ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ವತಿಯಿಂದ ಕೆದಿಂಜೆ ಶಾಲಾ ಗೌರವ ಶಿಕ್ಷಕರ ಸಂಭಾವನೆಗೆ ದೇಣಿಗೆ ಚೆಕ್ ಹಸ್ತಾಂತರ

ವರದಿ:  ವಾಲ್ಟರ್ಮೊಂತೇರೊ, ಬೆಳ್ಮಣ್ಣು

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇತ್ತಿಚೆಗೆ ಬಹಳಷ್ಟು ಕಡಿಮೆಯಾಗುತ್ತಿದೆ ನಮ್ಮ ನೆರೆಯ ಕೆಲವು ಶಾಲೆಗಳು ಈಗಗಲೇ ಮುಚ್ಚಲ್ಲಟ್ಟಿವೆ.
ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ 65 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರದ ನಿಯಮದ ಪ್ರಕಾರ ಕೆದಿಂಜೆ ಶಾಲೆಯಲ್ಲಿ ಇಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಕೊರತೆಯನ್ನು ನೀಗಿಸಲು ಮೂವರು ಗೌರವ ಶಿಕ್ಷಕರನ್ನು ನೇಮಿಸಲಾಗಿದೆ. ಅವರಿಗೆ ಗೌರವ ಸಂಭಾವನೆ ನೀಡಲು ದಾನಿಗಳ ನಿರೀಕ್ಷೆಯಲ್ಲಿದ್ದಾರೆ.
ಈ ಬಗ್ಗೆ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ಗೆ ಕೆದಿಂಜೆ ಶಾಲಾ ಮುಖ್ಯ ಶಿಕ್ಷಕರು ನೀಡಿದ ಮನವಿಯ ಮೇರೆಗೆ ಸದಸ್ಯರೆಲ್ಲರೂ ಸೇರಿ ಸದಸ್ಯರ ಸಂಪಾದನೆಯ ಒಂದಾಂಶವನ್ನು ಒಟ್ಟು ಸೇರಿಸಿ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹ ಮಾಡಿ ರೂ. 10,000/- ಮೊತ್ತದ ಚೆಕ್‍ನ್ನು ಶಾಲಾ ಮುಖ್ಯ ಶಿಕ್ಷಕರಾದ ಪ್ರಥ್ವಿರಾಜ್ ಬಲ್ಲಾಳ್ ಅವರಿಗೆ ಸಂಘದ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಅವರು ಹಸ್ತಾಂತರಿಸಿದರು.
ಸುಮಾರು 86 ವರ್ಷಗಳ ಸುದೀರ್ಘ ಇತಿಹಾಸವಿರುವ ಕೆದಿಂಜೆ ಶಾಲೆಯನ್ನು ನಾವೆಲ್ಲರೂ ಒಟ್ಟು ಸೇರಿ ಉಳಿಸಲು, ಶಾಲಾ ಮಕ್ಕಳ ಅಭಿವೃದ್ದಿಗೆ ಇನ್ನೂ ಮುಂದಿನ ದಿನಗಳಲ್ಲೂ ನಮ್ಮಿಂದಾದ ಸಹಕಾರವನ್ನು ನೀಡುತ್ತೇವೆ ಎಂದು ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷರಾದ ಬೋಳ ಉದಯ ಅಂಚನ್, ಪೂರ್ವಾಧ್ಯಕ್ಷರಾದ ದಿನೇಶ್ ಪೂಜಾರಿ ಬೀರೋಟ್ಟು, ಸತೀಶ್ ಪೂಜಾರಿ ಅಬ್ಬನಡ್ಕ, ಉಪಾಧ್ಯಕ್ಷರಾದ ಸುರೇಶ್ ಅಬ್ಬನಡ್ಕ, ಕೋಶಾಧಿಕಾರಿ ವೀಣಾ ಪೂಜಾರಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಸದಸ್ಯರಾದ ಪದ್ಮಶ್ರೀ ಪೂಜಾರಿ ಅಬ್ಬನಡ್ಕ ಮೊದಲಾದವರಿದ್ದರು
.