JANANUDI.COM NETWORK

ಮಂಗಳೂರು್,ಜು.23; ಮಾಜಿ ಮಂತ್ರಿ ಆಸ್ಕರ್ ಫರ್ನಾಂಡಿಸ್ ಅವರ ಕುಟುಂಬ ಗುರುವಾರ ಅವರ ಸಾವಿನ ಬಗ್ಗೆ ವೈರಲ್ ಸುಳ್ಳು ಸುದ್ದಿಯನ್ನು ಖಂಡಿಸಿದ್ದು, ಅವರು ನಗರದ ಯೆನೆಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಅವರು ಆಸ್ಪತ್ರೆಯ ಐಸಿಯುನಲ್ಲಿ ವೀಕ್ಷಣೆಯಲ್ಲಿದ್ದಾರೆ ಎಂದು ಕುಟುಂಬ ತೀಳಿಸಿದ್ದಾರೆ
ಆಸ್ಕರ್ ಫೆರ್ನಾಂಡಿಸ್ ಪಿ.ಎ. ಅಶ್ಪಕ್ ಅಮ್ಮದ್ ಮಾಧ್ಯಮಕ್ಕೆ ತಿಳಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡರ ಆಸ್ಕರ್ ಅವರ ಆರೋಗ್ಯದ ಬಗ್ಗೆ ವದಂತಿಗಳು ಮತ್ತು ನಕಲಿ ಸುದ್ದಿಗಳನ್ನು ಹರಡದಂತೆ ಜನರನ್ನು ಒತ್ತಾಯಿಸಿದರು. ಮತ್ತು ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಬೇಕು ಎಂದು ಕುಟುಂಬವು ವಿನಂತಿಸಿದೆ ಎಂದು ತಿಳಿಸಿದರು
ಸೋಷಿಯಲ್ ಮೀಡಿಯಾದಲ್ಲಿ ಬೇರೊಬ್ಬ ಫೆರ್ನಾಂಡಿಸ್ ಎಂಬವರು ತೀರಿಕೊಂಡಿದ್ದು ಇದನ್ನೆ ಮಾಜಿ ಸಚಿವರು ತೀರಿಕೊಂಡಿದೆ ಎಂದು ಸುದ್ದಿ ಹಬ್ಬಿಸಿದ್ದರು.
ನಿನ್ನೆಯಷ್ಟೆ ಕಾಂಗ್ರೆಸಿನ ಸಿದ್ದರಾಮಯ್ಯ್, ಡಿ ಕೆ ಶಿವಕುಮಾರ್ ಮತ್ತಿತ್ತರ ನಾಯಕರಗಳ ದಂಡು ಆಸ್ಪತ್ರೆಗೆ ಭೇಟಿ ಮಾಡಿ ಆಸ್ಪತ್ರೆಯ ವೈದ್ಯರ ಜೊತೆ ಸಮಾಲೋಚಿಸಿದ್ದರು.