ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : – ಆಹಾರದಲ್ಲಿ ವೈವಿಧ್ಯತೆ ಮತ್ತು ನೆಲದ ತಾಜಾತನ ನಿಜವಾಗಿ ಉಳಿದಿರುವುದು ಸಣ್ಣ ರೈತರಿಂದ ಮಾಜಿ ಸಭಾಪತಿ ವಿಆರ್ ಸುದರ್ಶನ್ ಅಭಿಪ್ರಾಯಪಟ್ಟರು . ತಾಲೂಕಿನ ನಾಗನಾಳ ಗ್ರಾಮದಲ್ಲಿ ಗ್ರಾಮೀಣ ಕೃಷಿ ಅನುಭವ ಕಾರ್ಯಾಗಾರದಲ್ಲಿ ವಾಸ್ತವ್ಯ ಇರುವ ಚಿಂತಾಮಣಿ ರೇಷ್ಮೆ ಮಹಾವಿದ್ಯಾಲಯದ ಅಂತಿಮ ಕೃಷಿ ವಿಜ್ಞಾನ ವಿದ್ಯಾರ್ಥಿಗಳೊಂದಿಗೆ ಔಪಚಾರಿಕವಾಗಿ ಸಂವಾದ ನಡೆಸಿ ಅವರು ಮಾತನಾಡುತ್ತಿದ್ದರು . ವ್ಯವಸಾಯ ಎಂದರೆ ಭಾರತೀಯರಿಗೆ ಕೃಷಿ ಜೀವನಾಧಾರ ಮಾತ್ರ ಹಾಗಿರಲಿಲ್ಲ ಅದೊಂದು ಪಾರಂಪರಿಕ ಸಂಸ್ಕೃತಿಯಾಗಿತ್ತು . ಬದುಕಿಗೊಂದು ಸಾತ್ವಿಕ ಶೈಲಿಯನ್ನು ಒದಗಿಸಿತ್ತು ಎಂದು ತಿಳಿಸಿದ ಅವರು ನಯ ವಿನಯ ಗೌರವ ಸ್ನೇಹ ಮೃದುತ್ವ ಮನುಷ್ಯತ್ವ ಮತ್ತು ಸ್ವಾಭಿಮಾನ ಇವೆಲ್ಲವೂ ಕೃಷಿ ಜೀವನಶೈಲಿಯ ಲಕ್ಷಣಗಳಾಗಿದ್ದವು . ಎಂದು ಬಣ್ಣಿಸಿದರು . ಒಂದು ಕಾಲದಲ್ಲಿ ಕೃಷಿ ಮಾಡುವವರಿಗೆ ವಿಶೇಷವಾದ ಗೌರವವಿತ್ತು ಕೃಷಿಯೆಂದರ ಆತ್ಮಗೌರವ ಸೃಜನ ಕ್ರಿಯೆ ಎಂಬ ನಂಬಿಕೆ ಇತ್ತು ಆದರೆ ಇಂದು ಗ್ರಾಮೀಣ ಪ್ರದೇಶದ ಯುವಪೀಳಿಗೆ ಕೃಷಿಯಿಂದ ವಿಮುಖರಾಗಿ ನಗರ ಪ್ರದೇಶ ಸೇರುತ್ತಿರುವುದು ಆತಂಕದ ಬೆಳವಣಿಗೆಯಂದು ತಿಳಿಸಿದರು . ವೈದ್ಯಕೀಯ ಕ್ಷೇತ್ರದಷ್ಟೇ ಕೃಷಿ ಕ್ಷೇತ್ರವು ಕೂಡ ಪ್ರಮುಖ ಕ್ಷೇತ್ರವಾಗಿದ್ದು ಪ್ರಯೋಗಾಲಯದಲ್ಲಿ ನಡೆಯುವ ಸಂಶೋಧನೆಗಳು ಅಕ್ಯಾಡೆಮಿಕ್ ಆಗಿ ವಿಶ್ವವಿದ್ಯಾನಿಲಯಕ್ಕೆ ಸೀಮಿತವಾಗಬಾರದು ಲ್ಯಾಬ್ ಟು ಲ್ಯಾಂಡ್ ಹಾಗಿ ರೈತರಿಗೆ ತಲುಪಬೇಕು ಕೃಷಿ ಅಧಿಕಾರಿಗಳು ಕೃಷಿಕರೊಂದಿಗೆ ನೇರ ಮತ್ತು ನಿರಂತರ ಸಂಪರ್ಕದೊಂದಿಗೆ ಕಾಲಕಾಲಕ್ಕೆ ತಕ್ಕಂತೆ ವೈಜ್ಞಾನಿಕ ಮಾಹಿತಿಯನ್ನು ನೀಡಬೇಕು . ಆಹಾರದಲ್ಲಿ ವೈವಿಧ್ಯತೆ ಮತ್ತು ನೆಲದ ತಾಜಾತನ ನಿಜವಾಗಿ ಉಳಿದಿರುವುದು ಸಣ್ಣ ಸಣ್ಣ ಹಿಡುವಳಿದಾರ ಪ್ರಯತ್ನದಲ್ಲಿ ಭೂಮಿಯ ಮೇಲೆ ಬದುಕುವ ಪ್ರತಿ ಪಾಣಿಗೂ ಮತ್ತು ಭೂಮಿಗೂ ಸಣ್ಣ ರೈತರಿಂದ ಸುಸ್ಥಿರತೆ ಸಾಧ್ಯವಾಗುತ್ತದೆ ವ್ಯಾಪಾರಿಕರಣ ಮತ್ತು ಜಾಗತೀಕರಣ ತಂತ್ರಜ್ಞಾನದಿಂದ ಇಂದು ಕೃಷಿ ಕೂಡ ಏಕವ್ಯಕ್ತಿ ಉದ್ಯಮವಾದ ತೊಡಗಿದರೆ ಕೃಷಿ ಸಂಸ್ಕೃತಿಯನ್ನು ಕಟ್ಟುವವರು ಯಾರು ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು .
