

ಕೋಲಾರ: ಜಿಲ್ಲಾಧಿಕಾರಿಗಳಾದ ವೆಂಕಟ್‍ರಾಜಾ ರವರು ಭಾರತ ದಾಖಲೆ ಪುಸ್ತಕ ಸೇರಿದ ಹೋರಾಟಗಾರ ಡಾ.ಕೋದಂಡ ರಾಮ್ ರವರಿಗೆ ‘ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ 2022’ ಪ್ರಮಾಣಪತ್ರ ನೀಡಿ ತಮ್ಮ ಸಾಮಾಜಿಕ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳು ಇನ್ನಷ್ಟು ಮುಂದುವರೆಯಲಿ ಎಂದು ಆಶಿಸುತ್ತಾ ಶುಭಕೋರಿದರು.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ದಳವಾಯಿಹೊಸಹಳ್ಳಿಯ ದಲಿತ ಕುಟುಂಬಕ್ಕೆ ಸೇರಿದ ದಿ.ರಾಮಪ್ಪ ನವರ ಮಗನಾದ ಕೋದಂಡ ರಾಮ್ ರವರು ದಲಿತ ಸಂಘಟನೆಗಳ ಹೋರಾಟಗಳನ್ನು ನಡೆಸಿಕೊಂಡು ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಅನಂತರ “ಅಂಬೇಡ್ಕರ್ ಸ್ವಾಭಿಮಾನಿ ಸೇನೆ” ಎಂಬ ರಾಜ್ಯ ಮಟ್ಟದ ಸಂಘಟನೆ ಸ್ಥಾಪಿಸಿ 5ವರ್ಷಗಳಿಂದ ಸಾಮಾಜಿಕವಾಗಿ ಚಳವಳಿ ನಡೆಸುತ್ತಾ ಬಂದಿದ್ದಾರೆ.
ದಲಿತರಲ್ಲಿ ಕಾನೂನು ಅರಿವಿನ ಕಾರ್ಯಕ್ರಮಗಳನ್ನು ಮೂಡಿಸುತ್ತಾ ಅವರಲ್ಲಿ ಬಹುಜನ ನಾಯಕರ ಬಗ್ಗೆ ಬಹುಜನರ ಇತಿಹಾಸದ ಬಗ್ಗೆ ಬುದ್ಧ, ಬಸವ, ಡಾ.ಅಂಬೇಡ್ಕರ್, ಪುಲೇ, ಪೆರಿಯಾರ್, ನಾರಾಯಣಗುರುಗಳ ಮತ್ತು ಇತರ ವಿಷಯಗಳ ಬಗ್ಗೆ ತಿಳಿಸುತ್ತಾ ಸಾಗಿ ಮುಂದೆ ಸಾಮಾಜಿಕ ಮತ್ತು ಕಾನೂನು ಕಾಯಿದೆಗಳ ಬಗ್ಗೆ ದಲಿತ ಕಾಲೋನಿಗಲ್ಲಿ ತನ್ನ ಸಂಘಟನಾ ಕಾರ್ಯಕರ್ತರಿಗೆ ಸುಮಾರು 200 ಕ್ಕೂ ಹೆಚ್ಚು ಅರಿವಿನ ಜಾಥಾ ಮತ್ತು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಅವರಲ್ಲಿ ಅರಿವು ಮೂಡಿಸಿ ಭಾರತ ದಾಖಲೆ ಪುಸ್ತಕ ಸೇರಿ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
:- ಡಾ.ಕೋದಂಡ ರಾಮ್, ರಾಜ್ಯಾಧ್ಯಕ್ಷರು ಅಂಬೇಡ್ಕರ್ ಸ್ವಾಭಿಮಾನಿ ಸೇನೆ
