

ಶ್ರೀನಿವಾಸಪುರ : ಪುರಸಭಾ ವ್ಯಾಪ್ತಿಯ ಇಂದಿರಾ ನಗರ, ಮಾರುತಿ ನಗರ, ಡಾ. ಜಾಕೀರ್ ಹುಸೇನ್ ಮೊಹಲ್ಲಾ, ವೆಂಕಟೇಶ್ವರ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಅಕ್ರಂಪಾಷ ರವರು ಇಂದು ಭೇಟಿ ನೀಡಿ ಸ್ವಚ್ಛತೆ, ಬೀದಿ ದೀಪಗಳ CCMS Lights ನಿರ್ವಹಣೆ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ವಹಿಸಿರುವ ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿ ಸೇರಿದಂತೆ Dry Weste Management ನಿರ್ವಹಣೆ ಘಟಕಗಳನ್ನು ಖುದ್ದಾಗಿ ಪರಿಶೀಲಿಸಿದರು. ನಂತರ ಪುರಸಭಾ ಕಚೇರಿಗೆ ಭೇಟಿ ನೀಡಿದ ಮಾನ್ಯ ಜಿಲ್ಲಾಧಿಕಾರಿಗಳು ಕೆ.ಎಂ.ಎಫ್-24 ಡಾಟಾ ಎಂಟ್ರಿ ಮತ್ತು ವಿವಿಧ ಲಾಗಿನ್ ಗಳಲ್ಲಿ ಸ್ವತಃ ತಾವೇ ಕರವಸೂಲಿಗರರ ಜೊತೆ ಆಸ್ತಿ ಕಣಜ ತಂತ್ರಾಂಶದಲ್ಲಿ ದತ್ತಾಂಶ ಪರಿಶೀಲನೆ ಮಾಡಿದ ಅವರು ಕೆಎಂಎಫ್-24 ವಹಿಯಲ್ಲಿ ನಿರ್ವಹಿಸಿರುವ ವಿವರ ಸೇರಿದಂತೆ ಪುರಸಭಾ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ, ಖಾಲಿ ಇರುವ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ, ಆಸ್ತಿ ತೆರಿಗೆ, ನೀರಿನ ತೆರಿಗೆ ಹಾಗೂ ಎಲ್ಲಾ ಸೆಸ್ಗಳ ವಿವರಗಳ ಮಾಹಿತಿ ಪಡೆದುಕೊಂಡರು. ಮಾನ್ಯ ಯೋಜನಾ ನಿದೇಶಕರ ಕಛೇರಿಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಚಲಪತಿ, ಪುರಸಭಾ ಮುಖ್ಯಾಧಿಕಾರಿ ಶ್ರೀ ವೈ. ಎನ್. ಸತ್ಯನಾರಾಯಣ, ಕಂದಾಯಧಿಕಾರಿ ಶ್ರೀ ವಿ. ನಾಗರಾಜು, ಕಿರಿಯ ಅಭಿಯಂತರಾದ ಶ್ರೀ ವಿ. ಶ್ರೀನಿವಾಸಪ್ಪ, ಹಿ.ಆ.ನಿ ಶ್ರೀ ಕೆ. ಜಿ. ರಮೇಶ್ ನೋಡಲ್ ಅಧಿಕಾರಿ ಶ್ರೀ ಚೌಡೇಗೌಡ ಹಾಗೂ ಪುರಸಭಾ ಸಿಬ್ಬಂಧಿ ಈ ಸಂದರ್ಭದಲ್ಲಿ ಹಾಜರಿದ್ದರು.





