

ಕುಂದಾಪುರ, ನ.13: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಅರೋಗ್ಯ ಕಾರ್ಡ್ ನೋಂದಾವಣೆ ಮಾಡಿದ ಆರೋಗ್ಯ ಕಾರ್ಡುಗಳ ವಿತರಣ ಕಾರ್ಯಕ್ರಮ ನ.13 ರಂದು ಕುಂದಾಪುರ ಚರ್ಚ್ ಆವರಣದಲ್ಲಿ ನಡೆಯಿತು. ಕಥೊಲಿಕ್ ಸಭಾ ಕುಂದಾಪುರ ಘಟಕದ ಕಾರ್ಯಕರ್ತರು ಸ್ಥಳದಲ್ಲೆ ಒನ್ ಲೈನಿನ ಮೂಲಕ, ಅಭಾ ಕಾರ್ಡ್, ಇ ಶ್ರಮ ಕಾರ್ಡಗಳ ನೋಂದಣಿಯ ಸೇವೆಯನ್ನು ಮಾಡಿದ್ದರು. ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊಇವರಿಗೆಆರೋಗ್ಯ ಕಾರ್ಡನ್ನು ಹಸ್ತಾಂತರಿಸುವ ಮೂಲಕ ಕಾರ್ಡ್ ವಿತರಣಯನ್ನು ಮಾಡಿದರು. ಸುಮಾರು ಇನ್ನೂರು ಜನರಿಗೆ ಆಯುಶ್ಮಾನ್ ,ಅಭಾ ಕಾರ್ಡ್ ಮತ್ತು ಇ ಶ್ರಮ ಕಾರ್ಡ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ನಿಕಟಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ,ಖಚಾಂಚಿ ಪ್ರೇಮಾ ಡಿಕುನ್ಹಾ ಮುಂತಾದ ಪದಾಧಿಕಾರಿಗಳು, ಸದಸ್ಯರುಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, ಉಪಸ್ಥಿತರಿದ್ದರು.ಒನ್ ಲೈನಿನ ಮೂಲಕಕಾರ್ಡುಗಳನ್ನು ನೊಂದಾಯಿಸಲು ಸಹಕರಿಸಿದವರನ್ನು ಗೌರವಿಸಲಾಯಿತು. ವಿನೋದ್ ಕ್ರಾಸ್ಟೊ ಕಾರ್ಯಕ್ರಮವನ್ನು ನಡೆಸಿಕೊಟ್ಟರು.










