ಡಾ. ಪುನೀತ್ ರಾಜಕುಮಾರ್ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಚ್ಚ ಹಸಿರು-ಕೆಎಸ್ ಗಣೇಶ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ನಡೆ ಮತ್ತು ನುಡಿಯಿಂದ ಡಾ. ಪುನೀತ್ ರಾಜಕುಮಾರ್ ರವರು ಹೆಸರು ಕೋಟ್ಯಾಂತರ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಚ್ಚಹಸಿರಾಗಿ ನೆಲೆಸಿದ್ದಾರೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಕೆಎಸ್. ಗಣೇಶ್ ಅಭಿಪ್ರಾಯಪಟ್ಟರು.

ಕೋಲಾರ : ನಗರದ ಮುಸ್ಸಂಜೆ ಮನೆ ವೃದ್ಧಾಶ್ರಮದಲ್ಲಿ ರಾಶಿರಾಪು ಅಭಿಮಾನಿಗಳ ಸಂಘ ಹಾಗೂ ಜಾಗೃತಿ ಸೇವಾ ಸಮಿತಿ ಇವರ ಸಹಯೋಗದೊಂದಿಗೆ ಕರ್ನಾಟಕ ರತ್ನ, ಪವರ್ ಸ್ಟಾರ್, ಯೂತ್ ಐಕಾನ್ ಡಾ. ಪುನೀತ್ ರಾಜಕುಮಾರ್ ರವರ 6ನೇ ತಿಂಗಳ ಪುಣ್ಯ ಸ್ಮರಣೆ ಹಾಗೂ ವೃದ್ಧಾಶ್ರಮಕ್ಕೆ ಅಗತ್ಯವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಪ್ಪು ರವರು ಆಗಲಿ 6 ತಿಂಗಳಾದರೂ ಅವರ ಹೆಸರು ಕನ್ನಡಿಗರ ಮನಸ್ಸಿನಲ್ಲಿ ಹಚ್ಚಹಸಿರಾಗಿ ಇದ್ದಾರೆ.ಕನ್ನಡದ ಸುಪುತ್ರ ಡಾ‌. ರಾಜಕುಮಾರ್ ರವರ ಪುತ್ರರಾಗಿ ಜನಿಸಿ 46 ವರ್ಷಗಳ ತಮ್ಮ ಜೀವನವನ್ನು ನಡೆಸಿ, ತಮ್ಮ ಜನಸೇವೆ ಹಾಗೂ ಚಲನಚಿತ್ರಗಳನ್ನು ಜನತೆಗೆ ತಮ್ಮ ನೆನಪನ್ನು ಬಿಟ್ಟು ಹೋಗಿದ್ದಾರೆ. ಅದಕ್ಕಿಂತ ಮಿಗಿಲಾಗಿ ತಮ್ಮ ವ್ಯಕ್ತಿತ್ವದ ಮೂಲಕ ಇಡೀ ವಿಶ್ವವನ್ನೇ ಮುಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇಡೀ ಜಗತ್ತಲ್ಲಿ ಅನೇಕ ಭಾಷೆಗಳಲ್ಲಿ ಸಿನಿಮಾ ಬರುತ್ತದೆ , ಲಕ್ಷಾಂತರ ಮಂದಿ ನಟರು ಸಹ ಇದ್ದಾರೆ. ಆದರೆ ಯಾರಾದರೂ ಒಬ್ಬ ನಟ ಮಾಡಿರುವ ಒಳ್ಳೆ ಕೆಲಸಗಳನ್ನು ಅವರ ಅಭಿಮಾನಿಗಳು ಅನುಸರಿಸುತ್ತಿದ್ದಾರೆ ಎಂದರೆ.ಅದು ಕೇವಲ ಇಬ್ಬರು ನಟರು ನಮ್ಮ ಕಣ್ಣಮುಂದೆ ಬರುತ್ತಾರೆ, ಇಬ್ಬರು ನಟರು ಕನ್ನಡದಲ್ಲೇ ಇರುವುದು ನಮ್ಮೆಲ್ಲರ ಸೌಭಾಗ್ಯ, ಅದು ಡಾ. ರಾಜ್ ಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಎಂದು ತಿಳಿಸಿದರು.
