ವರದಿ : ಮಝರ್, ಕುಂದಾಪುರ
ಕುಂದಾಪುರ : ವಿಶ್ವ ಪರಿಸರ ದಿನಾಚರಣೆ ಯ ಅಂಗವಾಗಿ ಸಮೀಪದ ಮೂಡುಬಗೆಯ ವಾಗ್ಜ್ಯೋತಿ ಮೂಗ ಮತ್ತು ಕಿವುಡ ಮಕ್ಕಳ ಶಾಲೆಯ ತೋಟದಲ್ಲಿ ಹೂವಿನ ಹಾಗೂ ಹಣ್ಣಿನ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಕೋಡಿ ರತ್ನಾಕರ ಪೂಜಾರಿಯವರು ಚಾಲನೆ ನೀಡಿದರು.
ಆರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ರವೀಂದ್ರ ರವರು ಮಾತನಾಡಿ ವಿಶೇಷ ಚೇತನ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಹಸಿರು ಮತ್ತು ಪರಿಸರವು ಬೀರುವ ಮಹತ್ವವನ್ನು ಹೇಳಿದರು.
ತನ್ನ ಹುಟ್ಟು ಹಬ್ಬದ ಸಲುವಾಗಿ ಹೆತ್ತವರೊಂದಿಗೆ ಭೇಟಿ ನೀಡಿದ ಶಾಲೆಯ ಹಳೆ ವಿದ್ಯಾರ್ಥಿನಿ ವಿಶೇಷ ಚೇತನೆ ಪ್ರಗತಿ ಶೆಟ್ಟಿ ವಿದ್ಯಾರ್ಥಿ ಗಳಿಗೆ ಚಾಕ್ ಲೇಟ್ ಗಳನ್ನು ನೀಡಿ ಸಂಭ್ರಮಿಸಿದಳು. ಡಾ.ರಾಜ್ ಸಂಘಟನೆಯ ಸುನೀಲ್ ಖಾರ್ವಿ ತಲ್ಲೂರು, ಶ್ರೀಧರ್ ಗಾಣಿಗ ವಿದ್ಯಾರ್ಥಿಗಳಿಗೆ ಸೇಬುಗಳನ್ನು ನೀಡಿದರು ಶಾಲಾ ಪಾಲಕರ ಸಂಘದ ಅಧ್ಯಕ್ಷೆ ಶ್ರೀ ಮತಿ ಶ್ಯಾಮಲಾ ರತ್ನಾಕರ್,ಶಾಲೆಯ ಶಿಕ್ಷಕ ವೃಂದ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.