ಭಂಡಾರ್ಕಾರ್ಸ್ ಕಾಲೇಜಿನ ಪ್ರಾಧ್ಯಾಪಕಿ ಡಾ.ಗಾಯತ್ರಿ ಪೈಗೆ ಡಾಕ್ಟರೇಟ್ ಪದವಿ

JANANUDI.COM NETWORK


ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ.ಗಾಯತ್ರಿ ಪೈ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.
ಅವರುಮಂಗಳೂರು ವಿಶ್ವ ವಿದ್ಯಾನಿಲಯದಜೀವ ವಿಜ್ಞಾನ ವಿಭಾಗದ ಪ್ರೊ.ಚಂದ್ರ ಎಂ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಐಸೋಲೇಶನ್, ಐಡೆಂಟಿಫಿಕೇಶನ್ ಆ್ಯಂಡ್ ಆ್ಯಂಟಿ ಮೈಕ್ರೋಬಿಯಲ್ ಆ್ಯಕ್ಟಿವೀಟೀಸ್ ಆಫ್ ಆಫೆಂಡೋಪೈಥಿಕ್ ಫಂಗಿ ಫ್ರಾಮ್ ಮೆಡಿಶಿನಲ್ ಪ್ಲಾಂಟ್ಸ್‍ಆಫ್‍ಉಡುಪಿ ಡಿಸ್ಟ್ರಿಕ್ಟ್” (Isolation,Identification and Antimicrobial Activities of Endophytic Fungi from Medicinal Plants of Udupi District)ಎಂಬ ಮಹಾಪ್ರಬಂಧವನ್ನು ಪಿಹೆಚ್.ಡಿ ಪದವಿಗಾಗಿ ಮಂಡಿಸಿರುತ್ತಾರೆ.
ಡಾ.ಗಾಯತ್ರಿ ಪೈಅವರು ದಿವಂಗತ ಕೆ.ಪಾಂಡುರಂಗ ಪೈ ಮತ್ತುರೋಹಿಣಿ.ಪಿ.ಪೈ ಅವರ ಪುತ್ರಿಯಾಗಿದ್ದು ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದಲ್ಲಿಅಧಿಕಾರಿಯಾಗಿರುವ ಹೆಚ್.ಗಿರಿಧರ ಪೈಯವರ ಪತ್ನಿಯಾಗಿದ್ದಾರೆ.