

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ‘ಆಝಾದಿ ಕಾ ಅಮೃತ್ ಮಹೋತ್ಸವ್ ‘ ಆಚರಣೆಯ ಪ್ರಯುಕ್ತ ಲಯನ್ಸ್ ಕ್ಲಬ್, ಕುಂದಾಪುರ ಇದರ ವತಿಯಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳಿಗೆ ರಾಷ್ಟ್ರ ಧ್ವಜ ವಿತರಣೆ ಮಾಡಲಾಯಿತು. ಲಯನ್ಸ್ ಕ್ಲಬ್, ಕುಂದಾಪುರ ಇದರ ಅಧ್ಯಕ್ಷರೂ, ಕಾಲೇಜಿನ ಪ್ರಾಂಶುಪಾಲರೂ ಆದ ಶ್ರೀ ನವೀನ್ ಕುಮಾರ ಶೆಟ್ಟಿಯವರು ರಾಷ್ಟ್ರ ಧ್ವಜಕ್ಕೆ ನೀಡಬೇಕಾದ ಗೌರವಸೂಚಕ ನಡಾವಳಿಗಳನ್ನು ವಿವರಿಸಿ ಕಾಲೇಜಿನ ಎಲ್ಲ ಪ್ರಾಧ್ಯಾಪಕರಿಗೆ ಮತ್ತು ಕಛೇರಿ ಸಿಬ್ಬಂಧಿಯವರಿಗೆ ರಾಷ್ಟ್ರಧ್ವಜವನ್ನು ವಿತರಿಸಿದರು.