ರೋಗಗಳಿಗೆ ಪರಿಹಾರ ನೀಡುವ ಕರ್ತವ್ಯದೊಂದಿಗೆ ಜನ ಜಾಗೃತಿ ಮಾಡುವ ಕೆಲಸವನ್ನು ವೈದ್ಯರು ಮಾಡಬೇಕು. ಈ ಸೇವೆಯಿಂದ ಜನರ ಜೀವನದಲ್ಲಿ ಉತ್ಸಾಹ ಬೆಳೆಸಿದಂತಾಗುತ್ತದೆ. ಸಾಹಿತ್ಯ ರಚನೆ ಮೂಲಕ ಮಾಹಿತಿ ನೀಡುವುದು ಇವುಗಳಲ್ಲಿ ಒಂದು. ಇಂದು ಪೂರ್ಣ ಆರೋಗ್ಯವಂತನಾಗಿದ್ದೇನೆ ಎಂದು ಯಾರೂ ಹೇಳಿಕೊಳ್ಳುವ ಹಾಗಿಲ್ಲ. ಯಾವುದಾದರೊಂದು ದೈಹಿಕ, ಮಾನಸಿಕ ಸಮಸ್ಯೆ ಇರುತ್ತದೆ. ಸಮಸ್ಯೆ ಇದ್ದರೂ ಜೀವನದಲ್ಲಿ ಆಸಕ್ತಿ, ಉಲ್ಲಾಸ ಉಳಿಸಿಕೊಳ್ಳುವುದು ಬಹಳ ಮುಖ್ಯ. ಇಂತವರು ಉಳಿದವರಿಗಿಂತ ಆರೋಗ್ಯವಂತರಾಗಿರುತ್ತಾರೆ. ನಾನು ಹಲವು ವೈದ್ಯಕೀಯ ಮಾಹಿತಿ ಪುಸ್ತಕಗಳನ್ನು ಬರೆದು ವಿತರಿಸಿದ್ದೇನೆ. ಉತ್ತಮ ಸ್ಪಂದನ ದೊರೆತಿದೆ. ಡಾ| ಉಮೇಶ ಭಟ್ ಅವರು ಅಧ್ಯಯನಕ್ಕೆ ಯೋಗ್ಯವಾಗಿರುವ ಉತ್ತಮ ಇಂಗ್ಲೀಷ್ ಕಾದಂಬರಿ ಬರೆದಿದ್ದಾರೆ. ಆದರೆ ಅದನ್ನು ಕನ್ನಡಕ್ಕೆ ಭಾಷಾಂತರಿಸಿದರೆ ಹೆಚ್ಚು ಓದುಗರಿಗೆ ತಲುಪಲು ಸಾಧ್ಯವಾಗುತ್ತದೆ.” ಎಂದು ಖ್ಯಾತ ದಂತ ವೈದ್ಯಕೀಯ ತಜ್ಞ, ಲೇಖಕ, ಸಮಾಜ ಸೇವಕ ಡಾ| ಮುರಲೀಮೋಹನ್ ಚೂಂತಾರು ಹೇಳಿದರು.
ಕುಂದಾಪುರದ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಕುಂದಾಪುರದ ಖ್ಯಾತ ಶಸ್ತç ಚಿಕಿತ್ಸಾ ತಜ್ಞ ಡಾ| ಉಮೇಶ ಭಟ್ ಬಿ. ಅವರ ಆಂಗ್ಲ ಕಾದಂಬರಿ “ಫುಟ್ಪ್ರಿಂಟ್ಸ್ ಆನ್ ದಿ ಸ್ಯಾಂಡ್ಸ್ ಆಫ್ ಟೈಮ್” ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಮಣಿಪಾಲ ಯುನಿವರ್ಸಲ್ ಪ್ರೆಸ್’ ಹಾಗೂ ‘ಕುಂದಪ್ರಭ’ ಸಂಸ್ಥೆ ಆಶ್ರಯದಲ್ಲಿ ನಡೆದ ಈ ಸಮಾರಂಭದಲ್ಲಿ ಮಣಿಪಾಲ ಯುನಿವರ್ಸಲ್ ಪ್ರೆಸ್ನ ಮ್ಯಾನೇಜಿಂಗ್ ಎಡಿಟರ್ ಅರವಿಂದ್ ಎನ್. ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಕುಂದಾಪುರ ಕ.ಸಾ.ಪ. ಅಧ್ಯಕ್ಷ ಡಾ| ಉಮೇಶ ಪುತ್ರನ್, ಶ್ರೀಮತಿ ಜಲಜಾ ತೋಳಾರ್ ಕುಂದಾಪುರ, ಶ್ರೀಮತಿ ಮಹಾಲಕ್ಷೀ ಡಾ| ಉಮೇಶ ಭಟ್ ಅವರ ಇಂಗ್ಲೀಷ್ ಕಾದಂಬರಿ ಬಿಡುಗಡೆ“ಜನ ಜಾಗೃತಿ”ಯೂ ವೈದ್ಯರ ಸೇವೆಯಾಗಬೇಕು-ಡಾ| ಮುರಲೀಮೋಹನ್ ಸೋಮಯಾಜಿ ಕೋಟ, “ಕೃತಿ ವಿಮರ್ಶೆ ಮಾಡಿ ಈ ಕೃತಿ ಪ್ರತಿಯೊಬ್ಬರೂ ಓದಲೇಬೇಕಾದ ಗುಣಗಳನ್ನು ಹೊಂದಿದೆ. ಬಹಳ ಆಸಕ್ತಿ ಮೂಡಿಸುತ್ತದೆ. ಚಿಂತನೆ ಮಾಡುವಂತೆ ಹೃದಯವನ್ನು ಕಲಕುತ್ತದೆ. ಉತ್ತಮ ವೈದ್ಯಕೀಯ ವಿಚಾರಗಳನ್ನು ತಿಳಿಸುತ್ತದೆ” ಎಂದರು.
ಕೆ.ಎಂ.ಸಿ. ಮಣಿಪಾಲದ ಪ್ರೊಫೆಸರ್ ಆಫ್ ಸರ್ಜರಿ ಡಾ| ರಾಜಗೋಪಾಲ ಶೆಣೈ ಹಾಗೂ ಮಲಕಾ ಕೆ.ಎಂ.ಸಿ. ಮೆಡಿಕಲ್ ಆಸ್ಪತ್ರೆ, ಮಲೇಷ್ಯಾದ ನಿವೃತ್ತ ಪ್ರೊಫೆಸರ್, ಸರ್ಜನ್ ಡಾ| ಸಂತೋಷ ಪೈ ಸಮಾರಂಭ ಉದ್ಘಾಟಿಸಿ, ಲೇಖಕ ಡಾ| ಉಮೇಶ ಭಟ್ ಅವರ ವೈದ್ಯಕೀಯ ಹಾಗೂ ಸಾಮಾಜಿಕ ಚಿಂತನೆಗಳನ್ನು ಕೊಂಡಾಡಿ ಶುಭ ಹಾರೈಸಿದರು.
ಡಾ| ಉಮೇಶ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾದಂಬರಿ ಬರೆಯಲು ಪ್ರೇರಣೆ ನೀಡಿದ ಹಿನ್ನೆಲೆಗಳನ್ನು ವಿವರಿಸಿ, ಪ್ರಕಟಿಸುವ ಮುನ್ನ ಮಾರ್ಗದರ್ಶನ ನೀಡಿದ ಹಲವರನ್ನು ಅಭಿನಂದಿಸಿದರು. ಪುಸ್ತಕ ಪ್ರಕಟಿಸಿದ ‘ಮಣಿಪಾಲ ಯುನಿವರ್ಸಲ್ ಪ್ರೆಸ್’ ನೀಡಿದ ಪ್ರೇರಣೆಗೆ ಅಭಿನಂದನೆ ಸಲ್ಲಿಸಿದರು.
‘ಕುಂದಪ್ರಭ’ ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ಸ್ವಾಗತಿಸಿದರು. ಡಾ| ಬಿ. ವಿ. ಉಡುಪ, ಲೇಖಕ, ಡಾ| ಉಮೇಶ ಭಟ್ ಅವರನ್ನು ಪರಿಚಯಿಸಿದರು. ಸುಮನಾ ಹೇರ್ಳೆ ಕೋಟ, ಅತಿಥಿಗಳನ್ನು ಪರಿಚಯಿಸಿದರು. ಧಾರಿಣಿ ಕುಂದಾಪುರ ಸ್ವಾಗತ ಗೀತೆ ಹಾಡಿದರು.
ರೇಡಿಯೋ ಕುಂದಾಪ್ರ ಸಂಯೋಜಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ಇಂಜಿನಿಯರ್ ರಮಾನಂದ ಕೆ. ವಂದಿಸಿದರು. ಎಚ್. ಸೋಮಶೇಖರ ಶೆಟ್ಟಿ ಸಹಕರಿಸಿದರು.