

ಬಿಷಪ್ ಮತ್ತು ಕೆಥೋಲಿಕ್ ಚರ್ಚ್ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂ|ಫಾ|ಡಾ|.ಜೆ.ಬಿ.ಸಲ್ಡಾನ್ಹಾ ಮತ್ತು ರಾಯ್ ಕ್ಯಾಸ್ತಲಿನೊ ಹಾಗೂ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೋ ಮಂಗಳೂರಿನ ಪೋಲಿಸ್ ಆಯುಕ್ತರನ್ನು ಭೇಟಿ ಮಾಡಿ, ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ|ಪ್ರಸಾದ್ ಭಂಡಾರಿ ಅವರು ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಂಗಳೂರಿನ ಪೋಲಿಸ್ ಆಯುಕ್ತರಾದ ಕುಲ್‍ದೀಪ್ ಕುಮಾರ್ ಜೈನ್ ಐ.ಪಿ.ಎಸ್. ಭರವಸೆ ನೀಡಿದರು. ನಿಯೋಗದಲ್ಲಿ ಕ್ಯಾಥೋಲಿಕ್ ಸಭಾ ಪದಾಧಿಕಾರಿಗಳಾದ ಶ್ರೀಮತಿ ನೊರೀನ್ ಪಿಂಟೋ ಪ್ರಧಾನ ಕಾರ್ಯದರ್ಶಿ, ಅಲ್ಫೋನ್ಸ್ ಫೆನಾರ್ಂಡಿಸ್ ಖಜಾಂಚಿ, ವಿನೋದ್ ಪಿಂಟೊ ಉಪಾಧ್ಯಕ್ಷರು, ಫ್ರಾನ್ಸಿಸ್ ಸೆರಾರಾವ್ ಜಂಟಿ ಖಜಾಂಚಿ, ಆರ್ಥರ್ ಡಿ’ಸೋಜಾ ಬಂಟ್ವಾಳ ವಲಯದ ಅಧ್ಯಕ್ಷರು, ಲ್ಯಾನ್ಸಿ ಮಸ್ಕರೇನಸ್ ಪುತ್ತೂರು ವಲಯದ ಅಧ್ಯಕ್ಷರು, ಕಾಲಿನ್ ಮಿರಾಂದಾ ಸಿಟಿ ವಲಯದ ಅಧ್ಯಕ್ಷರು, ಸ್ಟ್ಯಾನಿ ಬಂಟ್ವಾಳ್ ಮಾಧ್ಯಮ ಸಂಯೋಜಕರು ಹಾಜರಿದ್ದರು.



