ಜೂನ್ 14 ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಅಂಗವಾಗಿ ಕಸ್ತೂರಬಾ ಆಸ್ಪತ್ರೆ ಮಣಿಪಾಲ ಆಯೋಜಿಸಿದ ರಕ್ತದಾನಿಗಳಿಗೆ ಹಾಗೂ ರಕ್ತದಾನ ಶಿಬಿರದ ಆಯೋಜಕರಿಗೆ ಗೌರವ ಪ್ರಧಾನ ಸಭಾ ಕಾರ್ಯಕ್ರಮದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಸತತವಾಗಿ 4 ನೇ ಬಾರಿ ರಕ್ತ ಕೇಂದ್ರ ಮಣಿಪಾಲ ಸಹಕಾರದಲ್ಲಿ ಅತೀ ಹೆಚ್ಚು ರಕ್ತದಾನ ಶಿಬಿರ ಆಯೋಜಿಸಿದಕ್ಕಾಗಿ ಡಾ. ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿ ಯನ್ನು ಸಂಸ್ಥೆಯ ಅಧ್ಯಕ್ಷರಾದ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಅವರಿಗೆ ಕುಮಾರಿ ರಶ್ಮಿ ಎಸ್ ಆರ್ ,ಸಹಾಯಕ ಆಯುಕ್ತರು ಕುಂದಾಪುರ ಇವರು ನೀಡಿ ಗೌರಾವಿಸಿದರು.
ಈ ಸಂದರ್ಭದಲ್ಲಿ ಡಾ. ಪದ್ಮರಾಜ್ ಹೆಗ್ಡೆ, ಡೀನ್ ಕೆಎಂಸಿ ಮಣಿಪಾಲ, ಡಾ. ಅವಿನಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು ಕೆಎಂಸಿ ಮಣಿಪಾಲ ಡಾ.ಶಮಿ ಶಾಸ್ತ್ರೀ, ನಿರ್ದೆಶಕರು ರಕ್ತ ಕೇಂದ್ರ ಕೆಎಂಸಿ ಮಣಿಪಾಲ, ಡಾ. ಗಣೇಶ್ ಮೋಹನ್ ವೈದ್ಯರು ,ರಕ್ತಕೇಂದ್ರ ಕೆಎಂಸಿ ಮಣಿಪಾಲ ಉಪಸ್ಥಿತ್ತರಿದ್ದರು.
ಕಳೆದ 4 ವರ್ಷಗಳಿಂದ ಕರಾವಳಿ ಕರ್ನಾಟಕದ್ಯಾಂತ ದಾಖಲೆಯ ರಕ್ತದಾನ ಶಿಬಿರ ಆಯೋಜನೆ ಹಾಗೂ ನಿತ್ಯ ತುರ್ತು ರಕ್ತದಾನಿಗಳನ್ನು ವಿವಿಧ ಆಸ್ಪತ್ರೆಗೆ ಪೂರೈಸಿ ಸಾವಿರಾರು ಜೀವಗಳಿಗೆ ಪುನರ್ಜನ್ಮ ನೀಡಿದ ಅಭಯಹಸ್ತ ಉಡುಪಿ, ಕೇವಲ 4 ವರ್ಷದಲ್ಲಿ ದಾಖಲೆಯ 208 ರಕ್ತದಾನ ಶಿಬಿರವನ್ನು ಆಯೋಜಿಸಿ 23,000 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಸಂಸ್ಥೆ.
ಕರ್ನಾಟಕ ರಾಜ್ಯ ಸರಕಾರದಿಂದ 2021 ರಲ್ಲಿ ಅತೀ ಹೆಚ್ಚು ರಕ್ತ ಸಂಗ್ರಹಕ್ಕಾಗಿ ಪ್ರಥಮ ಸ್ಥಾನ ನೀಡಿ ಬೆಂಗಳೂರಿನಲ್ಲಿ ಗೌರವ ಸನ್ಮಾನ, 2023 ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹತ್ತು ಹಲವು ಸಂಸ್ಥೆಯಿಂದ ಗೌರವ ಸನ್ಮಾನ ಪಡೆದಿದೆ.