ಶ್ರೀನಿವಾಸಪುರ : ಅಪ್ರಾಪ್ತ ವೈಯಸ್ಸಿನ ಮಕ್ಕಳ ಕೈಗೆ ದ್ವಿಚಕ್ರ ವಾಹನ ನೀಡಬೇಡಿ ಪ್ರಸ್ತುತ ಕಾನೂನು ವ್ಯವಸ್ಥೆಯು ಬದಲಾಗಿ ಶಿಕ್ಷೆ ಪ್ರಮಾಣ ಜಾಸ್ತಿ ಆಗಿದೆ ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಕಾರಣಕ್ಕೂ ದ್ವಿಚಕ್ರವಾಹನಗಳನ್ನು ಓಡಿಸಲು ಕೊಡಬೇಡಿ ಎಂದು ಕೋಲಾರ ಅಡಿಷನಲ್ ಎಸ್ ಪಿ ರವಿಶಂಕರ್ ಸಲಹೆ ನೀಡಿದರು.
ಪಟ್ಟಣದ ಸಂತೆ ಮೈದಾನದಲ್ಲಿ ಭಾನುವಾರ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಸಾರ್ವಜನಿಕರಿಗೆ ಕಾನೂನು ಅರಿವು ಸಭೆಗೆ ಚಾಲನೆ ನೀಡಿ ಮಾತನಾಡಿದರು.
ವಿಶೇಷವಾಗಿ ಯುವಕರು ವಿದ್ಯಾರ್ಥಿಗಳು ಪೋಷಕರ ಬಗ್ಗೆ ಗಮನಹರಿಸಬೇಕು ಎಷ್ಟು ಕಷ್ಟ ಪಟ್ಟು ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ ನಾವು ವಿದ್ಯಾಭ್ಯಾಸ ಮಾಡಬೇಕಾದರೆ ನಮ್ಮ ತಾಯಿ ಕೂಲಿ ವ್ಯವಸಾಯ ಮಾಡಿ ಓದಿಸುತ್ತಿದ್ದಾರೆ ನಮ್ಮ ತಂದೆ ತಾಯಿಯನ್ನು ಹ್ಯಾಗೆ ನೋಡಬೇಕೆಂದು ನಿಮಗೂ ಅರಿವು ಇರಬೇಕೆಂದು ಯುವಕರಿಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪೋಷಕರು ತಮ್ಮ ಮಕ್ಕಳನ್ನು ಜಾಗೃತರಾಗಿ ಬೆಳಸಿ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದ ರೀತಿಯಲ್ಲಿ ಬೆಳಸಿ, ಮಕ್ಕಳ ದಿನ ನಿತ್ಯ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನಹರಿಸಿ ಎನ್ನುತ್ತಾ, ಯುವಕರು ಸಹ ತಮ್ಮ ತಂದೆ ತಾಯಿ ನಿಮ್ಮನ್ನೆ ನಂಬಿಕೊಂಡು ಇರುತ್ತಾರೆ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ಸಲಹೆ ನೀಡಿದರು.
ಸಾರ್ವಜನಿಕರು ಹಾಗು ಸಂತೆ ಮೈದಾನದ ನಿವಾಸಿಗಳು ಅಹವಾಲುಗಳನ್ನ ನೀಡಿದರು.ಪೋಲಿಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ , ಸಿಬ್ಬಂದಿಗಳಾದ ರಾಮಚಂದ್ರ, ಸಂಪತ್ತು , ಚಂದ್ರಶೇಖರ್, ಮುಖಂಡರಾದ ರಾಮಕೃಷ್ಣ, ಬುಜ್ಜಿ, ಆನಂದ್, ಪುನಿತ್ ಹಾಗು ನಿವಾಸಿಗಳು ಇದ್ದರು.