ಡಾ. ರಾಜಕುಮಾರ್ ರವರು ಸಿನಿಮಾಗಳಲ್ಲಿ ಕುಡಿಯಬೇಡ ಎಂದು ಹೇಳಿದ್ದರು ಅದರಂತೆ ಎಷ್ಟು ಅಭಿಮಾನಿಗಳು ಕುಡಿತ ಚಟದಿಂದ ದೂರವಾಗಿದ್ದಾರೆ,ಬಂಗಾರದ ಮನುಷ್ಯ ಚಿತ್ರ ನೋಡಿದವರು ಎಷ್ಟು ಮಂದಿ ರೈತರಾಗಿದ್ದಾರೆ. ಅದರಂತೆ ಪುನೀತ್ ರಾಜಕುಮಾರ್ ರವರು ನಟಿಸಿರುವ ರಾಜಕುಮಾರ ನೋಡಿರುವ ಸಾಕಷ್ಟು ಜನ ತಮ್ಮ ತಂದೆತಾಯಿಗಳನ್ನು ವೃದ್ಧಾಶ್ರಮದಿಂದ ವಾಪಸ್ ಮನೆಗೆ ಕರೆದೊಯ್ದಿದ್ದಾರೆ ತಿಳಿಸಿದರು.
ವಕೀಲ ಹಾಗೂ ಜಾಗೃತಿ ಸೇವಾ ಸಂಸ್ಥೆಯ ಅಧ್ಯಕ್ಷ ಕೆಆರ್. ಧನರಾಜ್ ಮಾತನಾಡಿ ನಮ್ಮ ವೃದ್ಧಾಶ್ರಮದಲ್ಲಿ ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆ ಮಾಡುತ್ತಿರುವುದು ಒಂದು ಹೆಮ್ಮೆಯ ಸಂಗತಿ, ಹಿಂದೆ ನಮ್ಮ ವೃದ್ಧಾಶ್ರಮ ಆರ್ಥಿಕ ಸಂಕಷ್ಟದಲ್ಲಿದ್ದಾಗ ಪುನೀತ್ ರಾಜಕುಮಾರ್ ರವರಿಗೆ ಪತ್ರ ಬರೆಯಬೇಕೆಂದು ಅಂದುಕೊಂಡಿದ್ದೆ ಆದರೆ ಅವರು ಇಂದು ನಮ್ಮೊಂದಿಗಿಲ್ಲ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಜೀವಂತವಾಗಿದ್ದಿದ್ದರೆ ನಮ್ಮ ವೃದ್ಧಾಶ್ರಮಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರ ಅಕೃ.ಸೋಮಶೇಖರ್, ಕಲಾವಿದ ವಿಷ್ಣು ಜಯದೇವ ಪ್ರಸನ್ನ,ಕೋಲಾರ ಜಿಲ್ಲಾ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕೋನಾ. ಪ್ರಭಾಕರ್, ನಾ ಮಂಜುನಾಥ್, ಸುನಿಲ್ ರಾಜ್, ರಾಶಿರಾಪು ಅಭಿಮಾನಿಗಳ ಸಂಘದ ಅಧ್ಯಕ್ಷ ಶ್ರೀಕಾಂತ್ ಗೌಡ, ರಾಜವಂಶ ಯುವಪಡೆ ಅಧ್ಯಕ್ಷ ಮೋನಿಕ್, ಅಪ್ಪು ಯುವ ಬ್ರಿಗೇಡ್ ಅಧ್ಯಕ್ಷ ಗೋಕುಲ್ ,ವಂಶಿ, ಪುನೀತ್, ನಿಖಿಲ್, ವಿಜಯಲಕ್ಷ್ಮಿ, ಪ್ರಮೀಳಮ್ಮ, ಶ್ರೀಗಂಧ, ಪೃಥ್ವಿರಾಜ್, ಭೂಮಿಕಾ ಮುಂತಾದವರು ಉಪಸ್ಥಿತರಿದ್ದರು