

ಬಸ್ರೂರು : ಇಲ್ಲಿನ ಕೆಳಪೇಟೆಯ ನೀರೋಣಿಯ ನಿವೃತ್ತಮುಖ್ಯೋಪಾಧ್ಯಾಯ ಟಿ.ನಾಸಿರಾಲಿ ಅವರು ಬಸ್ರೂರು ಕೆಳಪೇಟೆಯ ಡಾ| ಕೆ.ಟಿ. ಭಾಸ್ಕರ್ ನಾಯರ್ ರಸ್ತೆಯಿಂದ ಮುಂದಿನ ತಿರುವಿನವರೆಗೆ 150 ಮೀ. ಉದ್ದದ 10 ಮೀ. ಅಗಲದ ಸ್ವಂತ ಸ್ಥಳವನ್ನು ಸಾರ್ವಜನಿಕ ರಸ್ತೆಗಾಗಿ ಉಚಿತವಾಗಿ ಸ್ಥಳದಾನ ಮಾಡಿದ್ದಾರೆ.ನಾಸಿರಾಲಿ ಅವರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಜೆ. ಅವರಿಗೆ ದಾನಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪೀಟರ್ ಸೆರಾವೊ, ಲಾರೆನ್ಸ್ ಸೆರಾವೊ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ.ಗೆ ಸ್ಥಳದಾನ ಸ ಮಾಡುವಲ್ಲಿ ಬಸ್ರೂರು ಜಾಮಿಯಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಅಜೀಜ್ ವಿಶೇಷ ಮುತುವರ್ಜಿ ವಹಿಸಿದ್ದರು.