ಕೋಟೆಶ್ವರ,ನ. 1; ಸ್ಥಳೀಯ ಸಂತ ಅಂತೋನಿ ಚರ್ಚಿನಲ್ಲಿ ಸರ್ವಧರ್ಮ ಸಮಿತಿಯ ನೇತೃತ್ವದಲ್ಲಿ ಧರ್ಮಕೇಂದ್ರದ ಸಮುದಾಯ ಮತ್ತು ಆಸುಪಾಸಿನ ಹಿಂದೂ ಬಾಂಧವರೊಂದಿಗೆ ಕೂಡಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಕೇಂದ್ರದ ಧರ್ಮಗುರು ಫಾ. ಪ್ರವೀಣ್ ಪಿಂಟೋ ‘ದೀಪಾವಳಿ ಬೆಳಕಿನ ಹಬ್ಬ, ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯತನವನ್ನು ಸಂಕೇತಿಸುತ್ತದೆ, ಅಂದರೆ ನಮ್ಮ ಹ್ರದಯದೊಳೊಗೆ ಇರುವ ಕತ್ತಲೆ ಮಾಯವಾಗಿ ಬೆಳಕಾಗಬೇಕು, ಈ ದೀಪಾವಳಿ ನಮ್ಮೆಲ್ಲರ ಪ್ರೀತಿ ಭಾಂಧವ್ಯದ ಹಬ್ಬವಾಗಲಿ’ ಎಂದು ಆತ್ಮೀಯ ಸಂದೇಶ ನೀಡಿ ಆಶೀರ್ವದಿಸಿ ಹೃತ್ಪೂರ್ವಕ ಶುಭಾಶಯಗಳನ್ನು ಹಂಚಿಕೊಂಡರು.
ಚರ್ಚಿನ ಗಾಯನ ಮಂಡಳಿ ಸದಸ್ಯರು ಹಾಡಿನ ಮೂಲಕ ಉತ್ಸಾಹವನ್ನು ಹೆಚ್ಚಿಸಿದರು, ಸಂಭ್ರಮ ಮತ್ತು ಪ್ರತಿಬಿಂಬದ ವಾತಾವರಣವನ್ನು ಸೃಷ್ಟಿಸಿ ಆಚರಣೆಯ ಭಾಗವಾಗಿ, ಪಾಲ್ಗೊಂಡವರು ಒಟ್ಟಿಗೆ ದೀಪಗಳನ್ನು ಬೆಳಗಿಸಿದರು.
ಕಾರ್ಯಕ್ರಮದಲ್ಲಿ ಸೇವಾದರ್ಶಿ (Deacon) (ಸದ್ಯದಲ್ಲೇ ಯಾಜಕತ್ವ ದೀಕ್ಷೆ ಪಡೆದುಕೊಳ್ಳಲು ಅಣಿಯಾದವರು) ವಂ। ಪ್ರೀತೇಶ್ ಕ್ರಾಸ್ತಾ, ಪಾಲನ ಮಂಡಳಿ ಉಪಾಧ್ಯಕ್ಷ – ಸರ್ವಧರ್ಮ ಸಮಿತಿಯ ಸಂಯೋಜಕ ತಿಯೋದರ್ ಡಿಮೆಲ್ಲೊ, ಜನನುಡಿ ಸುದ್ದಿ ಸಂಸ್ಥೆಯ ಸಂಪಾದಕರಾದ ಬರ್ನಾಡ್ ಜೆ.ಡಿ’ಕೋಸ್ತಾ, ಪಾಲನ ಮಂಡಳಿ ಸದಸ್ಯರು, ನೆರೆಹೊರೆಯವರಾದ ಉದ್ಯಮಿ ಉಲ್ಲಾಸ್ ಕೋಟೇಶ್ವರ್, ರಾಧಾ ಕೃಷ್ಣ, ರಾಘವೇಂದ್ರ, ರವಿ, ಚರಣ್, ರಮೇಶ್ ಹಿಂದೂ ಸಹೋದರರು ಮತ್ತು ಸಹೋದರಿಯರು ಮತ್ತು ಧರ್ಮಕೇಂದ್ರದ ಭಕ್ತರು ಉಪಸ್ಥಿತರಿದ್ದರು
ಪಾಲನಮಂಡಳಿ ಕಾರ್ಯದರ್ಶಿ ಮರಿಯಾ ಮಸ್ಕರೇನಸ್ ಸ್ವಾಗತಿಸಿ,ನಿರೂಪಿಸಿ ವಂದಿಸಿದರು.ಈ ಅಂತರ್-ಧರ್ಮೀಯ ಆಚರಣೆಯ, ಈ ಕಾರ್ಯಕ್ರಮವು ಧರ್ಮಕೇಂದ್ರದ ವಿವಿಧ ಸದಸ್ಯರನ್ನು ಮತ್ತು ನೆರೆಯ ಸಮುದಾಯಗಳನ್ನು ಒಟ್ಟುಗೂಡಿಸಿತು, ವಿವಿಧ ಧರ್ಮಗಳ ನಡುವೆ ಸಾಮರಸ್ಯ ಮತ್ತು ಏಕತೆಯ ಮನೋಭಾವ ಸಾರಿತು. ಕೊನೆಯಲ್ಲಿ ಎಲ್ಲರಿಗೂ ದೀಪಾವಳಿಯ ಪ್ರಯುಕ್ತ ಸಿಂಹಿತಿಂಡಿಯನ್ನು ಹಂಚಲಾಯಿತು.
Diwali Celebration at Koteshwara Saint Anthony Church
Koteshwara, Nov. 1; The Diwali festival was celebrated with gaiety at the local Saint Anthony’s Church under the leadership of the Inter-Religion Committee of church and surrounding Hindu relatives. In the program, the priest of Church Rev. Fr. Praveen Pinto blessed and shared heartfelt wishes with a heartfelt message saying that ‘Diwali is the festival of light, it symbolizes the victory of light over darkness and goodness over evil, that is, the darkness in our hearts should be turned into light, this Diwali will be a festival of love and bond for all of us’.
Members of the church choir lifted the spirits with song, creating an atmosphere of celebration and reflection as part of the celebration, participants lit lamps together.
In the program, Deacon (who is about to be ordained as a priest) Rev. Pritesh Crasta, PPC Vice President – Inter-Religion Committee Coordinator Theodore DMello, Editor of ‘Jananudi’ Bernard J. D’Costa, PPC members, Neighbors Businessman Ullas Koteshwar, Radha Krishna, Raghavendra, Ravi, Charan, Ramesh Hindu brothers and sisters and devotees of church were present.
Maria Mascarenas, Secretary of the PPC welcomed and delivered the vote of thanks. The event brought together the various members of the church and the neighboring communities, promoting the spirit of harmony and unity among the various religions. Sweets were served to share the joy of Diwali.