ಇಂದಿನ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ದೊಡ್ಡದು ಮಾತ್ರ ಚುದ ಸಣ್ಣವರೆಲ್ಲ ನಾಶವಾಗಬೇಕೆಂಬ ಇರಾದೆ ಹೆಚ್ಚಾಗುತ್ತಿರುವುದು ವಿಪರ್ಯಾಸ ಒಂದಿಷ್ಟು ಹಣ್ಣು ಧಾನ್ಯ ತರಕಾರಿ ನಾರು ಮತ್ತು ಬೇರುಗಳನ್ನು ಬೆಳೆಸುವ ಸಣ್ಣ ಸಣ್ಣ ರೈತರಲ್ಲಿ ಇರುವಷ್ಟು ವೈವಿಧ್ಯತೆ ನೂರಾರು ಎಕರ ಏಕದಳ ಮಾಡುವ ರೈತರಲ್ಲಿ ಇರುವುದಿಲ್ಲ ಎಂದು ತಿಳಿಸಿದರು . ಸಂವಾದದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಪ್ರಸ್ತುತ ರಾಜಕೀಯ ಬೆಳವಣಿಗಳ ಬೆಳವಣಿಗೆಯ ಬಗ್ಗೆ ಗಮನಸೆಳೆದಾಗ ಪ್ರತಿಯೊಬ್ಬ ವಿದ್ಯಾರ್ಥಿಯು ಕಾನು ಓದುವ ವಿಷಯವನ್ನು ಹೊರತುಪಡಿಸಿ ಕನಿಷ್ಠ ಸಾಮಾನಜ್ಞಾನ ಶಿಸ್ತು ಮತ್ತು ಬದ್ಧತೆಯನ್ನು ಅಳವಡಿಸಿಕೊಂಡು ಕನಿಷ್ಠ ಆದರೂ ಸಂವಿಧಾನವನ್ನು ಓದಿಕೊಳ್ಳಬೇಕು ಹಾಗೂ ನಮ್ಮ ಹಕ್ಕುಗಳ ಜೊತೆಗೆ ಜವಾಬ್ದಾರಿಗಳ ಬಗ್ಗೆಯೂ ಅರಿವಿರಬೇಕು ಎಂದು ತಿಳಿಸಿ ಪ್ರಸ್ತುತ ರಾಜಕಾರಣದಲ್ಲಿ ಅನುಭವಿಗಳ ವಿಮುಖತೆ ಹಾಗೂ ಅನಾನುಭವಿಗಳ ಪಾರುಪತ್ಯ ದಿನೇದಿನೇ ಹೆಚ್ಚಾಗುತ್ತಿದೆ ಪ್ರಜ್ಞಾವಂತ ಯುವಪೀಳಿಗೆ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಎಚ್ಚರಿಸಿದರು . ಸಂವಾದದಲ್ಲಿ ಭಾಗವಹಿಸಿದ್ದ ದಾವಣಗೆರೆಯ ಮಹಾಂತೇಶ್ ಹಾಸನದ ಮನೋಹರ ಮಾತನಾಡಿ ನಮ್ಮ ಜಿಲ್ಲೆಗಳಲ್ಲಿ ಏಕಬೆಳೆ ಅಳವಡಿಸಿಕೊಂಡ ಪರಿಣಾಮ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತಿಲ್ಲ ಕೋಲಾರ ಜಿಲ್ಲೆಯ ರೈತರು ವಿಶೇಷವಾಗಿ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ವಹಿಸುತ್ತಿರುವುದು ಕಂಡರೆ ನಮಗೆ ಆಶ್ಚರ್ಯವಾಗುತ್ತಿದೆ ಎಂದು ತಮ್ಮ ಮೂರು ತಿಂಗಳ ಅನುಭವಗಳನ್ನು ಹಂಚಿಕೊಂಡರು . ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಸರಳವಾಗಿ ಯಾವ ರೀತಿ ಸಮೃದ್ಧಿಯ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವ ಅನುಭವವನ್ನು ನಾಗನಾಳ ಗ್ರಾಮದಲ್ಲಿ ಕಲಿತೆವು ಎಂದು ತಿಳಿಸಿದರು . ವಿದ್ಯಾರ್ಥಿಗಳಾದ ನಿಮ್ಮ ವಿದ್ಯಾಭ್ಯಾಸ ಪದವಿ ಮತ್ತು ಮದುವೆಗೆ ಅಷ್ಟೇ ಸೀಮಿತವಾಗಬಾರದು ಉನ್ನತ ವಿದ್ಯಾಭ್ಯಾಸ ಸಂಶೋಧನೆಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮ ನೈಪುಣ್ಯತೆಯನ್ನು ಸಮಾಜಕ್ಕ ಸಲ್ಲಿಸಬೇಕೆಂದು ಮಾಜಿ ಸಭಾಪತಿ ಸುದರ್ಶನ್ ರವರು ಶುಭಹಾರೈಸಿದರು ಈ ಸಂದರ್ಭದಲ್ಲಿ ಕೃಷಿಕ ದಂಪತಿಗಳಾದ ನಾಗನಾಳ ಮಂಜುನಾಥ್ ಮತ್ತು ಮಂಜುಳಾ ಉಪಸ್ಥಿತರಿದ್ದರು .