ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾದಿಂದ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ವಿತರಣೆ

ಕುಂದಾಪುರ, ಜು. 30;  ದಿನಾಂಕ 30-7-2023 ರಂದು ಪಿಯುಸ್ ನಗರ್ ಚರ್ಚಿನ ಕಥೊಲಿಕ್ ಸಭಾದಿಂದ ಮೂರು ಮಕ್ಕಳಿಗೆ ಶಿಕ್ಷಣಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಪಿಯುಸ್ ನಗರ್ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ವಾಮಿ ಆಲ್ಬರ್ಟ್ ಕ್ರಾಸ್ತಾ ಸಹಾಯಧನ ವಿತರಣೆ ಮಾಡಿ  ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾ ಸಂಘಟನೆ ಸೇವೆಗಳ  ಸಹಕಾರ ನಿರಂತರವಾಗಿ ಮಾಡುತ್ತಾ ಇದೆ. ಮುಂದೆ ಕೂಡ ಇಂತಹ ಒಳ್ಳೆ ಕೆಲಸಗಳು ಈ ಸಂಘಟನೆಯಲ್ಲಿ ನಡೆಯಲಿ’ ಎಂದು ಹಾರೈಸಿ ಸಂದೇಶವನ್ನು ನೀಡಿದರು. ಪಿಯುಸ್ ನಗರ ಕಥೊಲಿಕ್ ಸಭಾ ಸಂಘಟನೇಯ ಮಾರ್ಗದರ್ಶಕರಾದ, ಕಥೊಲಿಕ್ ಸಭಾ ಕುಂದಾಪುರ ವಲಯದ ಮಾಜಿ ಅಧ್ಯಕ್ಷರಾದ ಡಾ| ಸೋನಿ ಡಿಕೋಸ್ಟಾ ಉಪಸ್ಥಿತರಿದ್ದು ’ಪಿಯುಸ್ ನಗರ್ ಚರ್ಚಿನ ಕಥೊಲಿಕ್ ಸಂಘಟನೆಯ ಬಗ್ಗೆ ತಾನು ಈ ಸಂಘಟನೆಯಲ್ಲಿ ಮಾರ್ಗದರ್ಶಕರಾಗಿ ಸೇವೆ ನೀಡುವುದು ತನಗೆ ತುಂಬಾ ಖುಷಿ ನೀಡುತ್ತದೆ.ಇಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ ಹಾಗೂ ಇಲ್ಲಿ ಇರುವ ಎಲ್ಲಾ ಸದಸ್ಯರು ಸೇವಾ ಮನೋಭಾವ ಉಳ್ಳವರು’ ಎಂದು ತಿಳಿಸಿದರು.

    ಸಂಘಟನೆಯ ಅಧ್ಯಕ್ಷರಾದ ಶ್ರೀ ಅಲೆಕ್ಸಾಂಡರ್ ಲೂವಿಸ್ ಸ್ವಾಗತವನ್ನು ಕೋರಿದರು..ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಹಾಗೂ ಸಂಘಟನೆಯ ರಾಜಕೀಯ ಸಂಚಾಲಕರು ಶ್ರೀ ರೋಶನ್ ಬರೆಟ್ಟೊ  ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ವಿಸ್ತಾರ ರೀತಿಯಲ್ಲಿ ಮಾಹಿತಿ ನೀಡಿದರು ಈ ಕಾರ್ಯಕ್ರಮಕ್ಕೆ ಮಾಜಿ ಅಧ್ಯಕ್ಷರಾದಂತಹ ಶ್ರೀ ರೇಮಿ ಫೆರ್ನಾಂಡಿಸ್, ನಿಯೋಜಿತ ಅಧ್ಯಕ್ಷೆ ಶ್ರೀಮತಿ ನ್ಯಾನ್ಸಿ ವಾಜ್ ಹಾಜರಿದ್ದರು.ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಡೆಸಾ ವಂದಿಸಿದರು.