“ಪ್ರತಿಭೆಯನ್ನು ಅಡಗಿಸಿಡಬಾರದು,ಪ್ರತಿಭೆಯಿಂದ ನೀವು ಸಮಾಜದ ಬೆಳಕಾಗಬೇಕು” ಪ್ರತಿಭಾ ಕಾರಂಜಿಯಲ್ಲಿ ಫಾ|ಸ್ಟ್ಯಾನಿ ತಾವ್ರೊ

ಕುಂದಾಪುರ, ಅ.24: “ನಿಮ್ಮ ಪ್ರತಿಭೆಯನ್ನು ಅಡಗಿಡಿಸಬೇಡಿ, ಬೆಳಕು ಯಾವಗಲೂ ಪ್ರಜ್ವಲಿಸಬೇಕು, ಬೆಳಕಿನ ದೀಪವನ್ನು ಒಂದು ಪಾತ್ರೆಯೊಳಗೆ ಹಾಕಿ ಇಟ್ಟರೆ, ಅದರಿಂದೇನು ಪ್ರಯೋಜನವಿಲ್ಲ, ಬೆಳಕಿನ ದೀಪವನ್ನು ಎತ್ತರದಲ್ಲಿ ಇಟ್ಟರೆ, ಅದರಿಂದ ಎಲ್ಲ ಕಡೆ ಬೆಳಕು ಚೆಲ್ಲುತ್ತದೆ, ಅದೇ ರೀತಿ ಪ್ರತಿಭೆಯನ್ನು ಕೂಡ, ಅಡಗಿಸಿಡಬಾರದು. ನಿಮ್ಮ ಪ್ರತಿಭೆಯಿಂದ ನೀವು ಸಮಾಜದ ಬೆಳಕಾಗಬೇಕು” ಎಂದು ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಮತ್ತು ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳು, ಕುಂದಾಪುರ ಇವರ ಸಹಯೋಗದೊಂದಿಗೆ ವಡೇರಹೋಬಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2022-23 ರ ಕಾರ್ಯಕ್ರಮವನ್ನು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. “ಪ್ರತಿಭೆ ಎಲ್ಲಾ ಮಕ್ಕಳಲ್ಲಿ ಇದೆ, ಅದು ಶ್ರೀಮಂತರ ಸೊತ್ತು ಮಾತ್ರವಲ್ಲ, ಪ್ರತಿಭೆ ಬಡವರಲ್ಲಿಯೂ, ಭಿಕ್ಷುಕರ ಮಕ್ಕಳಲ್ಲಿಯೂ ಇದೆ, ಅದನ್ನು ಅಡಗಿಡಿಸದೆ, ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿರಿ, ನಿಮ್ಮ ಪ್ರತಿಭೆ ಹೊರಹೊಮ್ಮಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೂಕ್ತ ವೇದಿಕೆ’ ಯಾಗಿದೆ ಎಂದು ಅವರು ನುಡಿದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಪುರಸಭೆಯ ಸದಸ್ಯ ಪ್ರಭಾಕರ, ಜಯಶೀಲ ಶೆಟ್ಟಿ ಮುಖ್ಯ ಶಿಕ್ಷಕರು ಬ್ಯಾರೀಸ್ ಅನುದಾನಿತ ಶಾಲೆ ಹಾಗೂ ಅನುದಾನಿತ ಪೌಢ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರು, ಅಂಪಾರು ದಿನಕರ ಶೆಟ್ಟಿ, ಪ್ರಾರ್ಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಸರಕಾರಿ ನೌಕರರ ಸಂಘದ ಉಡುಪಿ ಜಿಲಾಧ್ಯಕ್ಷರು, ಕಾರ್ಯಕ್ರಮಕ್ಕೆ ಶುಭ ಕೋರಿದರು. ರೋಜರಿ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂ|ಅಶ್ವಿನ್ ಅರಾನ್ಹಾ, ಸಿ.ಆರ್.ಪಿ. ಸುನಿತಾ ಬಾಂಜ್ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ರೋಜರಿ ಚರ್ಚಿನ ಉಪಾಧ್ಯಕ್ಷರಾದ ಎಲ್.ಜೆ. ಫೆರ್ನಾಂಡಿಸ್, ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು, ಪ್ರತಿಭಾ ಕಾರಂಜಿಯ ತೀರ್ಪುಗಾರರು, ವಿವಿಧ ಕ್ಲಸ್ಟರಿನ ಸಿ.ಅರ್.ಪಿ. ಯವರು ಉಪಸ್ಥಿತರಿದ್ದರು.
ಸಂತೋಷ್ ಕುಮಾರ್ ಶೆಟ್ಟಿ ಬಿ.ಅರ್.ಪಿ. ಪ್ರಸ್ತಾವಿಕ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇಲ್ಲಿನ ಸಮನ್ವಯ ಅಧಿಕಾರಿ ಅಶೋಕ್ ನಾಯ್ಕ್, ಸ್ಪರ್ಧಿಗಳಿಗೆ, ತೀರ್ಪುಗಾರರಿಗೆ ಸಲಹೆ ಸೂಚನೆ ನೀಡಿದರು. ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೇಸ್ ಶಾಂತಿ ಸ್ವಾಗತಿಸಿದರು. ಶಿಕ್ಷಕ ರತ್ನಾಕರ ಶೆಟ್ಟಿ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸತ್ಕರಿಸಿದರು. ಸಂತ ಮೇರಿಸ್ ಪಿ.ಯು. ಕಾಲೇಜಿನ ಉಪನ್ಯಾಸಕರಾದ ನಾಗರಜ್ ಶೆಟ್ಟಿ ಮತ್ತು ಶಿಕ್ಷಕಿ ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು