ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಹೆಚ್ಚಿನ ಮತಗಳಿಂದ ಆಯ್ಕೆ:ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಶ್ರೀನಿವಾಸಪುರ: ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಹೆಚ್ಚಿನ ಮತಗಳಿಂದ ಚುನಾಯಿತರಾಗಿರುವುದನ್ನು ಸ್ವಾಗತಿಸಿ ಗುರುವಾರ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಂ.ಲಕ್ಷ್ಮಣಗೌಡ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಆದಿವಾಸಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ದೇಶದ ರಾಷ್ಟ್ರತಿ ಸ್ಥಾನಕ್ಕೆ ಏರಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಇದು ಪ್ರಜಾಪ್ರಭುತ್ವದ ನಿಜವಾದ ಶಕ್ತಿಯಾಗಿದೆ ಎಂದು ಹೇಳಿದರು.
ದೇಶದ ಪ್ರಥಮ ಪ್ರಜೆಯಾಗಿ ದ್ರೌಪದಿ ಮುರ್ಮು ಅವರು ಪ್ರಜಾಪ್ರಭುತ್ವದ ಘನತೆ ಗೌರವವನ್ನು ಹೆಚ್ಚಿಸಲಿದ್ದಾರೆ. ಅವರ ಗೆಲುವನ್ನು ಸಂತೋಷದಿಂದ ಸ್ವಾಗತಿಸಿ, ಅಭಿನಂದಿಸುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ-ಆಂಧ್ರಪ್ರದೇಶದ ಗಡಿ ಸಮೀಪದ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ, ರಾಷ್ಟ್ರತಿಯಾಗಿ ದ್ರೌಪದಿ ಮುರ್ಮು ಅವರ ಆಯ್ಕೆ ಸ್ವಾಗತಿಸಿ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ಕಾರ್ಯಕರ್ತರು ಗ್ರಾಮದಲ್ಲಿ ಮೆರವಣಿಗೆ ನಡೆಸಿ, ನಿವಾಸಿಗಳಿಗೆ ಟೀ ಹಂಚಿದರು.
ಮುಖಂಡರಾದ ವೆಂಕಟೇಗೌಡ, ರಾಮಾಂಜಿ, ರೆಡ್ಡಪ್ಪ, ರಮೇಶ್, ಷಫಿವುಲ್ಲಾ, ಕೊಟ್ರಗುಳಿ ನಾರಾಯಣಸ್ವಾಮಿ, ರಾಜು, ಸಉರೇಶ್ ಕುಮಾರ್, ಜಯಣ್ಣ, ನಾಗಭೂಷಣ, ವಿ.ನಿಶಾಂತ್ ರೆಡ್ಡಿ ಮತ್ತಿತರರು ಇದ್ದರು.