ಶ್ರೀನಿವಾಸಪುರ : ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 5 ಕೊಠಡಿಗಳ ಸ್ಟ್ರಾಂಗ್ ರೂಂಗಳ ಬಗ್ಗೆ ಜಿಲ್ಲಾಧಿಕಾರಿ ಅಕ್ರಂಪಾಷ ರವರು ತಹಶೀಲ್ದಾರರ ಜೊತೆ ಪರಿಶೀಲನೆ ನಡೆಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾಧಿಕಾರಿ ಅಕ್ರಂಪಾಷ ಅವರು ತಾಲೂಕು ಕಚೇರಿಗೆ ಭೇಟಿ ನೀಡಿ, ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು.
ಪುರಸಭೆಯಲ್ಲಿ ನಡೆಯುತ್ತಿದ್ಧಮತಗಟ್ಟೆ ಅಧಿಕಾರಿಗಳ ತರಬೇತಿಯಲ್ಲಿ ಭಾಗವಹಿಸಿ ಕೆಲವು ಸಲಹೆ ಸೂಚನೆ ನೀಡಿದರು.
ತಾಲೂಕು ಕಚೇರಿಯ ಮೇಲು ಅಂತಸ್ತಿನಲ್ಲಿ ಕಚೇರಿ ಕೆಲಸಕ್ಕೆ ಉಪಯೋಗವಾಗಲು ಕಟ್ಟುತ್ತಿರುವ ಕೊಠಡಿಗಳ ಜೊತೆ ಇನ್ನಷ್ಟು ಜಾಗ ಅಗಲೀಕರಿಸಿಕೊಂಡು ನಿರ್ವಹಣೆ ಮಾಡಲು ತಿಳಿಸಿದರು. ಹಾಗೆಯೇ, ಲೋಕಸಭಾ ಚುನಾವಣೆ ಕರ್ತವ್ಯದಲ್ಲಿ ಅಧಿಕಾರಿಗಳು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವೀಕ್ಷಿಸಲು
ಇದೇ ಸಮಯದಲ್ಲಿ ಪುರಸಭೆ ಮುಂಭಾಗದಲ್ಲಿ ಅಂಟಿಸಿರುವ ಮತದಾರರ ಜಾಗೃತಿ ಸಹಿ ಅಭಿಯಾನಕ್ಕೆ ಸಹಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎ.ಜೋಸೆಫ್, ಪುರಸಭೆಯ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ, ಕಸಬಾ ರಾಜಸ್ವ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ಕಚೇರಿ ಸಿಬ್ಬಂದಿ ಇತರರು ಹಾಜರಿದ್ದರು.