JANANUDI.COM NETWORK
ಮೂಡುಬೆಳ್ಳೆ: ಬೆಳಕಿನ ಹಬ್ಬ ದೀಪಾವಳಿಯು ಎಲ್ಲರೂ ಸೌಹಾರ್ದತೆಯಿಂದ ಆಚರಿಸುವ ಹಬ್ಬವಾಗಿದೆ ಇದು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮಾತ್ರವಲ್ಲದೆ ಸ್ನೇಹ ಸಂಬಂಧವನ್ನು ಬಲಪಡಿಸುವ ಅವಕಾಶವನ್ನು ನೀಡುತ್ತದೆ ಇಂದಿನ ಕಾರ್ಯಕ್ರಮ ಎಲ್ಲರಿಗೂ ಮಾದರಿ ಕಾರ್ಯಕ್ರಮವಾಗಿದೆ ಎಂದು ಕಾಪು ಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್ ಹೇಳಿದರು ಅವರು ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗೂಡುದೀಪ ಸ್ಪರ್ಧೆ ಬಹುಮಾನ ವಿತರಣೆ ದೀಪಾವಳಿ ಹಬ್ಬದ ಆಚರಣೆ ಮತ್ತು ಪ್ಲಾಸ್ಟಿಕ್ ಮುಕ್ತ ಮೂಡುಬೆಳ್ಳೆ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಜೊರ್ಜ್ ಡಿಸೋಜರವರು ಆಶೀರ್ವಚನ ನೀಡಿದರು .ಕಾಪು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪುಂಡಲೀಕ ಮರಾಟೆ ಅವರು ದೀಪಾವಳಿ ಹಬ್ಬದ ಮಹತ್ವವನ್ನು ವಿವರಿಸಿದರು. ಸಂತ ಲಾರೆನ್ಸ್ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ಸಿರಿಲ್ ಲೋಬೊರವರು ಹಾಡಿನ ಮೂಲಕ ಸಂದೇಶ ನೀಡಿದರು. ಲಯನ್ ರಾಜೇಂದ್ರ ಶೆಟ್ಟಿಯವರು ಬಹುಮಾನ ವಿತರಿಸಿದರು. ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸುಧಾಕರ ಪೂಜಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರಾಮ ಪಂಚಾಯತ್ ಪಿಡಿಒ ಶ್ರೀಮತಿ ವಸಂತಿ ಬಾಯಿ ಸ್ವಾಗತಿಸಿ ಶ್ರೀಮತಿ ಸುನೀತಾ ಕಾಮತ್ ವಂದಿಸಿದರು .ಆಂಗ್ಲಭಾಷೆ ಉಪನ್ಯಾಸಕಿ ಶ್ರೀಮತಿ ಸುಧಾ ಭಟ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಗೂಡುದೀಪಗಳನ್ನು ಪ್ರದರ್ಶಿಸಲಾಯಿತು . ಸಂತ ಲಾರೆನ್ಸ್ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಫರ್ನಾಂಡಿಸ್ ಶಿರ್ವ ಠಾಣಾಧಿಕಾರಿ ಶ್ರಿಶೈಲ, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರು, ಸದಸ್ಯರು ,ಲಯನ್ಸ್ ಕ್ಲಬ್ ಪದಾಧಿಕಾರಿಗಳು ಎಸ್ಎಲ್ಆರ್ ಎಂ ಘಟಕದ ಸಿಬ್ಬಂದಿಗಳು ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಜ್ಞಾನಗಂಗಾ ಮತ್ತು ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.