಲಿನಲ್ಲಿ ಸದಸ್ಯರು ಆಯ್ಕೆಯಾದ ನಂತರ ಇದೇ ಮೊದಲ ಸಾಮಾನ್ಯ ಸಭೆಯಾಗಿದ್ದು, ಸದಸ್ಯರಾದ ನೀವು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಸರ್ಕಾರದಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ, ದನದ ಕೊಟ್ಟಿಗೆ, ಕೋಳಿ ಶೆಡ್, ಕೆರೆ, ಗೋಕಟ್ಟೆ, ಹೂಳೆತ್ತುವುದು,  ಸ್ಮಶಾನ ಅಭಿವೃದ್ದಿ, ನಮ್ಮ ಹೊಲ ನಮ್ಮ ದಾರಿ ಈಗೆ ಹಲವು ಕಾರ್ಯಕ್ರಮಗಳು ಇದ್ದು, ನಿಮ್ಮ ಗ್ರಾಮಗಳಲ್ಲಿ  ಬರುವ ವಾರದಿಂದ   ನಿಮ್ಮ ಗ್ರಾಮಗಳಲ್ಲೆ ವಾರ್ಡ್‍ಸಭೆ ನಡೆಯಲಿದ್ದು, ನಿಮ್ಮ ಗ್ರಾಮಕ್ಕೆ ಬೇಕಾದ ಕೆಲಸಗಳ ಪಟ್ಟಿಯನ್ನು ತಯಾರಿಸಿ ನಮಗೆ ನೀಡಿ, ಅದನ್ನು  ಅನುಷ್ಟಾನ ತರುವ ಕೆಲಸ ನಾವು ಮಾಡುತ್ತೇವೆ, ಇದನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು. ಎಲ್ಲಾ ಸದಸ್ಯರು ಆಯಾ ಗ್ರಾಮದಲ್ಲಿ ಆಗಬೇಕಾದ  ಕಾಮಗಾರಿಗಳ ಬಗ್ಗೆ ಚರ್ಚಿಸಿದರು. 

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷಿಣಿ ಮಮತ ವಿ. ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಚಂದ್ರರೆಡ್ಡಿ, ಎಸ್.ವಿ. ಶಂಕರ್, ಆಂಜನೇಯರೆಡ್ಡಿ, ನಾಗಮ್ಮ ಎಲ್. ನಂದಿನಿ ಎಸ್. ಶ್ರೀನಿವಾಸರೆಡ್ಡಿ ಪಿ.ಎನ್. ನಾರಾಯಣಸ್ವಾಮಿ, ಕೆ.ಎನ್ ರಾಧಮ್ಮ, ಮಂಜುಳ, ಬಯಮ್ಮ, ರವಣಮ್ಮ, ಶೋಭ ಬಿ.ಆರ್. ರಮೇಶ್ ಸಿ.ಎಂ. ಸಾವಿತ್ರಮ್ಮ, ಬಿ.ಆರ್. ರವಣಾರೆಡ್ಡಿ, ರೆಡ್ಡೆಮ್ಮ, ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಶ್ರೀನಿವಾಸ್, ಸಿಬ್ಬಂದಿ  ಹಾಗೂ ಜಲಗಾರರು ಉಪಸ್ಥಿತರಿದ್ದರು.