JANANUDI.COM NETWORK
ಕುಂದಾಪುರ, ನ. 7: ನಮ್ಮೊಳಗಿನ ದೀಪ ಬೆಳಗಬೇಕು, ಅವಾಗಲೇ ಸಮಾಜಕ್ಕೆ ಒಳಿತಾಗುವಂತಹ ಸೇವೆ ಮಾಡಲು ಸಾಧ್ಯ, ಸಣ್ಣ ದೀಪದಿಂದ ಕತ್ತಲೆ ದೂರವಾಗುತ್ತದೆ, ದೀಪದಿಂದ ಬೆಳಕು ಹರಡಿ ಕತ್ತಲೆ ಮಾಯವಾಗುತ್ತದೆ. ಬೆಳಕು ಸಂತೋಷ, ಉಲ್ಲಾಸ, ವಿಶ್ವಾಸಕ್ಕೆ ಕಾರಣವಾಗುತ್ತೆ. ದೀಪಾವಳಿ ಬೆಳಕಿನ ಹಬ್ಬ, ನಮ್ಮೆಲ್ಲರಿಗೂ ಅಚ್ಚುಮೆಚ್ಚಿನ ಹಬ್ಬ, ಭಾವೈಕತೆಗೆ ಹೆಸರು ವಾಸಿಯಾದ ಹಬ್ಬ, ಕೆಟ್ಟತನವನ್ನು ದೂರ ಮಾಡಿ, ಒಳ್ಳೆದನ್ನು ಮಾಡುವ ಹಬ್ಬ, ಇಂದು ನಾವೆಲ್ಲರೂ ಜಗತ್ತಿನ ದೀಪಗಾಬೇಕು. ನಾವೆಲ್ಲರೂ ಒಟ್ಟು ಸೇರಿ ಆಚರಿಸುವ ಈ ದಿಪಾವಳಿಯ ಕಾರ್ಯಕ್ರಮಕ್ಕೆ, ಒಳ್ಳೆಯ ಅರ್ಥವಿದೆ” ಎಂದು. ಕುಂದಾಪುರವಲಯ ಪ್ರಧಾನ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು.
ಅವರು ಕುಂದಾಪುರ (ಕೋಟಾದಿಂದ ಹಿಡಿದು ಬೈಂದೂರು ವ್ಯಾಪ್ತಿ) ವಲಯ ಸಮಿತಿಯಿಂದ ದೀಪವಾಳಿ ಪ್ರಯುಕ್ತ ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜ್ ಸಭಾಗಂಣದಲ್ಲಿ ನಡೆದ (6-11-21_ ಭಾವೈಕ್ಯದ ದೀಪಾಂಜಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತಾನಾಡಿದರು. ಪೆÇೀಷಕರಾದ ಡೈನಾಮಿಕ್ ಸಂಸ್ಥೆಯ ಅಂಭಿಕಾ ಧೀರಜ್ ಗೂಡು ದೀಪ ಮತ್ತು ಕುಟುಂಬದ ಜೊತೆಗಿನ ಫೆÇೀಟೊ ಸ್ಪಧೆಯ ವಿಜೇತರಿಗೆ ಬಹುಮಾನ ನೀಡಿ “ಇವತ್ತು ಮಾಧ್ಯಮದ ಮುಖಾಂತರ ಬೇಡದೆನೆಲ್ಲಾ ಹಂಚಿಕೊಂಡು ಸಮಾಜದ ಸ್ವಾಸ್ಥ ಕೆಟ್ಟು ಹೋಗಿದೆ. ಇದರಿಂದ ನಾವು ಜಾಗ್ರತರಾಗಿರಬೇಕು’ ಎಂದು ಹೇಳಿದರು.
ಕಲಾ ಕ್ಷೇತ್ರದ ಕೀಶೊರ್ ಕುಮಾರ್, ಹುಸೇನ್ ಹೈಕಾಡಿ, ಪತ್ರಕರ್ತ ಸಂಘದ ಅಧ್ಯಕ್ಷರಾದ ಶಸಿಧರ್ ಹೆಮ್ಮಾಡಿ, ವರದರಾಜ್ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯಕ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷೆ ಮೇಬಲ್ ಡಿಸೋಜಾ, ಸ್ವಾಗತಿಸಿದರು, ಕಾರ್ಯಕ್ರಮ ಸಂಚಾಲಕ ಅಲ್ಡ್ರಿನ್‍ಡಿಸೋಜಾ ಪ್ರಸ್ತಾವನೆ ಗೈದರು. ಕೋಶಾಧಿಕಾರಿ ಮೈಕಲ್ ಪಿಂಟೊ ಮತ್ತು ಇತರ ಪದಾಧಿಕಾರಿಗಳು, ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಡಯಾನ ಸೆರಾವೊ ವಂದಿಸಿದರು, ಡಾ|ಸೋನಿ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.