“ಡಾ ಕ್ಲೆಮೆಂಟ್ ಕುಟಿನ್ಹೋ ಅವರು ಅವರ ಚಿಕಿತ್ಸೆ ಮತ್ತು ಸ್ನೇಹಪರ, ಸಹಾಯ ಹಸ್ತದ ಮನೋಭಾವದಿಂದ ಅವರು ‘ಬಡವರ ವೈದ್ಯ’ ಎಂದೇ ಕಿನ್ನಿಗೊಳ್ಳಿಯಲ್ಲಿ ಖ್ಯಾತರಾಗಿದ್ದರು“
ಮಂಗಳೂರು, ಎಪ್ರಿಲ್ 24: ‘ಬಡವರ ಡಾಕ್ಟರ್’ ಎಂದೇ ಖ್ಯಾತರಾಗಿದ್ದ ಡಾ. ಕ್ಲೆಮೆಂಟ್ ಕಟಿನ್ಹೋ ಏಪ್ರಿಲ್ 24 ರ ಶನಿವಾರ ನಿಧನರಾದರು. ಅವರಿಗೆ 80 ವರ್ಷವಾಗಿತ್ತು
ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ ಜನಿಸಿದ ಅವರು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಲಿತರು. ನಂತರ ಪೊಂಪೈ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಕಲಿತು, ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದು, ಅವರು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದರು.
1976 ರಲ್ಲಿ, ಅವರು ಕಿನ್ನಿಗೋಳ್ಳಿಯಲ್ಲಿ ತಮ್ಮ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿದರು. ಡಾ. ಕ್ಲೆಮೆಂಟ್ ಅವರು ಅವರ ಚಿಕಿತ್ಸೆ ಮತ್ತು ಸ್ನೇಹಪರ, ಸಹಾಯ ಹಸ್ತದ ಮನೋಭಾವದಿಂದ ಅವರು ಬಹಳ ಜನಪ್ರಿಯರಾದರು. ಬಹಳ ದುರ್ಗಮ ಪ್ರದೇಶಗಳಿಂದ ಹಾಗೇ ಬಡವರಾದ ರೋಗಿಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಅವರು ತಮ್ಮ ಕಾರನ್ನೆ ಬಳಸುತಿದ್ದರು.
ಅವರು ಬಹಳ ಅಲ್ಪ ಶುಲ್ಕವನ್ನು ತೆಗೆದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.ಹಾಗೆಯೇ ಓಷಧಿಗಳನ್ನು ಖರೀದಿಸಲು ಸಾಧ್ಯವಾಗದವರಿಗೆ ಓಷಧಿಗಳನ್ನು ನೀಡಿ ಸಹಾಯ ಮಾಡುತ್ತಿದ್ದರು.
ಅವರ 51 ವರ್ಷಗಳ ವೈದ್ಯಕೀಯ ಸೇವೆಯಲ್ಲಿ, ಅವರು ಅನೇಕ ಪ್ರಸಿದ್ಧ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಸನ್ಮಾನಗಳನ್ನು ಪಡೆದವರಾಗಿದ್ದರು.
ಡಾ. ಕ್ಲೆಮೆಂಟ್ ಅವರ ಶವವನ್ನು ಏಪ್ರಿಲ್ 30 ಶುಕ್ರವಾರ ಮಧ್ಯಾಹ್ನ 2: 30 ಕ್ಕೆ ಕಿನ್ನಿಗೋಳ್ಳಿಯ ಅವರ ನಿವಾಸಕ್ಕೆ ತರಲಾಗುವುದು ಮತ್ತು ಮಧ್ಯಾಹ್ನ 3: 30 ಕ್ಕೆ ಅವರ ನಿವಾಸದಿಂದ ಕಿನ್ನಿಗೋಳ್ಳಿಯ ಇಮ್ಮಾಕ್ಯುಲೇಟ್ ಕಾನ್ಸೆಪ್ಟ್ ಚರ್ಚ್ಗೆ ತೆಗೆದುಕೊಂಡು ಹೋಗಲಾಗುವುದು, ಸಂಜೆ 4:00 ಕ್ಕೆ ಅಂತ್ಯಕ್ರಿಯೆಯನ್ನು ಜರಗಿಸಲಾಗುವುದು.