ಕುಂದಾಪುರ, ಜು.8: ಕಥೊಲಿಕ್ ಸಭಾ ಕುಂದಾಪುರ ಘಟಕದ ವತಿಯಿಂದ, ಕುಂದಾಪುರ ಚರ್ಚಿನ ಆರೋಗ್ಯ ಆಯೋಗ ಮತ್ತು ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಅನಡೆಯಿತು.
ಹೋಲಿ ರೋಸರಿ ಚರ್ಚ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಕಾರ್ಯಕ್ರವನ್ನು ಉದ್ಘಾಟಿಸಿ “ರಕ್ತದಾನಕಿಂತ ಶ್ರೇಷ್ಠ ದಾನವಿಲ್ಲ, ಒಬ್ಬರು ರಕ್ತದಾನ ನೀಡಿದರೆ, 3 ಜೀವಗಳನ್ನು ಉಳಿಸಬಹುದು, ರಕ್ತದಾನ ಜೀವ ಉಳಿಸುವ ಮಹತ್ಕಾರ್ಯವಾಗಿದೆ’ ಎಂದು ತಮ್ಮ ಸಂದೇಶದಲ್ಲಿ ನುಡಿದು ಸ್ವತಹ ಅವರು ರಕ್ತದಾನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾರಾಯಣ ಹೇಲ್ತ್ ಕೇರ್ ಕೋಟೆಶ್ವರ ಇದರ ವೈದ್ಯ ಡಾ.ಪ್ರಸಾದ್ ಎನ್ ಶೆಟ್ಟಿ ಮಾತನಾಡಿ ‘ರಕ್ತದಾನ ಮಾಡಿದರೆ ನಮಗೆ ತೊಂದರೆ ಆಗುತ್ತದೆ ಎಂದು ಹಲವರು ಎಣಿಸುತ್ತಾರೆ, ಆದರೆ ಅದು ತಪ್ಪು ಚಿಂತನೆ, ಇವತ್ತಿನ ಕಾಲದಲ್ಲಿ ಹ್ರದಯಘಾತ ಅದರಲ್ಲಿಯೂ ಯುವಪ್ರಾಯದವರಿಗೆ ಹೆಚ್ಚು ಸಂಭವಿಸುತ್ತದೆ, ಅವರ ಅಂಬೋಣ ನಮಲ್ಲಿ ಯಾವುದೇ ದುಶ್ಚಟವಿಲ್ಲ, ತೊಂದರೆಇಲ್ಲವೆಂದು, ಆದರೆ ಕೆಲವರ ರಕ್ತ ದಪ್ಪವಾಗುತ್ತ ಹೋಗುತ್ತದೆ, ಈ ರೀತಿ ದಪ್ಪವಾದರೆ, ರಕ್ತ ಸಂಚಲನಕ್ಕೆ ತೊಂದರೆ ಆಗುತ್ತದೆ ಹ್ರದಯಕ್ಕೆ ಸರಿಯಾಗಿ ರಕ್ತ ತಲುಪದೆ ಹ್ರದಯಾಘಾತ ಮತ್ತು ಮೆದುಳಿನ ಹ್ಯಾಮರೇಜ್ ಆಗುತ್ತದೆ, ವರ್ಷಕ್ಕೆ 2-3 ಸಲ ರಕ್ತದಾನ ಮಾಡಿದರೆ ಈ ಸಮಸ್ಯೆಗಳಿಂದ ಪಾರಾಗಬಹುದು’ ಎಂದು ಉಪಯುಕ್ತ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ರೆಡ್ ಕ್ರಾಸ್ ಸೊಸೈಟಿಯ ಚೇರ್ಮೆನ್ ಶ್ರೀ ಜಯಕರ್ ಶೆಟ್ಟಿ ಮಾತನಾಡಿ ‘ಕುಂದಾಪುರ ಕಥೊಲಿಕ್ ಸಭಾ ಸಂಘಟನೇಯು 10 ವರ್ಷಗಳಿಂದ ರಕ್ತದಾನಕ್ಕೆ ಸಹಯೋಗ ನೀಡುತ್ತಾ ಇದೆ’ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ರೋಜರಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶಾಲೆಟ್ ರೆಬೆಲ್ಲೊ, ಚರ್ಚಿನ ಆರೋಗ್ಯ ಆಯೋಗದ ಸಂಚಾಲಕಿ ಡಾ. ಸೋನಿ ಡಿಕೋಸ್ತಾ ಉಪಸ್ಥಿತರಿದ್ದು, ಕಥೋಲಿಕ್ ಸಭಾ ಕುಂದಾಪುರ ಘಟಕ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕರಾದ ಶೈಲಾ ಡಿಅಲ್ಮೇಡ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು.