ಜಿಲ್ಲೆಯ ರೈತರು ಪರ್ಯಾಯ ಬೆಳೆಗಳನ್ನು ಬೆಳೆಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ

ಕೋಲಾರ :ನಮ್ಮ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ದೇವರಾಜ್ ಅವರು ತಮ್ಮ ಕರ್ತವ್ಯದ ಜೊತೆಗೆ ಸಾಮಾಜಿಕ ಸೇವೆಗಳಲ್ಲದೆ ಜಿಲ್ಲೆಯ ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಮೂಲಕ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪ್ರಶಂಸಿದರು . ಇಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಕರ್ನಾಟಕ ಪ್ರಾದೇಶಿಕ ಕೃಷಿಕ ಸಮಾಜ , ಕೃಷಿ , ತೋಟಗಾರಿಕೆ ಮತ್ತು ಪೊಲೀಸ್ ಇಲಾಖೆ , ಜಿಲ್ಲಾ ಕೃಷಿ ಸಮಾಜ ಮತ್ತು ತೋಟಗಾರಿಕೆ ಮಹಾವಿದ್ಯಾಲಯ , ಟಮಕ ಇವರ ಸಂಯುಕ್ತಾಶ್ರಯದಲ್ಲಿ “ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕೀರ್ಣ ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಜಿಲ್ಲೆಯಲ್ಲಿ ಹೆಚ್ಚಾಗಿ ಟೊಮ್ಯಾಟೋ ಮತ್ತು ಮಾವು ಮಾತ್ರವಲ್ಲ . ಇತರೆ ಬೆಳೆಗಳನ್ನು ಬೆಳೆಯುವ ಮೂಲಕ ಅರ್ಥಿಕವಾಗಿ ಸಧೃಡರಾಗಲು ಅವರು ಬೆಳೆದಿರುವಂತ ಡ್ರಾಗನ್ ಫೂಟ್ , ಬಟರ್ ಫೂಟ್ , ಸ್ಟ್ರಾಬೆರಿ , ಜುಕನಿ , ಹಣ್ಣುಗಳನ್ನು ಹೆಚ್ಚು ನೀರಿನ ಅವಶ್ಯಕತೆ ಇಲ್ಲದೆ ಕಡಿಮೆ ನೀರಿನಲ್ಲಿ ಸಾವಯವ ಗೊಬ್ಬರವನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭಗಳಿಸುವುದನ್ನು ತೋರಿಸಿದ್ದಾರೆ . ಎಲ್ಲಾ ರೈತರು ಇವರ ಮಾರ್ಗದರ್ಶನವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂಬ ದೆಸೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು . ಪರ್ಯಾಯ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹಾಗೂ ಹೆಚ್ಚಿನ ಲಾಭವಿದ್ದು , ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ , ನೇರ ಮಾರಾಟ ಮಾಡಬಹುದಾಗಿದೆ ಎಂದರು . ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಭಾಗಿತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಇಂಥಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು . ರಂಗಮಂದಿರದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಯುಕೇಶ್ ಕುಮಾರ್‌ ಅವರು ಮಾತನಾಡಿ ಅಧುನಿಕ ತಂತ್ರಜ್ಞಾನ ಯುಗದಲ್ಲಿ ಸಮಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ . ಯಾವೂದೇ ಬೆಳೆಗಳು ಬೆಳೆಯುವ ಮುನ್ನ ಮಾರುಕಟ್ಟೆಯ ಬೇಡಿಕೆ , ಬೆಲೆ , ಇಳುವರಿ , ಲಾಭಾಂಶಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು . ಎಲ್ಲಾ ರೈತರು ಟೊಮ್ಯಾಟೋ , ಮಾವು ಬೆಳೆದರೆ ಮಾರುಕಟ್ಟೆ ಬೆಲೆಯಾಗಲಿ ಸಿಗಲು ಸಾಧ್ಯವಿಲ್ಲ . ಕನಿಷ್ಠ ಅರ್ಧ ಭಾಗದಷ್ಟು ರೈತರು ಇತರೆ ಬೆಳೆಗಳನ್ನು ಬೆಳೆಯುವಂತಾಗಬೇಕು ಎಂದ ಅವರು ಮಹಾತ್ಮಗಾಂಧಿ ರೋಜಗಾರ್ ಯೋಜನೆಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನೇಕ ಬೆಳೆಗಳಿಗೆ ಸಹಾಯಧನ ಲಭ್ಯವಿದ್ದು , ಇದನ್ನು ರೈತರು ಇಲಾಖೆಯವರಿಂದ ರೈತ ಸಂರ್ಪಕಗಳ ಮೂಲಕ ಮಾಹಿತಿ ಪಡೆದು ಪ್ರಗತಿ ಹೊಂದ ಬೇಕೆಂದು ಕರೆ ನೀಡಿದರು . ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಜಿಲ್ಲಾಡಳಿತವು ಹಲವಾರು ಕಾರ್ಯಕ್ರಮಗಳನ್ನು ಅಯೋಜಿಸುತ್ತಿರುವುದು ಜನಪರ ಕಾಳಜಿಯನ್ನು ಸಾಕ್ಷೀಕರಿಸುತ್ತಿದೆ ಎಂದರು . ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲೆಯಲ್ಲಿನ ಪ್ರಗತಿ ಪರ ರೈತರಿಗಿಂತ ಹೆಚ್ಚಾಗಿ ಎಲೆಯ ಮರೆಯ ಕಾಯಿಯಂತೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲೆಯ ರೈತರಿಗೆ ವಿಶೇಷವಾದ ಮಾರ್ಗದರ್ಶನದ ಕೊಡುಗೆಯನ್ನು ನೀಡಿದ್ದಾರೆ . ಪೊಲೀಸ್ ಅಧಿಕಾರಿಯಾಗಿದ್ದರೂ ಸಹ ಕೃಷಿ ಮತ್ತು ತೋಟಗಾರಿಕೆಯಲ್ಲಿ ಅಪಾರ ಜ್ಞಾನವನ್ನು ಅಳವಡಿಸಿ ಕೊಂಡಿರುವುದು ಅವರ ಸಾಧನೆಯಿಂದ ತಿಳಿಯಬಹುದಾಗಿದೆ ಎಂದು ಶ್ಲಾಘಿಸಿದರು . ಸದಾ ಟಮೋಟೋ ಬೆಳೆಯನ್ನು ಬೆಳೆದು ಕೊನೆಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕುವ ಬದಲು ನೂತನ ವಿಧಾನವನ್ನು ಅಳವಡಿಸಿ ಕೊಂಡು ಪ್ರಗತಿ ಹೊಂದ ಬಹುದಾಗಿದೆ ಎಂದರು . ಕೇವಲ 2-3 ಎಕರೆ ಜಮೀನು ಇದ್ದರೆ ಸಾಕು ಯಾವ ಗೆಜೆಟೆಡ್ ಅಧಿಕಾರಿಗಿಂತ ಹೆಚ್ಚಾಗಿ ಅರ್ಥಿಕವಾಗಿ ಸಧೃಡರಾಗಿರಬಹುದು ಎಂಬುವುದನ್ನು ಎಸ್.ಪಿ ಅವರಂತೆ ಟಮ್ಯಾಟೊ ಬದಲು ಡ್ರಾಗನ್ ಫ್ರಟ್ , ಬಟರ್ ಫೂಟ್ , ಸ್ಟ್ರಾಬೆರಿ , ಜುಕನಿ ಮುಂತಾದ ಬೆಳೆಗಳನ್ನು ಬೆಳೆಯುವ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯಲ್ಲಿ ಅರಿತು ಮುಂದುವರೆಯುವಂತೆ ತಿಳಿಸಿದರು . ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅವರು ತಮ್ಮ ಜಮೀನುಗಳಲ್ಲಿ ಪ್ರಾಯೋಗಿಕವಾಗಿ ಬೆಳೆದಿದ್ದ ಡ್ರಾಗನ್ ಫೂಟ್ , ಬಟರ್ ಫೂಟ್ , ಸ್ಟ್ರಾಬೆರಿ , ಜುಕನಿ , ಮುಂತಾದ ಬೆಳೆಗಳನ್ನು ತಮ್ಮ ಸ್ವಗ್ರಾಮವಾದ ಕೋರಗಂಡಹಳ್ಳಿಯಲ್ಲಿ ಬೆಳೆದ ವಿಧಾನಗಳನ್ನು ಚಿತ್ರಿಕರಿಸಿರುವುದು ಎಲ್‌ಇಡಿ ಪರದೆಯಲ್ಲಿ ಪ್ರಾಕ್ಟಿಕತೆ ಪ್ರದರ್ಶಿಸುವ ಮೂಲಕ ವಿವರಿಸಿದರು.

ಇದೇ ಸಂದರ್ಭದಲ್ಲಿ ರೈತರೊಡನೆ ಸಂವಾದದಲ್ಲಿ ರೈತರು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉತ್ತರಿಸಿ ಯಾವೂದೇ ಸಂಪನ್ಮೂಲ ವ್ಯಕ್ತಿಗಳಿಗಿಂತ ಕಡಿಮೆ ಇಲ್ಲದಂತೆ ಸ್ಪಷ್ಟ ಪಡಿಸಿ ರೈತರಲ್ಲಿ ಹೊಸ ಅಶಯವನ್ನು ಬೆಳಗಿಸಿದರು . ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಐ.ಎ.ಎಸ್ . ಅಧಿಕಾರಿ ವಿನಾಯಕ್ , ಜಂಟಿ ಕೃಷಿ ನಿರ್ದೇಶಕಿ ವಿ.ಡಿ.ರೂಪಾದೇವಿ , ತೋಟಗಾರಿಕೆ ಉಪನಿರ್ದೇಶಕ ಎಸ್.ಆರ್.ಕುಮಾರಸ್ವಾಮಿ , ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ || ಶಿವರಾಮ್ , ಹಿರಿಯ ವಕೀಲ ಕೆ.ವಿ.ಶಂಕರಪ್ಪ , ಪ್ರಗತಿ ಪರ ರೈತರಾದ ಅಬ್ಬಣಿ ಶಿವಪ್ಪ , ಕೋಟಿಗಾನಹಳ್ಳಿ ಗಣೇಶಗೌಡ , ಪ್ರಗತಿಪರ ಮಹಿಳೆಯರಾದ ವಿ.ಗೀತಾ , ನಳಿನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .