ಶ್ರೀನಿವಾಸಪುರ : ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು ಜೀವನದ ಗುರಿಯನ್ನು ಮಟ್ಟುವಂತೆ ದಾನಿ ಎಜಿಎಂಎಸ್ಸಿ ಕಂಪನಿ ವ್ಯವಸ್ಥಾಪಕ ಲಿಂಗಾಪುರ ನಾಗರಾಜ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಚೆನ್ನಯ್ಯಗಾರಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭಾನುವಾರ ಬೆಂಗಳೂರಿನ ಎಜಿಎಂಎಸ್ಸಿ ಕಂಪನಿವತಿಯಿಂದ ಉಚಿತವಾಗಿ ನಲಿಕಲಿ ಟೇಬಲ್ಗಳು, ಚೇರುಗಳು, ಶಾಲಾ ಬ್ಯಾಗ್ಗಳು, ಟ್ರ್ಯಾಕ್ ಶೊಟ್ ಹಾಗು ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ನಾನು ಪ್ರಾಥಮಿಕ ವಿದ್ಯಾಬ್ಯಾಸವನ್ನು ಕೋಟಬಲ್ಲಪಲ್ಲಿ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದು, ನಂತರ ಪ್ರೌಡಶಿಕ್ಷಣ , ಪಿಯುಸಿ, ಪದವಿ, ಉನ್ನತ ಶಿಕ್ಷಣನ್ನು ಸಹ ಸರ್ಕಾರಿ ಕಾಲೇಜುಗಳಲ್ಲಿ ಓದಿದ್ದೇನೆ. ಈ ಮಟ್ಟಕ್ಕೆ ಬೆಳೆಯಲು ಸರ್ಕಾರಿ ಶಾಲೆಗಳ ಶಿಕ್ಷಕರು ಕಾರಣ . ಅಂದು ನಮ್ಮ ಕುಟುಂಬದ ಆರ್ಥಿಕವಾಗಿ ಹಿಂದುಳಿದಿತ್ತು ಆದರೂ ಜೀವನದ ಗುರಿಯನ್ನು ಮಟ್ಟುವ ಛಲದೊಂದಿಗೆ ನನ್ನ ವಿದ್ಯಾಬ್ಯಾಸವನ್ನ ಮಾಡಿದೆ . ಇಂದು ನನ್ನ ವಿದ್ಯಾಬ್ಯಾಸದಿಂದ ಸರ್ಕಾರಿ ಶಾಲೆಗಳಲ್ಲಿನ ಒಂದಿಷ್ಟು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಕಾರ ನೀಡುತ್ತಿದ್ದೇನೆ ಎಂದರು.
ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಕುಟುಂಬವು ಆರ್ಥಿಕವಾಗಿ ಹಿಂದುಳಿದಿರುತ್ತಾರೆ ಈ ಹಿನ್ನೆಲೆಯಲ್ಲಿ ಸುಮಾರು 50 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನನ್ನಿಂದ ಆಗುವ ಸಲಹೆ ಹಾಗೂ ಸಹಕಾರವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಕುಟುಂಬದ ಹಿನ್ನೆಲೆಯನ್ನು ಅರಿತು ಶೈಕ್ಷಣಿಕವಾಗಿ ಉನ್ನತ ಹುದ್ದೆಗಳನ್ನು ಪಡೆದು ನಿಮ್ಮನ್ನೆ ನಂಬಿರುವ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪುಲಗೂರಕೋಟೆ ಕ್ಲಸ್ಟರ್ನ ಸಿಆರ್ಪಿ ಶಿವರಾಘವರೆಡ್ಡಿ ಮಾತನಾಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಣವಂತರು ಬಡಮಕ್ಕಳನ್ನು ಶೈಕ್ಷಣಿಕ ಪ್ರಗತಿಯನ್ನು ಹೊಂದಲು ತಮ್ಮಿಂದಾಗುವ ಆರ್ಥಿಕ ಸಹಾಯ ಹಾಗು ಶಿಕ್ಷಣಕ್ಕೆ ಬೇಕಾದ ಸಾಮಾಗ್ರಿಗಳನ್ನು ಕೊಡುಗೆಯನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಪುಲಗೂರಕೋಟೆ, ಸೋಮಯಾಜಲಹಳ್ಳಿ, ಹಾಗು ಮುತ್ತಕಪಲ್ಲಿ ಕ್ಲಸ್ಟರ್ಗಳ ಪ್ರಾಥಮಿಕ ಶಾಲೆಗಳ 1250 ವಿದ್ಯಾರ್ಥಿಗಳಿಗೆ ನಲಿಕಲಿ ಟೇಬಲ್ಗಳು, ಚೇರುಗಳು, ಶಾಲಾ ಬ್ಯಾಗ್ಗಳು, ಟ್ರ್ಯಾಕ್ ಶೊಟ್ ಹಾಗು ನೋಟ್ ಪುಸ್ತಕಗಳನ್ನು ವಿತರಿಸಿದರು.
ಲಿಂಗಾಪುರ ಗ್ರಾಮದ ಮುಖಂಡರಾದ ಭದ್ರಪ್ಪ , ತೇಜ್ವನಿ ನಾಗರಾಜ್, ಶಾಲೆಯ ಮುಖ್ಯ ಶಿಕ್ಷಕ ಆನಂದ್ಕುಮಾರ್ , ಶಿಕ್ಷಕರಾದ ಕೋದಂಡರಾಮಯ್ಯ, ಎಂ.ಮೂರ್ತಿ, ಗ್ರಾಮದ ಮುಖಂಡ