ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿದ್ದಾರೆ :ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಿ – ರೈತ ಸಂಘ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ, ಮಾ.11, ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ ಚೆನೈ ಕಾರಿಡಾರ್ ರಸ್ತೆಯ ಅಭಿವೃದ್ದಿಗೆ ಕೆರೆಯ ಸ್ವರೂಪವನ್ನೇ ಹಾಳು ಮಾಡುತ್ತಿರುವ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಂಡು ದೂಳಿನಿಂದ ರಸ್ತೆಯ ಅಕ್ಕಪಕ್ಕದಲ್ಲಿ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡುವಂತೆ ರೈತ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಮಾನ್ಯ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ರೈತರು ಕೃಷಿ ಭೂಮಿಗೆ ಹಾಗು ಇಟ್ಟಿಗೆ ಕಾರ್ಖಾನೆಗೆ ಮಣ್ಣು ಬೇಕಾದರೆ ನೂರೊಂದು ಕಾನೂನು ಹೇಳುವ ಗಣಿ ಹಾಗೂ ಸಣ್ಣ ನೀರಾವರಿ ಅಧಿಕಾರಿಗಳಿಗೆ ಚೆನೈ ಕಾರಿಡಾರ್ ಗುತ್ತಿಗೆದಾರರ ಕೆರೆ ಹಾಳು ಮಾಡುತ್ತಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೆಂದು ಅಧಿಕಾರಿಗಳಿಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪ್ರಶ್ನೆ ಮಾಡುವ ಜೊತೆಗೆ ರೈತರಿಗೆ ಒಂದು ನ್ಯಾಯ ರಾಜಕೀಯ ಬೆಂಬಲ ಇರುವವರಿಗೆ ಒಂದು ನ್ಯಾಯವೇ ಎಂದು ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ರಸ್ತೆ, ಕೈಗಾರಿಕೆ ಅಭಿವೃದ್ದಿ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ಬಲವಂತದಿಂದ ಕಾನೂನಿನ ಭಯ ಹುಟ್ಟಿಸಿ. ವಶಪಡಿಸಿಕೊಂಡು ಪರಿಹಾರ ನೀಡದೇ ಕಛೇರಿಗೆ ಅಲೆದಾಡಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಜಲ ಮೂಲಗಳ ಜೀವನಾಡಿಯಾದ ಕೆರೆಗಳನ್ನು ಚೆನೈ ಕಾರಿಡಾರ್ ಹೈವೆ ಅಭಿವೃದ್ದಿ ಗುತ್ತಿಗೆದಾರರು ಸಂಪೂರ್ಣವಾಗಿ ತಮಗೆ ಇಷ್ಟಬಂದ ರೀತಿ ಮಣ್ಣು ತೆಗೆಯುವ ಮೂಲಕ ಕೆರೆಗಳನ್ನು ಹಾಳು ಮಾಡುತ್ತಿದ್ದರು ಅದನ್ನು ತಡೆಯಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ರಸ್ತೆ ಅಭಿವೃದ್ದಿ ಮಾಡುತ್ತಿರುವುದಕ್ಕೆ ನಮ್ಮ ಅಭ್ಯಂತರವು ಇಲ್ಲ ಆದರೆ ಮಾನ್ಯ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಣ್ಣ ನೀರಾವರಿ ಇಲಾಖೆ, ಅಧಿಕಾರಿಗಳು ಕೆರೆಯಲ್ಲಿ ಮಣ್ಣು ತೆಗೆಯಲು ಚೆನೈ ಕಾರಿಡಾರ್ ರಸ್ತೆ ಗುತ್ತಿಗೆದಾರರಿಗೆ ನೀಡಿರುವುದು 3 ರಿಂದ 4 ಅಡಿ ಜೊತೆಗೆ ಯಾವುದೇ ರೀತಿಯ ಕೆರೆಗೆ ಹಾನಿಯಾಗದ ಜೊತೆಗೆ ಮಳೆ ನೀರು ಸಂಗ್ರಹವಾದಾಗ ಪ್ರಾಣಿಗಳಿಗೆ ತೊಂದರೆಯಾಗಬೇಕೆಂದು ನಿರ್ಬಂಧನೆಗಳನ್ನು ನೀಡಿ ಆದೇಶ ನೀಡಿದರೆ ಗುತ್ತಿಗೆದಾರರು ಆದೇಶಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದ ಹಾಗೆ 10 ರಿಂದ 30 ಅಡಿಯ ವರೆಗೂ ಆಳ ಮಾಡುವ ಮೂಲಕ ಕೆರೆಯ ಸ್ವರೂಪಗಳನ್ನು ಹಾಳು ಮಾಡುತ್ತಿದ್ದಾರೆಂದು ಗುತ್ತಿಗೆದಾರರ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು
.