JANANUDI.COM NETWORK

ಕುಂದಾಪುರ, ಮೇ. 30: ಆಯುಷ್ ಸಂಘಟನೆ (AFI) ಕುಂದಾಪುರ ತಾಲ್ಲೂಕು ಘಟಕವು ಸುಮಾರು 37 ಸಾವಿರ ರೂಪಾಯಿ ಬೆಲೆ ಬಾಳುವ ವಾಷಿಂಗ್ ಮೆಷಿನ್ ಮತ್ತು ವ್ಯಾಕ್ಯೂಮ್ ಕ್ಲೀನರ್ ಅಗತ್ಯವಿರುವ ನಿತ್ಯ ಬಳಕೆಯ ಯಂತ್ರಗಳನ್ನು, ಕುಂದಾಪುರ ರೆಡ್ ಕ್ರಾಸ್ ಕೋವಿಡ್ ಸೆಂಟರಿಗೆ ದಾನವಾಗಿ ನೀಡಿತು.
ಈ ವಸ್ತುಗಳನ್ನುಹಸ್ತಾಂತರಿಸುವಾಗ ಸಹಾಯಕ ಕಮಿಶನರ್ ರಾಜು.ಕೆ, ಪುರಸಭಾ ಮುಖ್ಯ ಮುಖ್ಯಾಧಿಕಾರಿ ಗೋಪಾಲ ಕ್ರಷ್ಣ ಶೆಟ್ಟಿ, ಕುಂದಾಪುರ ತಾಲೂಕು ವೈದ್ಯಾಧಿಕಾರಿ ನಾಗಭೂಷಣ ಉಡುಪ, ಕುಂದಾಪುರ ತಾಲೂಕು ಆಯುಷ್ ಹಿರಿಯ ವೈದ್ಯಾಧಿಕಾರಿ ಡಾ.ಅಶೋಕ್, ಆಯುಷ್ ಸಂಘಟನೆ (AFI) ಕುಂದಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರವೀಂದ್ರ, ಕಾರ್ಯದರ್ಶಿ ಡಾ.ರಾಜೇಶ್ ಶೆಟ್ಟಿ ಮತ್ತು ಆಡಳಿತ ಮಂಡಳಿ ಸದಸ್ಯರಾದ ಡಾ.ಸೋನಿ ಡಿ ಕೋಸ್ಟಾ ಕುಂದಾಪುರ, ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ್ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ಮತ್ತು. ರೆಡ್ ಕ್ರಾಸ್ ಆಡಳಿತ ಮಂಡಳಿ ಸದಸ್ಯರಾದ ಗಣೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
